Tuesday, April 19, 2011

ಸ್ಪಾರ್ಟನ್ನಿನ ಮಹಾವೀರರು... (ಭಾಗ-1)


        ಸ್ಪಾರ್ಟನ್ನರಲ್ಲಿ ಹುಟ್ಟಿದ ಪ್ರತಿ ಮಗುವು ಅಲ್ಲಿನ ಅನುಭವಸ್ತರ ಕೈಯಿಂದ ಪರೀಕ್ಷೆಗೊಳಪಡುತ್ತದೆ. ಅದಕ್ಕೆ ಯಾವುದೇ ಕಾಯಿಲೆ ಅಥವಾ ಅಂಗವೈಕಲ್ಯವಿದ್ದಲ್ಲಿ ಅಂಥ ಮಗು ಕ್ಷಣವೆ ಸಾಯಿಸಲ್ಪಡುತ್ತದೆ. ಮಗು ನಡೆಯುವುದಕ್ಕೆ ಪ್ರಾರಂಭಿಸಿದ ಮೊದಲಿನಿಂದ ಯಾವರೀತಿಯಲ್ಲಿ ಯುದ್ಧ ಮಾಡಬೇಕೆಂದು ಕಲಿಸುತ್ತಾರೆ. ಸೋಲೆ ಅವರಿಗೆ (ಚರಣು ಕೋರುವುದು) ಗೊತ್ತಿಲ್ಲದ ಮಾತುಗಳು. ಸ್ವದೇಶಕ್ಕೋಸ್ಕರ ಕಡೆಯ ಉಸಿರಿನವರೆಗೂ ಹೋರಾಡಿ ಯುದ್ಧರಂಗದಲ್ಲಿ ಪ್ರಾಣವನ್ನು ಅರ್ಪಿಸುವುದೆ ಅವರ ಏಕೈಕ ಉದ್ದೇಶ. ಮಗುವಿಗೆ ಏಳು ವರ್ಷ ತುಂಬಿದೊಡನೆಯೆ ಬಲವಂತವಾಗಿ ತಾಯಿಯಿಂದ ದೂರವಾಗಿಸಿ ಶಿಕ್ಷಣ ಅನ್ನೋ ಹೆಸರಿನೊಂದಿಗೆ ಒಂಟಿಯಾಗಿಸಿ ಕಾಡಿನಲ್ಲಿ ಬಿಟ್ಟುಬರುತ್ತಾರೆ. ಹುಟ್ಟಿದಾಗಿನಿಂದ ಇಂಥ ಭಯಂಕರವಾದ ಶಿಕ್ಷಣ ಪಡೆದು ಸ್ಪಾರ್ಟನ್ಸ್ ಪ್ರಪಂಚದಲ್ಲೇ  ಅತಿ ಉನ್ನತವಾದ ವೀರರೆಂದು ನಿರೂಪಿಸಿಕೊಳ್ಳುತ್ತಾರೆ.

        ಅಗೋಗಿ ಅನ್ನೋ ಶಿಕ್ಷಣವು ಒಬ್ಬ ಹುಡುಗನನ್ನು ಹುಚ್ಚುಕೋಪದ ಸ್ಥಿತಿಗೆ ಕೊಂಡೊಯ್ಯುತ್ತದೆ. ಹೊಟ್ಟೆಯಲ್ಲಿ ಹಸಿವಿನ ಕೂಗನ್ನು ಮೊಳಗಿಸುತ್ತದೆ. ಅಗತ್ಯವಾದರೆ ಕೊಲ್ಲುವಂಥ ಅಂಥಕ್ಕೂ ಕೊಂಡೊಯ್ಯುತ್ತದೆ. ಕೋಲಿನಿಂದ ಮತ್ತು ಚಾಟಿಯಿಂದ ಶಿಕ್ಷಣಕ್ಕೋಸ್ಕರ ಹುಡುಗ ತಿನ್ನೋ ಏಟುಗಳು, ನೋವು, ಬಾದೆಯನ್ನು ತೋರದಂತೆ ಅವನ ಶರೀರವು ಕಲ್ಲಿನಂತೆ ಜಡವಾಗುತ್ತದೆ. ಕಾಡಿನಲ್ಲಿ ಒಂಟಿಯಾಗಿ ಬಿಟ್ಟಂತಹ ಹುಡುಗನು ಪ್ರಕೃತಿಯ ವೈಪರೀತ್ಯಗಳನ್ನು ಕ್ರೂರ ಮೃಗಗಳನ್ನು ಎದುರಿಸುತ್ತಾನೆ. ಧೈರ್ಯ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇವುಗಳ ಸಹಾಯದಿಂದ ಸ್ವದೇಶಕ್ಕೆ ಪ್ರಾಣದೊಂದಿಗೆ ಮರಳಿ ಬಂದರೆ. ಅವನು ಸ್ಪಾರ್ಟನ್ ವೀರನಾಗುತ್ತಾನೆ. ಇಲ್ಲವಾದಲ್ಲಿ ಅಲ್ಲಿಯೇ ಪ್ರಾಣವನ್ನು ಕಳೆದುಕೊಳ್ಳುತ್ತಾನೆ.

       ನಯವಾದ ಕತ್ತಿಯಂತಹ ಉಗುರುಗಳೊಂದಿಗೆ ಕಾರ್ಗತ್ತಲಿನ ಬಣ್ಣದಲ್ಲಿ ಬೆಂಕಿಯಂತೆ ಉರಿಯುತ್ತಿರುವ ಕಣ್ಣುಗಳೊಂದಿಗೆ ಒಂದು ಕ್ರೂರ ತೋಳ, ಅವನ ಮೇಲೆ ದಾಳಿಗೆ ಸಿದ್ಧವಾಗುತ್ತದೆ. ಅದಕ್ಕೆ ಒಳ್ಳೆಯ ಭೋಜನ ಸಿಕ್ಕಿದೆ ಎಂದು ಸಂತೋಶದಿಂದ ಕೂಗಿಡುತ್ತ ಅವನ ಮೇಲೆ ದಾಳಿಮಾಡುತ್ತದೆ. ಭಯವೆಂದರೆ ಏನೆಂಬುದನ್ನೇ ಅರಿಯದ ಅವನ ಮನಸ್ಸಿನಲ್ಲಿ ಈಗಿರುವ ಏಕೈಕ (ಲಕ್ಷೆ) ಉದ್ಧೇಶವೆಂದರೆ ಶತ್ರುವನ್ನು ಗೆಲ್ಲುವುದು ಮಾತ್ರವೆ. ಮಂಜು ಸುರಿಯುವ ವೇಳೆ... ಸರ್ವೆ ಮರಗಳ ಶಬ್ಧ.. ಕೈಯಲ್ಲಿ ಇರುವ ಸಣ್ಣ ಕೋಲಿನಂತಹ ಆಯುಧದೊಂದಿಗೆ ಆ ತೋಳದ ಕುತ್ತಿಗೆಗೆ ತಿವಿದು ಕೊಂದು ಹಾಕುತ್ತಾನೆ. ಶಿಕ್ಷಣದಲ್ಲಿ ಗೆದ್ದು ವೀರನಾಗಿ ಪ್ರಾಣದೊಂದಿಗೆ ಮರಳಿಬಂದರೆ ಆ ಹುಡುಗ ಆ ದೇಶಕ್ಕೆ ಮಹಾ ರಾಜನಾಗುತ್ತಾನೆ. ಅವನೇ ರಾಜ ಲಿಯೋನೈಡರ್ಸ್..

        ಮಹಾರಾಜ ಲಿಯೋನೈಡರ್ಸ್ ತನ್ನ ಸಿಂಹದಂತ ಕಂಠವನ್ನು ಬಳಸಿ ಸ್ಪಾರ್ಟಾದ ಪ್ರಜೆಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾನೆ....  
"ನಾನು ಆ ಕ್ರೂರ ಮೃಗವನ್ನು ಕೊಂದು ಮೂವ್ವತ್ತು ವರ್ಷಗಳು ಕಳೆದಿವೆ....
ಆದರೆ ಈ ದಿನ ಅದಕ್ಕಿಂತ ಭಯಂಕರ ಮೃಗವೊಂದು ನಮ್ಮನ್ನು ಎದುರಿಸಲು ಬರುತ್ತಿದೆ.... 
ಅದನ್ನು ನಾವು ಉಪಾಯದಿಂದ ಗೆಲ್ಲಬೇಕು.... 
ನಾನು ಮೃಗವೆಂದು ಹೇಳಿದ್ದು ಭಯಂಕರವಾದ ಕ್ರೂರ ಗುಣಗಳಿಂದ ಕೂಡಿದ ಮನುಷ್ಯರನ್ನ....
ದಾರುಣವಾದ ಆಯುಧಗಳನ್ನು ಮಾಡಿಟ್ಟುಕೊಂಡವರನ್ನ.... 
ಗುಲಾಮರೊಂದಿಗೆ ಮತ್ತು ಸೇನೆಯಿಂದ ಕೂಡಿರುವ ಧಳವೊಂದು ನಮ್ಮ ಮೇಲೆ ದಾಳಿಗೆ ಸಿದ್ಧವಾಗುತ್ತಿದೆ.... ಅವರು ಎಂತವರಾದರೂ ಸರಿ ನಮ್ಮ ಏಕೈಕ ಉದ್ಧೇಶ ಈ ಯದ್ಧದಲ್ಲಿ ಶತ್ರುಗಳನ್ನು ಗೆಲ್ಲುವುದು ಮಾತ್ರವೆ.... 
ಆ ಧಳ ಆದಷ್ಟು ಬೇಗ ನಮ್ಮ ರಾಜ್ಯದತ್ತ ಪ್ರವೇಶಿಸುತ್ತದೆ"....

(ಅನುವಾದಿಸುತ್ತಿರುವ ಕಥೆ)    ಮುಂದುವರೆಯುವುದು.

4 comments:

Pradeep Rao said...

ಅಬ್ಬಬ್ಬಾ! ತುಂಬಾ ಘೋರವಾಗಿದೆ.. ಇದು ಯಾವ ದೇಶದ ಕಥೆ ವಸಂತ್?? ನಿರೂಪಣೆ ಇಷ್ಟವಾಯಿತು. ಅನುವಾದ ಚೆನ್ನಾಗಿದೆ.

ವಿಚಲಿತ... said...

Munduvaresi..

ವಸಂತ್ said...

ತುಂಬ ಧನ್ಯವಾದಗಳು ವಿಚಲಿತರವರೆ....

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು.. ಇದು ಗ್ರೀಕ್ ನ ಸ್ಪಾರ್ಟ ದೇಶದ ಕಥೆ ಪ್ರದೀಪ್ ...