Saturday, May 28, 2011

ಅವಳು ಕನಸಾಗುತ್ತಿದ್ದಾಳಂತೆ.....ಮುಂಜಾವಿನ ತಂಪೊತ್ತು
ಮನಸ್ಸು ಮೈ ಮರೆತು ನಿದ್ರಿಸುತ್ತಿದೆ
ಹತಾಶೆ ನಿಟ್ಟುಸಿರು
ಗೌಜು ಗದ್ದಲಗಳು ಸದ್ದುಮಾಡದೆ
ಬೆಚ್ಚಗೆ ಕನಸಾಗುತ್ತಿವೆ.

ಕೌಸಲ್ಯೆಯ ಸುಪ್ರಜರ
ಸಂಗೀತ ಕಛೇರಿ ನಡೆಯುತ್ತಿದೆ
ಮಡಿವಂತರು ಬಡಬಡಿಸುತ್ತ
ಮಾತಿನ ಕೊಳದಲ್ಲಿ ಮುಳುಗಿ ತೇಲುತ್ತಿದ್ದಾರೆ.

ಕೈಗಾಡಿಗಳು ತಕ್ಕಡಿಗಳಲ್ಲಿ
ಪದಾರ್ಥಗಳನ್ನಿಟ್ಟು ಮಾರಿಕೊಳ್ಳುತ್ತಿವೆ
ಹಾಲಿನವನ ಆರ್ಭಟ
ಕೋಗಿಲೆಯನ್ನು ನಾಚಿಸುತ್ತಿದೆ.
ಪೇಪರಿನವ ಬಯಕೆಗಳನ್ನು
ಭಾವನೆಗಳನ್ನು ಕನಸುಗಳನ್ನು
ಮನೆಯಂಗಳದಲ್ಲಿ ಮಡಚಿ ಎಸೆದಿದ್ದಾನೆ.

ರಸ್ತೆಯ ತುಂಬೆಲ್ಲ ಗುಲ್ಮೊಹರ್ ಹೂಗಳು
ರಂಗೋಲಿ ಬಿಡಿಸುತ್ತಿವೆ.
ಗುಯ್ ಗುಟ್ಟುವ ಶಬ್ಧಗಳು
ಅರ್ಧಂಬರ್ಧ ಮಾನ ಕಳೆದುಕೊಂಡ
ವಾಹನಗಳು ಮೈಮುಚ್ಚಿಕೊಂಡು
ಕಂಡು ಕಾಣದಂತೆ ಮರೆಯಾಗುತ್ತಿವೆ
ಕಾಣದ ಕೈಗಳು ಲಂಚಕ್ಕಾಗಿ ನಾಲಿಗೆ ಚಾಚುತ್ತಿವೆ.
ದೌರ್ಭಾಗ್ಯದ ಎರಡು ಕೈಗಳು
ಕಂಡ ಕಂಡವರಲ್ಲಿ ಅಂಗಲಾಚುತ್ತಿವೆ.

ದೂರದ ಕಾರ್ಖಾನೆಯೊಂದರಲ್ಲಿ
ಸೈರನ್ನಿನ ಸದ್ದು ಮೊಳಗುತ್ತಿದೆ
ಚಪ್ಪಲಿ, ಕೊಡೆ, ಚೀಲ
ಚದರಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ
ಮೂಳೆ ಹಂದರಗಳು
ಅತ್ತಕಡೆ ಪಯಣ ಬೆಳೆಸಿವೆ.
ಅವುಗಳನ್ನು ಉತ್ತರಿಸಲಾಗದ ಪ್ರಶ್ನೆಗಳು
ಬೆನ್ನಟ್ಟಿವೆ.

ಬುದ್ಧ, ಬಸವ, ಅಲ್ಲಮರು
ಯಾವುದೋ ಯೋಚನೆಯಲ್ಲಿ ಮುಳುಗಿದ್ದಾರೆ
ಗಾಂಧಿ ಮೌನವಾಗಿ ಬಾಬರು
ಮಣಭಾರದ ಪುಸ್ತಕವೊಂದನ್ನು ತೆರೆದು
ಅಲ್ಲಲ್ಲಿ ಅಂಟಿಸಿರುವ ಕಪ್ಪು ಮಸಿ
ಕಲೆಗಳನ್ನು ತೆರವುಗೊಳಿಸುತ್ತಿದ್ದಾರೆ.

ಒಂದಿಷ್ಟು ಗಲಾಟೆ
ಲಾಠಿ ಬೂಟುಗಳ ಟಪ ಟಪ
ಕೋವಿಯ ಗರ್ಜನೆ
ಅಲ್ಲಿ ಹೆಣವೊಂದು ಅನಾತವಾಗಿ ಬಿದ್ದಿದೆ

ಇದೇ ಸ್ಥಳದಲ್ಲಿ 
ರಾಜಕೀಯ ಸಮಾವೇಶವೊಂದರ
ತಾಲೀಮೂ ನಡೆಯಲಿದೆಯಂತೆ
ಆಶ್ವಾಸನೆಗಳ ಮುಖಗಳು
ಬರವಸೆಯ ಕೈಬೆರಳುಗಳು 
ಆಶೆ ಆಮೀಶಗಳ ಸ್ವರ್ಶಗಳು
ಬಡವನ ಬೆನ್ನು ತಟ್ಟಲಿವೆಯಂತೆ.

ಅವಳ ದಾರಿಯಲ್ಲಿ ದೀಪಗಳು
ಸದಾ ಕಪ್ಪಾಗಿ ಉರಿಯುತ್ತವೆ
ಚುಕ್ಕಿಗಳು ಬಣ್ಣ ಕಳೆದುಕೊಂಡಿವೆ
ಚಂದ್ರ ಮೋಡಗಳ ಮರೆಯಲ್ಲಿ ಕುಳಿತಿದ್ದಾನೆ
ಸೂರ್ಯ ಮಂಕಾಗಿದ್ದಾನೆ.

ಕಿಟಕಿಯ ಸಂದಿಯಿಂದ
ಕಿರಣಗಳು ಮನೆಯೊಳಗೆ ಇಣುಕಿದರೂ
ಅವಳಿಗೆ ಇನ್ನೂ ರಾತ್ರಿಯ ಅನುಭವಂತೆ
ಕತ್ತಲಿಗೆ ಬೆಳಕ ದೀಪ ಹಚ್ಚಬೇಕಿದೆಯಂತೆ
ಬೆಳಕ ಮೂಡುಸುವ ಸಂಭ್ರಮಕ್ಕಾಗಿ
ಹಗಲಿನಲ್ಲಿ ಕನಸಾಗುತ್ತಿದ್ದಾಳಂತೆ..

                                                                                                         ವಸಂತ್ 

ಚಿತ್ರಕೃಪೆ.http://kadrip.files.wordpress.com

Friday, May 27, 2011

ಗಾಡ ಕತ್ತಲೆಡೆಗೆ ಪಯಣಿಸುತ್ತ....


ಆಗಸ ಕಪ್ಪಾಗಿದೆ
ಅಲ್ಲಲ್ಲಿ ಅಂಟಿಕೊಂಡಿರುವ 
ಕೆಂಪು ಬಣ್ಣದ ಕಲೆಗಳು
ಏನನ್ನೋ ಯೋಚಿಸುತ್ತಿವೆ.

ಗಾಳಿ ಬೀಸಿ ಬೀಸಿ
ದಣಿವಾರಿಸಿಕೊಳ್ಳುತ್ತದೆ
ಮೋಡಗಳಿಗೆ
ನಿದ್ರೆಯ ಜೋಪಂತ್ತಿದೆ.

ಆ ಕಪ್ಪು ಹುಡುಗನ 
ಕೈಯಲ್ಲಿ ಯಾವುದೋ
ವಸ್ತುವೊಂದು ಮಿಡಿಯುತ್ತಿದೆ.
ರಕ್ತವನ್ನು ಕಣ್ಣೀರಿನಂತೆ 
ಸುರಿಸುತ್ತ ಅವನನ್ನೇ 
ಪ್ರಶ್ನೆ ಕೇಳುತ್ತಿದೆ.

ನಾನ್ಯಾವ ತಪ್ಪು ಮಾಡಿದೆ ?
ನನ್ಯಾಕೆ ಕಿತ್ತು ಕೈಯಲ್ಲಿ ಹಿಡಿದಿರುವೆ ?
ನಾ ಸುಮ್ಮನಾದರೆ
ನಿನ್ನ ಗತಿಯೇನು ?

ಹುಡುಗ ಮಾತನಾಡುತ್ತಿಲ್ಲ.
ಅವನು ಮಂಕಾಗಿದ್ದಾನೆ.
ಅವನು ಮೂಕನಾಗಿದ್ದಾನೆ.
ಅವನು ಮೌನವಾಗಿದ್ದಾನೆ.

ಅವನ ಕಣ್ಣುಗಳು ಆಳಕ್ಕಿಳಿದಿವೆ
ಅವುಗಳು ಹನಿಗೂಡುತ್ತಿವೆ
ಕತ್ತಲು ನಿಧಾನವಾಗಿ ಚಲಿಸುತ್ತ
ಹಂತ ಹಂತವಾಗಿ ಅವನನ್ನು
ತನ್ನೊಳಗೆ ತುಂಬಿಕೊಳ್ಳುತ್ತಿದೆ.

                                                                 ವಸಂತ್

ನಾಳೆಗಳ ಚಿಂತೆ...


ನೆನ್ನೆಯನು ನಾಳೆಯನಾಗಿಸಿ
ನಾಳೆಯನು ದಿನವಾಗಿಸಿ
ದಿನವನ್ನು ಕ್ಷಣವಾಗಿಸುತ್ತಿರುವೆ
ಈ ಸಮಯಕ್ಕೋ !
ಒಂದು ಕ್ಷಣವೂ ಪುರುಸೊತ್ತಿಲ್ಲ
ಸ್ವಲ್ಪವಾದರೂ ಬಚ್ಚಿಡಬೇಕೆಂಬ
ಬಯಕೆ ನನಗೆ..

ಮೋಡಗಳು ರೆಕ್ಕೆ ಕಟ್ಟಿಕೊಂಡು
ಹಾರುತಿವೆ.
ಕೋಲ್ಮಂಚು ಮಿರ ಮಿರ ಮಿನುಗುತ್ತಿದೆ
ಕೆಂಡ ಧಗ ಧಗಿಸಿ ಹೊಳೆಯುತ್ತಿದೆ
ಗಾಳಿ ಬೀಸಿ ಬೀಸಿ ಬೇಸತ್ತಿದೆ
ಬಹುಶಃ ಇವುಗಳಿಗೂ
ನಾಳೆಗಳ ಚಿಂತೆಗಳಿದ್ದಿರಬೇಕು.

ಆ ಕಪ್ಪು ಬಣ್ಣದ ಹುಡುಗಿ
ಆಗಸವನ್ನೇ ದಿಟ್ಟಿಸಿ ನಿಂತಿದ್ದಾಳೆ
ಕ್ಷಣಗಳನು ಜರೆಯುತ್ತ.
ನೆನ್ನೆಗಳನು ಬಯ್ಯುತ್ತ .
ನಾಳೆಗಳನು ನಿಂದಿಸುತ್ತ.
ಬೆಳದಿಂಗಳಿಗಾಗಿ ಕಾಯುತ್ತಿದ್ದಾಳೆ
ಬಹುಶಃ ಇವಳಿಗೆ ಗೊತ್ತಿಲ್ಲವೇನೊ?
ಈ ದಿನ ಅಮಾವಾಸ್ಯೆಯೆಂದು.

ಹೇಳೋಣವೆಂದರೆ
ಆ ಪುಟ್ಟ ಗುಡಿಸಲಲ್ಲಿ
ದೀಪವಾಗಿದ್ದಾಳೆ
ಸಣ್ಣಗೆ ಉರಿಯುತ್ತ ದಿನ ಕಳೆಯುತ್ತಿದ್ದಾಳೆ
ಬಹುಶಃ ಇವಳಿಗೆ ನನ್ನ ಹಾಗೆ
ನಾಳೆಗಳ ಬಗ್ಗೆ ಚಿಂತೆಯಿದ್ದಂತಿಲ್ಲ..

                                                   ವಸಂತ್

Friday, May 13, 2011

ನನ್ನಿಂದಂತೂ ಸಾಧ್ಯವೇ ಇಲ್ಲ..


ಈ ದಾರಿ ತುಂಬಾ ಉದ್ದವಿರುವಂತಿದೆ
ಎಷ್ಟು ನಡೆದರೂ ಹೆಜ್ಜೆಗಳೇ ಮೂಡುತ್ತಿಲ್ಲ
ನಡೆದು ನಡೆದು ದಣಿದ ಪಾದಗಳು
ಬಿಳಿಚಿಕೊಂಡ ಮುಖ 
ಸುಕ್ಕುಗಟ್ಟಿದೆ ಚರ್ಮ ಬಾಗಿದ ಬೆನ್ನನ್ನೊತ್ತು
ನನ್ನಿಂದಂತೂ ನಡೆಯಲು ಸಾಧ್ಯವೇ ಇಲ್ಲ..

ಹಿಂದೆ ತಿರುಗಿ ನೋಡುತ್ತೇನೆ
ಆಸರೆಯ ಕೈಬೆರಳುಗಳೇನಾದರೂ
ಸ್ವರ್ಶಿಸಬಹುದೇ ಎಂದು..

ಕೆಲವು ಬೆನ್ನುಗಳು ಮಾತಾಡುತ್ತಿವೆ
ಮುಸಿ ಮುಸಿ ನಗುತ್ತ
“ನಿನ್ನ ಚಿನ್ನದ ಚಮಚ”
“ಬೆಳ್ಳಿಯ ತಟ್ಟೆ”
“ಹೊನ್ನಿನ ಮಂಚ”
ಯಾವುದೂ ನಿನ್ನ ಜೊತೆಗೆ ಬರಲ್ಲಿಲ್ಲವೇನು ?..

ನನ್ನ ಬಿಟ್ಟು ಬೇರಾರು 
ನನ್ನ ಹಿಂಬಾಲಿಸಲಿಲ್ಲ.
ಯಾವ ಭೋಗ ಭಾಗ್ಯವೂ
ನನ್ನ ದಾರಿಯನು ಸುಗಮಗೊಳಿಸಲಿಲ್ಲ
ಮನಸ್ಸು ಮಂಕಾಗುತ್ತಿದೆ
ದಾರಿ ಮಂಜಾಗುತ್ತಿದೆ
ಪಾದಗಳು ಸೋಲುತ್ತಿವೆ..

ಈ ದಾರಿ ತುಂಬಾ ಉದ್ದವಿದೆ
ನನ್ನಿಂದಂತೂ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ
ಅಗೋ ಅ ಆಳವಾದ ಗುಣಿಯಲ್ಲಾದರೂ
ಮಲಗಿ ವಿಶ್ರಾಂತಿ ಪಡೆಯಲೆತ್ನಿಸುತ್ತೇನೆ
ಮುಂದೆ ಒಂದೆಜ್ಜೆಯಿಡುವುದಕ್ಕೂ ನನ್ನಿಂದ ಸಾಧ್ಯವೇ ಇಲ್ಲ..

                                                                ವಸಂತ್ 

ನಿಮ್ಮ ಬರುವಿಕೆಗೆ ನನದೇನು ತಗಾದೆಯಿಲ್ಲ..

ಓ ಗುಡುಗೆ ನಿನ್ಯಾಕೆ ಗುಡುಗಾಡುತ್ತಿ
ಹೇ ಮಳೆಯೆ ನಿನ್ಯಾಕೆ ಹನಿಯಾಗುತ್ತಿ
ಓ ಗಾಳಿಯೆ ನಿನ್ಯಾಕೆ ತಂಪಾಗಿ ಅವಳ ಸುತ್ತುತ್ತಿ
ಇದಾವುದು ಅವಳಿಗೆ ಹಿಡಿಸುವುದಿಲ್ಲ..

ನನ್ನ ಹೃದಯನ್ನೇ ಹೂವಾಗಿಸಿ
ಅವಳ ಕೈಯಲ್ಲಿ ಇರಿಸಿದ್ದೆ
ಅವಳ ಮುಡಿಯಲ್ಲಿ ಅದನು ಅರಳಿಸಲಿಲ್ಲ
ಕಾಮನ ಬಿಲ್ಲಿಗೆ ಜೋತು ಬಿದ್ದಿದೆ
ಅವಳ ಮನಸ್ಸು
ಯಾರ ಮಾತುಗಳೂ ಅವಳಿಗೆ ಕೇಳಿಸದು..

ಅವಳ ಕಾಲು ಗೆಜ್ಜೆ  
ಕೈ ಬಳೆಗಳೂ ಸಹ
ಸದ್ದು ಮಾಡದೆ ಸುಮ್ಮನಾಗಿವೆ
ಅವಳ ಮುಂಗುರುಳು ಬಾಗುವುದಿಲ್ಲ
ಅವಳ ಮೌನ ಮಾತಾಡುವುದಿಲ್ಲ..

ಹಲವಾರು ಬಾರಿ ಕನಸಾದೆ
ಕವನವಾದೆ ಕಥೆಯಾದರೂ
ಇದಾವುದನ್ನೂ ಅವಳು ಲೆಕ್ಕಿಸಲೇ ಇಲ್ಲ..

ಕೂಗೋ ಕೋಗಿಲೆಗೆ ಹೇಳಿದೆ
ನಿನ್ನ ಧನಿಗೆ ಇಲ್ಲಿ ಬೆಲೆಯಿಲ್ಲವೆಂದು
ನವಿಲಿಗೆ ತಾನೆ ಹೇಳುವುದಾದರೂ ಏನು
ನಿನ್ನ ನಾಟ್ಯಕ್ಕೆ ತಕ್ಕ ನೆಲವಿದಲ್ಲವೆಂದೆ..

ಈಗವಳು ಕನಸ ಕಾಣುತ್ತಾಳೆ
ಇಂದ್ರ ಲೋಕದ ದೇವೆಂದ್ರನು
ಚಂದ್ರನಗಿಂತ ಎಷ್ಟೊಂದು ಸೊಗಸುಗಾರನೆಂದು..
ಬನ್ನಿ ಬನ್ನಿ ನಿಮ್ಮ ಬರುವಿಕೆಗೆ
ನನದ್ಯಾವ ತಗಾದೆಯೂ ಇಲ್ಲ...

                                                              ವಸಂತ್ 


Friday, May 6, 2011

ಸ್ಪಾರ್ಟನ್ನಿನ ಮಹಾವೀರರು... (ಭಾಗ-4)


      ಎತ್ತರವಾದ ತುಂಬ ನುಣುಪಾದ ಬಂಡೆಗಲ್ಲಿನ ಹಾದಿ. ಅದರಿಂದ ಮುಂದೆ ಸಾಗಿದರೆ ಭೃಹತ್ ಗ್ರಾತದ ಕಲ್ಲಿನಿಂದ ನಿರ್ಮಿಸಿದ ದೇವಾಲಯವನ್ನು ಪ್ರವೇಶಿಸಬಹುದು ಸ್ಪಾರ್ಟ ದೇಶದ ಮಹಾರಾಜರು ಮಾತ್ರ ಅನುಮತಿಯನ್ನು ಕೇಳುವುದಕ್ಕೆ  ಆ ದೇವಾಲಯಕ್ಕೆ ಬೇಟಿಕೊಡುತ್ತಿದ್ದರು. ಈ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಬೆಂಕಿಯ ಪಂಜನಿಡಿದು ಮಹಾರಾಜರನ್ನು ಈಪೂರ್ಸ್ ವೆಕ್ತಿಗಳು ಬರಮಾಡಿಕೊಳ್ಳುತ್ತದ್ದರು. ಇವರು ಮಾನವ ಲಕ್ಷಣಗಳು ಮತ್ತು ಮೃಗ ಲಕ್ಷಣಗಳಿಂದ ಕೂಡಿದ ವಿಕೃತ ರೂಪದ ವೆಕ್ತಿಗಗಳಾಗಿರುತ್ತಾರೆ. ಇವರನ್ನು ಸ್ಪಾರ್ಟ ದೇಶದ ಜನ ಈಪೂರ್ಸ್ ಸಮೂಹವೆಂದು ಕರೆಯುತ್ತಾರೆ. ಬಹಳ ಹಿಂದಿನಿಂದಲು ಇಲ್ಲಿನ ಜನತೆಗೆ ಇವರು ದೇವರ ಅನುಗ್ರಹ ಪಡೆದವರೆಂದು ನಂಬಿಕೆಯನ್ನಿಟ್ಟುಕೊಂಡಿದ್ದರು. ಮಹಾರಾಜ  ಮೂಲಕವೇ ಲಂಚ ಕೊಡುವಂತೆ ಪ್ರಾದೇಯಪಡುತ್ತ ತಮ್ಮ ಆಕಾಕ್ಷೆಗಳನ್ನು ಪೂರೈಸಿಕೊಳ್ಳುತ್ತಿದ್ದರು. ಈಪೂರ್ಸ್ ರವರ ಅನುಮತಿ ಎಂಬ ಪದವು ಇಲ್ಲದೆ ಇಲ್ಲಿಯವರೆಗೂ ಯಾರೊಬ್ಬ ಸ್ಪಾರ್ಟನ್ಸ್ ಮಹಾರಾಜನು ಯುದ್ದಕ್ಕೆ ಹೋದ ಪ್ರಸಂಗಗಳೇ ಕಂಡು ಬರುವುದಿಲ್ಲ.

       ಮಹಾರಾಜ ದೀರ್ಘವಾಗಿ ಯೋಚಿಸುತ್ತ ಮುಂದೆ ನಡೆಯಲಿರುವ ಯುದ್ದದ ಭೀಕರತೆ ಮತ್ತು ಶತ್ರುಗಳ ದಾಳಿಯ ಬಗ್ಗೆ ಈಪೂರ್ಸ್ ವಿಕೃತ ವೆಕ್ತಿಗಳಿಗೆ ಸುಲಲಿತವಾಗಿ ವಿವರಿಸುತ್ತಾನೆ. “ಪಾರಸೀಯರು ಅತಿ ದೊಡ್ಡ ಸೈನ್ಯವನ್ನು ಸಿದ್ದಮಾಡಿದ್ದಾರೆಂಬ ಸುದ್ದಿ ಬಂದಿದೆ. ಒಂದು ವೇಳೆ ಅದೇನಾದರು ನಿಜವಾದರೆ ಚರಿತ್ರೆಯಲ್ಲಿ ಇಲ್ಲಿಯ ತನಕ ಹಿಂದೆಂದೂ ನೋಡದಂತ ಯುದ್ದವನ್ನು ಕಾಣಬೇಕಾಗುತ್ತದೆ ಎನ್ನುವುದು ಕಟು ಸತ್ಯ”.

       ವಿಕೃತ ವೆಕ್ತಿ ಮಹಾರಾಜರನ್ನು ಅಪೇಕ್ಷೆ ಪಡುವ ರೀತಿಯಲ್ಲಿ. “ನೀನು ನಿನ್ನ ಯೋಜನೆಯನ್ನು ತಿಳಿಸುವ ಮುನ್ನ ನಮಗೇನು ಕೋಡುತ್ತೀಯೆಂದು ಮೊದಲು ತಿಳಿಸು” ?. ಲಿಯೋನೈಡರ್ಸ್ ತನ್ನೊಂದಿಗೆ ಕೊಂಡೊಯ್ದಿದ್ದ ಚೀಲವೊಂದನ್ನು ಅವರ ಮುಂದೆ ಎಸೆಯುತ್ತಾನೆ. ಎಸೆದ ರಭಸಕ್ಕೆ ಅದರೊಳಗಿದ್ದ ಬಂಗಾರದ ನಾಣ್ಯಗಳು ಅವರ ಕಾಲಿನ ಬಳಿ ಚೆಲ್ಲಾ ಪಿಲ್ಲಿಯಾಗಿ ಬೀಳುತ್ತವೆ. ಅದನ್ನು ಕಂಡ ವಿಕೃತ ವೆಕ್ತಿಗಳ ಮೊಗದಲ್ಲಿ ನಗೆ ಮೂಡುತ್ತದೆ. ಮತ್ತೆ ರಾಜ ತನ್ನ ಮಾತುಗಳನ್ನು ಮುಂದುವರೆಸುತ್ತ. ಮುಂದೆ ನಡೆಯಲಿರುವ ಯುದ್ದದಲ್ಲಿ ನಾವು ಅತ್ಯಂತ ಶಕ್ತಿ ಸಾಮರ್ಥ್ಯಗಳನ್ನು ತೋರಿ ಅವರನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಮುಖ್ಯವಾಗಿ ನಾವು ಮತ್ತಷ್ಟು ಭೂ ಭಾಗಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ನಮ್ಮ ಸೈನ್ಯವನ್ನು ಉತ್ತರ ದಿಕ್ಕಿಗೆ ಕಳುಹಿಸಬೇಕು” ಇದರಿಂದ ನಮಗೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ ಎಂದು ಮಣ್ಣ ನೆಲದ ಮೇಲೆ ವಶಕ್ಕೆ ತೆಗೆದುಕೊಳ್ಳಬೇಕಿದ್ದ ಭೂ ಭಾಗಗಳ ರೇಖಾ ಚಿತ್ರವನ್ನು ಬಿಡಿಸಿ ತೋರುತ್ತಾನೆ.

       ರಾಜನ ಯೋಚನೆಯನ್ನು ವಿಕೃತ ವೆಕ್ತಿಗಳು ತಡೆದು. ಈ ಮಾಸ ಶುಭಮಾಸ, ಈ ಮಾಸ ಯುದ್ದಕ್ಕೆ ಅನುಗುಣವಾಗಿಲ್ಲ, ಇದು ಸಂಭ್ರಮಕ್ಕೆ ಕಾಲವಾಗಿದೆ ಎಂಬ ಮಾತಗೆ ಮತ್ತೊಬ್ಬ ವಿಕೃತ ವೆಕ್ತಿ ಧನಿಗೂಡಿಸುತ್ತ. ಹೌದು ಇದು ಪವಿತ್ರವಾದ ಧರ್ನುಮಾಸ ಸ್ಪಾರ್ಟ ದೇಶದಲ್ಲಿ ಯುದ್ದಗಳು ಎಂದೂ ಈ ಮಾಸದಲ್ಲಿ ನಡೆದಿದ್ದೇ ಇಲ್ಲವೆಂಬ  ತರ್ಕವನ್ನು ನುಡಿಯುತ್ತಾರೆ.
   
       ಮಹಾರಾಜ ವಿಕೃತ ವೆಕ್ತಿಗಳ ಮಾತಿಗೆ ಕೋಪಗೊಂಡು ಕಠಿಣವಾದ ನುಡಿಗಳನ್ನಾಡುತ್ತ. “ಈವಾಗಲೇನಾದರೂ ನೀವು ಪ್ರತಿಕ್ರಿಯಸದೆ ಹೋದರೆ ಸ್ಪಾರ್ಟ ದೇಶ ನಾಶವಾಗುತ್ತದೆ. ನಮ್ಮ ವೀರರೆಲ್ಲ ಕೊಲ್ಲಲ್ಪಡುತ್ತಾರೆ. ನಮ್ಮ ದೇಶದ ಹೆಂಗಸರು ಮಕ್ಕಳೆಲ್ಲ ಪಾರಸೀಯರಿಗೆ ಗುಲಾಮರಾಗುತ್ತಾರೆ ಎಂಬ ಎಚ್ಚರದ ಮಾತುಗಳನ್ನಾಡುತ್ತ ಮೊದಲಿಗೆ ಅವರು ಸಮುದ್ರ ಮಾರ್ಗವಾಗಿ ನಮ್ಮ ಮೇಲೆ ದಾಳಿಮಾಡಲು ಪ್ರಯತ್ನಿಸುತ್ತಾರೆ. ಅದನ್ನು ತಡೆಯಲು ನಾವು ಆ ಬೆಟ್ಟದ ಹಾದಿಯಲ್ಲಿ ಒಂದು ಅಡ್ಡಗೋಡೆಯನ್ನು ನಿರ್ಮಿಸಿದರೆ. ಅವರಿಗೆ ಮತ್ತೊಂದು ಮಾರ್ಗವಿಲ್ಲದೆ ಹಾರ್ಟ್ ಕೇಕ್ಸ್ ಎಂಬ ಮತ್ತೊಂದು ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದು ಅತಿ ಕಿರಿದಾದ ದಾರಿಯಾದ್ದರಿಂದ ಸೈನ್ಯ ಸಮೂಹವು ಅದರೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪಾರಸೀಯ ಸೈನ್ಯವೆಲ್ಲಾ ಒಂದಾಗಿ ನಮ್ಮ ಮೇಲೆ ದಾಳಿಮಾಡುವ ಮೊದಲೆ ನಮ್ಮ ಸೈನಿಕರು ಅವರನ್ನು ತಡೆದು ಹಿಂಡಿ ಹಿಪ್ಪೆಯಾಗಿಸಬಹುದು. ಇದರಿಂದ ಜಕ್ಸೀಸ್ ಸೇನೆಯ ಬಲ ಕುಗ್ಗುತ್ತದೆ. ಆಶ್ಚರ್ಯ ರೀತಿಯಲ್ಲಿ ನಡೆಯುವ ಈ ಯುದ್ದದಲ್ಲಿ ಉಳಿದಿರುವ ಸೈನಿಕರೊಡನೆ ಜಕ್ಸೀಸ್ ಹಿಂದಕ್ಕೆ ಹೊಗುವುದನ್ನು ಬಿಟ್ಟು ಬೇರೆ ಯಾವ ದಾರಿಯೂ ಅವನಿಗೆ ಇಲ್ಲವಾಗುತ್ತದೆ.

       ಲಿಯೋನೈಡರ್ಸ್ ಮಾತನ್ನು ಆಲಿಸುತ್ತಿದ್ದ ವಿಕೃತ ವೆಕ್ತಿಗಳು “ಈ ಸಮಯದಲ್ಲಿ ದೇವರ ಮಾತನ್ನು ಕೇಳುವುದೇ ಒಳ್ಳೆಯದು ದೇವರನ್ನು ನಂಬು ನಿನಗೆ ಶುಭವಾಗುತ್ತದೆ”. ಲಿಯೋನೈಡರ್ಸ್ ಅವರ ಮಾತುಗಳನ್ನು ಅಲಕ್ಷಿಸಿದವನಂತೆ ನಾನು ದೇವರಿಗಿಂತ ಹೆಚ್ಚಾಗಿ ನನ್ನ ಇಚ್ಚಾ ಶಕ್ತಿಯನ್ನು ನಂಬುತ್ತೇನೆ” ಎಂಬ ತನ್ನ ಮೇಲಿನ ವಿಶ್ವಾಸವನ್ನು ಅವರಿಗೆ ತೋರುತ್ತಾನೆ.

       ಇದಕ್ಕೆ ಈಪೂರ್ಸ್ ವೆಕ್ತಿಗಳು ಕೋಪಗೊಂಡು ನಿನ್ನ ಈ ರೀತಿಯ ಮೂರ್ಖತನದ ವರ್ತನೆಯಿಂದ ನಮಗೆ ಎಷ್ಟೊ ಸಮಸ್ಸೆಗಳು ಬರುತ್ತಿವೆ. ಮೊದಲಿಗೆ ನಿನ್ನ ಪದ್ದತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸು ಆದ್ದರಿಂದ ಈ ಸಮಯದಲ್ಲಿ ದೇವರ ಸಮ್ಮತಿಯನ್ನು ಕೇಳದನ್ನು ಬಿಟ್ಟು ನಿನ್ನ ಇಚ್ಚೆಗನುಗುಣವಾಗಿ ಏನೂ ಮಾಡಲು ಸಾಧ್ಯವಾಗದು ಎನ್ನುತ್ತ ದರ್ಪದಿಂದ ಅನುಗ್ರಹವನ್ನು ಕೇಳುವುದಕ್ಕೆ ಮುಂದಾಗುತ್ತಾನೆ. ಆದರೆ ಇದು ಲಿಯೋನೈಡರ್ಸ್ ಗೆ ಸ್ವಲ್ಪವೂ ಇಷ್ಟವಿಲ್ಲ. ಸ್ಪಾರ್ಟನ್ಸರಲ್ಲಿ ಮನಸ್ಸಿನಲ್ಲಿ ಅನಾದಿ ಕಾಲದಿಂದಲೂ ಈ ಈಪೂರ್ಸ್ ಎಂಬ ಮೂಡನಂಬಿಕೆಗಳು ಬೇರೂರಿರುತ್ತವೆ. ಈ ಮೂಡ ನಂಬಿಕೆಯಿಂದ ದೂರವಿರಲು ಲಿಯೋನೈಡರ್ಸ್ ಒಬ್ಬನಿಂದ ಮಾತ್ರ ಸಾಧ್ಯವಾಗುವುದಿಲ್ಲ ಇದಕ್ಕೆ ಬಲಿಯಾಗದೆ ಇರುವುದಕ್ಕೆ ಲಿಯೋನೈಡರ್ಸ್ ಮಾತ್ರ ಆತೀತ ಶಕ್ತಿಯಿರುವಂತ ವೆಕ್ತಿಯೇನಲ್ಲವಲ್ಲ ?. ಆತನು ಸಹ ಸಾಮಾನ್ಯನಂತೆ ಇವರ ಮಾತುಗಳಿಗೆ ಕಟ್ಟು ಬೀಳದೆ ಮತ್ಯಾವ ಮಾರ್ಗವನ್ನು ಅಯ್ಕೆ ಮಾಡಿಕೊಳ್ಳುವಂತಿರಲಿಲ್ಲ. ಸ್ಪಾರ್ಟದೇಶದ ಹಿರಿಯರ ವಾದವೂ ಸಹ ಇದೇ ಆಗಿರುತ್ತದೆ.

      ಸ್ಪಾರ್ಟನ್ಸ್ ದೇಶಕ್ಕೆ ಸೇರಿದ ಅಂದವಾದ ಯುವತಿಯರನ್ನು ದೇವರ ಅನುಗ್ರಹವನ್ನು ಕೇಳುವುದಕ್ಕೆ ಅಲ್ಲಿನ ಈಪೂರ್ಸ್ ಸಮೂಹ ಆಯ್ಕೆ ಮಾಡಿಕೊಳ್ಳುತ್ತಿತ್ತು. ಆ ಯುವತಿಯರ ಸೌಂದರ್ಯವೆ ಅವರಿಗೆ ಶಾಪ ಎಂಬಂತೆ. ಅಂಗೀಕಾರವನ್ನು ಕೇಳುವ ನೆಪದಲ್ಲಿ ಆ ಯುವತಿಯರ ಮೈಯನ್ನು ನೆಕ್ಕುತ್ತ ಅವರ ಕಾಮೋದ್ವೇಗವನ್ನು ತೀರಿಸಿಕೊಳ್ಳುತ್ತಿದ್ದರು. ಆ ಯುವತಿಯರು ನರಳುತ್ತ ನರಳುತ್ತ ಮುಲುಗುವ ಸನ್ನೆ ಮತ್ತು ಸಂಕೇತಗಳನ್ನು ಗ್ರಹಿಸಿ ಮುಂದೆ ನಡೆಯಲಿರುವ ಸೋಲು ಗೆಲುವಿನ ಲೆಕ್ಕಾಚಾರಗಳನ್ನು ವಿಕೃತ ಜನ ತೋರ್ಪಡಿಸುತ್ತಿದ್ದರು. ಇದು ಸಂತೋಶಕ್ಕೆ ಸಂಬಂಧಿಸಿದ ಮಾಸ. ಈ ಮಾಸದಲ್ಲಿ ಯುದ್ದ ಮಾಡುವಂತಿಲ್ಲ. ಈ ಮಾಸದಲ್ಲಿ ಯುದ್ದವನ್ನು ಮಾಡಿದ್ದೇ ಆದಲ್ಲಿ ಸ್ಪಾರ್ಟ ದೇಶವು ನಾಶವಾಗುತ್ತದೆ. ಒಂದು ವೇಳೆ ಇದು ಸುಳ್ಳೆಂದು ಕತ್ತಿಯಿಡಿದಲ್ಲಿ ಅಂತವರಿಗೆ ವಿನಾಶ ಕಟ್ಟಿಟ್ಟ ಬುತ್ತಿ ಎಂಬುದಾಗಿ ಮಹಾರಾಜರ ಮನಸ್ಸನ್ನು ಹಸ್ಥರ ಗೊಳಿಸುತ್ತಾರೆ ವಿಕೃತ ಜನರು.

       ಅಲ್ಲಿಂದ ಅಯೋಮಯ ಸ್ಥಿತಿಯಲ್ಲಿ ಮಹಾರಾಜ ಅರಮನೆಗೆ ಹಿಂದಿರುಗುತ್ತಾನೆ. ಶತ್ರುಗಳು ಕೊಟ್ಟ ಲಂಚಕ್ಕೆ ಆಸೆ ಬಿದ್ದ ಈಪೂರ್ಸ್ ಸಮೂಹವು ಮಹಾರಾಜನ ಮನಸ್ಸಿನಲ್ಲಿ ಸುಳ್ಳಿನ ಆಲೋಚನೆಗಳನ್ನು ತುಂಬಿ ಕಳುಹಿಸಿರುತ್ತಾರೆ. ಇದೇ ರೀತಿ ಮಾಡುವಂತೆ ವಿಕೃತ ವೆಕ್ತಿಗಳಿಗೆ ಮೋದಲೆ ಜಕ್ಸೀಸ್ ನ ಕಡೆಯವರು ಆಸೆ ತೋರಿಸಿ ಅವರನ್ನು ಪ್ರೆರೇಪಿಸಿರುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಆಸ್ಥಾನದ ಮಹಾಮಂತ್ರಿಯು ಸಹ ಅವರೊಡನೆ ಶಾಮೀಲಾಗಿರುತ್ತಾನೆ. ಮಹಾರಾಜ ಹೋದ ಬಳಿಕ ಮರೆಯಲ್ಲಿ ಇದ್ದ ಜಕ್ಸೀಸ್ ಮಹಾರಾಜನ ವೆಕ್ತಿಯೊಬ್ಬ ವಿಕೃತ ವೆಕ್ತಿಗಳ ಮುಂದೆ ಜಕ್ಸೀಸ್ ರಾಜನ ಮುದ್ರೆಯಿರು ಚಿನ್ನದ ನಾಣ್ಯಗಳ ಮೂಟೆಯನ್ನು ತಂದು ಸುರಿಯುತ್ತಾನೆ. “ಜಕ್ಸೀಸ್ ಮಹಾರಾಜರನ್ನು ದೈವವಾಗಿ ಭಾವಿಸಿದ್ದರಿಂದ ಈ ದಿನದಿಂದ ನೀವುಗಳು ಶ್ರೀಮಂತರು. ಹೌದು ಇದೇ ರೀತಿಯಲ್ಲಿ ನಮಗೆ ಅನುಕೂಲಕರವಾಗಿ ಮಾತನಾಡಿದರೆ ನೀವು ಬಂಗಾರದ ಹೊಳೆಯಲ್ಲಿ ಮಿಂದೇಳಬಹುದು. ಮುಂದೆ ನಿಮಗೆ ಕಾಣಿಕೆಯಾಗಿ ಆಗತಾನೆ ಮೊಗ್ಗಾಗಿ ಅರಳಿದಂತ ಕನ್ಯೆಯರನ್ನು ಪ್ರತಿ ದಿನವೂ ಸಮರ್ಪಿಸಲಾಗುತ್ತದೆ. ಎಂದು ಈಪೂರ್ಸ್ ವಿಕೃತ ವೆಕ್ತಿಗಳನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ ಜಕ್ಸೀಸ್ ರಾಜನ ಕಡೆಯವರು.

 (ಅನುವಾದಿಸುತ್ತಿರುವ ಕಥೆ)    ಮುಂದುವರೆಯುವುದು.