Tuesday, April 12, 2011

ಒಂದು ಸಣ್ಣ ದೀಪವನ್ನಾದರೂ ಉರಿಸಿಹೋಗು…


ನನ್ನ ಮನದಾಳದ ಕೆಲವು ಮಾತುಗಳನ್ನು
ನಿನಗೆ ಪತ್ರವಾಗಿ ಬರೆಯಲೆತ್ನಿಸಿದ್ದೇನೆ ಗೆಳತಿ,
ಕೋಪಗೊಳ್ಳದೆ ನೆಮ್ಮದಿಯಿಂದ ಓದಿ ಮುಗಿಸುತ್ತೀಯ
ಎಂಬ ಧೃಡ ಸಂಕಲ್ಪವನ್ನಿಟ್ಟುಕೊಂಡು..

ನಾನೇನು ದೊಡ್ಡ ಬರಹಗಾರನಲ್ಲ,
ಅದಕ್ಕೂ ಮುನ್ನ ನಾ ಕವಿಯಂತೂ ಅಲ್ಲ,
ನನ್ನ ಮನದ ನೋವನ್ನು ಕೇವಲ
ಸಾಲುಗಳಾಗಿ ಬಿಡಿಸಲೆತ್ನಿಸಿದ್ದೇನೆ..

ನನಗೆ ನೀ ಗಗನ ಕುಸುಮವೆಂದೆನಿಸಿದ್ದರೂ
ಬರವಸೆಯ ಬೆಳಕನ್ನು ಕಾಣುತ್ತಿದ್ದೆ,
ಆಳ ಸಮುದ್ರದಲ್ಲಿನ ಮುತ್ತಿಗೆ
ಆಸೆ ಪಡಬಾರದಿತ್ತು.
ಆದರೆ ನನ್ನ ಮೂಡ ಮನಸ್ಸಿಗೆ
ಇದರ ಅರಿವಾಗಲಿಲ್ಲ..

ನಾ ದಿನ ಕಾಣುತ್ತಿದ್ದ ಪ್ರತಿ ಕನಸು
ನಿನ್ನದೇ ಆಗಿತ್ತು.
ನನ್ನ ಹೃದಯದ ಪ್ರತಿ ಮಿಡಿತವು
ನೀನೆ ತುಂಬಿಕೊಂಡಿದ್ದೆ.
ಇದು ಪ್ರೀತಿಯೋ ಮೋಹವೋ
ನನಗಂತೂ ತಿಳಿದಿರಲಿಲ್ಲ..

ನನ್ನೆದುರು ನೀ ನಾಚಿ ಓಡುತ್ತಿದ್ದಾಗ
ನನ್ನಂಥರಂಗದಲ್ಲಿ ನಿನ್ನದೇ ಚಿತ್ರವನ್ನು ಬಿಡಿಸುತ್ತಿದ್ದೆ.
ನಿನ್ನ ಮೌನಕ್ಕೊಂದು ಕವನವನ್ನು ಬರೆಯಲೆತ್ನಿಸುತ್ತ
ನಾನು ಒಬ್ಬ ಚಿತ್ರಗಾರನಂತೆ
ಕಲ್ಪನೆಯ ಲೋಕದ ಕವಿಯಂತೆ
ನಿನ್ನನ್ನು ಬಣ್ಣಿಸಲೆತ್ನಿಸುತ್ತಿದ್ದೆ..

ನೀ ನನ್ನ ಇಷ್ಟಪಡುತ್ತಿದ್ದೆ ಎನ್ನುವುದಕ್ಕೆ
ನಿನ್ನ ನಾಚಿಕೆಯನ್ನೊಮ್ಮೆ ಕೇಳಿನೋಡು.
ನಿನ್ನ ಮುಂಗುರುಳಿನ ನರ್ತನವೊಮ್ಮೆ  ಕೇಳು.
ನಮ್ಮಿಬ್ಬರನ್ನೂ ಒಟ್ಟು ಗೂಡಿಸುತ್ತಿದ್ದ
ಬೆಳದಿಂಗಳ ರಾತ್ರಿಯನ್ನೊಮ್ಮೆ ಕೇಳಿತಿಳಿದುಕೊ..

ತಂಗಾಳಿಯಾಗಬೇಕಿದ್ದ ನೀನು
ಬಿರುಗಾಳಿಯಾಗಿ ನನ್ನ ಹೃದಯಕ್ಕೆ ಬಡಿದಾಗ
ನಾನೇನು ಮಾಡಲಾಗಲಿಲ್ಲ..
ನಾ ಕಟ್ಟುತ್ತಿದ್ದ ಕನಸಿನ ಮನೆಯನ್ನು
ಚಿದ್ರ ಚಿದ್ರ ಮಾಡಿ ನನ್ನ ಕಣ್ಣೆದುರೆ ಉರುಳಿಸಿಬಿಟ್ಟೆ..

ಏನು ಮಾಡಲಿ ನಾ ಅಸಹಾಯಕ
ನೀ ಗಗನ ಕುಸುಮವೆಂಬುದರ ಅರಿವು
ತಡವಾಗಿಯಾದರೂ ಅರಿವಾಯಿತು.
ನಾ ಇಷ್ಟೂ ದಿನ ಬಿರುಗಾಳಿಯ ಜೊತೆ
ಸ್ನೇಹಕ್ಕೆ ಅಂಗಲಾಚಿದೆನಾ ಎಂಬ ಕೊರಗು 
ನನ್ನಲ್ಲಿ ಪರಿ ಪರಿಯಾಗಿ ಕಾಡುತ್ತಿದೆ..

ನನ್ನ ಜಡವಾದ ಮನಸ್ಸಿನಲ್ಲಿ ಕೆಲವು ನೆನಪುಗಳು
ನಿನ್ನನ್ನು ಈಗಲೂ ಬಯಸಲೆತ್ನಿಸುತ್ತವೆ..
ಕಡೆಗೆ ನೀ ಬೆಳಕಾಗಿ ಕಾಣಲಿಲ್ಲ
ಕಾರ್ಗತ್ತಲ ಕೋಟೆಯೊಳಗೆ ನನ್ನನ್ನು
ಒಂಟಿಯಾಗಿಸಿ ಹೊರಟುಹೋದೆ..

ಏನೂ ಕಾಣದ ಕತ್ತಲೊಳು
ಬೆಳದಿಂಗಳನ್ನು ಹುಡುಕಲೇತ್ನಿಸುತ್ತಿದ್ದೇನೆ..
ಈ ಕತ್ತಲಂತೂ ಸರಿದುಹೋಗುವ ಲಕ್ಷಣವೇ ಕಾಣುತ್ತಿಲ್ಲ.
ನೀ ಚಂದ್ರನ ಬೆಳಕಾಗಬೇಕಿಲ್ಲ ಗೆಳತಿ
ನನ್ನ ಹೃದಯದ ಬಯಲಲ್ಲಿ
ಒಂದು ಸಣ್ಣ ದೀಪವನ್ನಾದರೂ ಉರಿಸಿಹೋಗು…

                                                                 ವಸಂತ್

ಚಿತ್ರಕೃಪೆ. http://buy-online-shopping-mall.com

7 comments:

anu said...

manasinda moodida bhavanegala, kavitheya saalugalu chennagide. naachi odutidda & mungurula wrd.... plus point :) nanagansiddu.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ತುಂಬ ಧನ್ಯವಾದಗಳು ಅನುರವರೆ.

sunaath said...

ಹೌದು, ವಸಂತ. ದೀಪ ಸಣ್ಣದೇ ಆದರೂ, ಅದರ ಬೆಳಕು ಆಪ್ಯಾಯಮಾನವಾದದ್ದು, ಅಲ್ಲವೆ?

Pradeep Rao said...

ಭಾವನೆಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿವೆ ವಸಂತ್.

ಖುಶಿ ನೀಡಿತು.. ಹೀಗೆ ಬರೆಯುತ್ತಿರಿ.

ಕನಸು ಕಂಗಳ ಹುಡುಗ said...

ಅವಳಿಗೇನೋ ತುರ್ತು ಕೆಲಸವಿರಬೇಕು ಹೋಗಿದ್ದಾಳೆ...
ಹೋಗುವ ಗಡಿಬಿಡಿಯಲ್ಲಿ ಏನೇನೋ ಮರ್ತಿದಾಳೆ...
ನೆನಪಾದ ತಕ್ಷಣ ಬಂದೇ ಬರ್ತಾಳೆ.

ಚನ್ನಾಗಿದೆ ಓಲೆ..

ashokkodlady said...

Vasanth,

manassina bhavanegalannu sundra saalugalalli sogasaagi jodisiddiri..All the best.....

ವಿಚಲಿತ... said...

Saalugalu sogasaagive..
Allalli vyaakarana tappaagide,saripadisikolliri..