Saturday, May 28, 2011

ಅವಳು ಕನಸಾಗುತ್ತಿದ್ದಾಳಂತೆ.....ಮುಂಜಾವಿನ ತಂಪೊತ್ತು
ಮನಸ್ಸು ಮೈ ಮರೆತು ನಿದ್ರಿಸುತ್ತಿದೆ
ಹತಾಶೆ ನಿಟ್ಟುಸಿರು
ಗೌಜು ಗದ್ದಲಗಳು ಸದ್ದುಮಾಡದೆ
ಬೆಚ್ಚಗೆ ಕನಸಾಗುತ್ತಿವೆ.

ಕೌಸಲ್ಯೆಯ ಸುಪ್ರಜರ
ಸಂಗೀತ ಕಛೇರಿ ನಡೆಯುತ್ತಿದೆ
ಮಡಿವಂತರು ಬಡಬಡಿಸುತ್ತ
ಮಾತಿನ ಕೊಳದಲ್ಲಿ ಮುಳುಗಿ ತೇಲುತ್ತಿದ್ದಾರೆ.

ಕೈಗಾಡಿಗಳು ತಕ್ಕಡಿಗಳಲ್ಲಿ
ಪದಾರ್ಥಗಳನ್ನಿಟ್ಟು ಮಾರಿಕೊಳ್ಳುತ್ತಿವೆ
ಹಾಲಿನವನ ಆರ್ಭಟ
ಕೋಗಿಲೆಯನ್ನು ನಾಚಿಸುತ್ತಿದೆ.
ಪೇಪರಿನವ ಬಯಕೆಗಳನ್ನು
ಭಾವನೆಗಳನ್ನು ಕನಸುಗಳನ್ನು
ಮನೆಯಂಗಳದಲ್ಲಿ ಮಡಚಿ ಎಸೆದಿದ್ದಾನೆ.

ರಸ್ತೆಯ ತುಂಬೆಲ್ಲ ಗುಲ್ಮೊಹರ್ ಹೂಗಳು
ರಂಗೋಲಿ ಬಿಡಿಸುತ್ತಿವೆ.
ಗುಯ್ ಗುಟ್ಟುವ ಶಬ್ಧಗಳು
ಅರ್ಧಂಬರ್ಧ ಮಾನ ಕಳೆದುಕೊಂಡ
ವಾಹನಗಳು ಮೈಮುಚ್ಚಿಕೊಂಡು
ಕಂಡು ಕಾಣದಂತೆ ಮರೆಯಾಗುತ್ತಿವೆ
ಕಾಣದ ಕೈಗಳು ಲಂಚಕ್ಕಾಗಿ ನಾಲಿಗೆ ಚಾಚುತ್ತಿವೆ.
ದೌರ್ಭಾಗ್ಯದ ಎರಡು ಕೈಗಳು
ಕಂಡ ಕಂಡವರಲ್ಲಿ ಅಂಗಲಾಚುತ್ತಿವೆ.

ದೂರದ ಕಾರ್ಖಾನೆಯೊಂದರಲ್ಲಿ
ಸೈರನ್ನಿನ ಸದ್ದು ಮೊಳಗುತ್ತಿದೆ
ಚಪ್ಪಲಿ, ಕೊಡೆ, ಚೀಲ
ಚದರಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ
ಮೂಳೆ ಹಂದರಗಳು
ಅತ್ತಕಡೆ ಪಯಣ ಬೆಳೆಸಿವೆ.
ಅವುಗಳನ್ನು ಉತ್ತರಿಸಲಾಗದ ಪ್ರಶ್ನೆಗಳು
ಬೆನ್ನಟ್ಟಿವೆ.

ಬುದ್ಧ, ಬಸವ, ಅಲ್ಲಮರು
ಯಾವುದೋ ಯೋಚನೆಯಲ್ಲಿ ಮುಳುಗಿದ್ದಾರೆ
ಗಾಂಧಿ ಮೌನವಾಗಿ ಬಾಬರು
ಮಣಭಾರದ ಪುಸ್ತಕವೊಂದನ್ನು ತೆರೆದು
ಅಲ್ಲಲ್ಲಿ ಅಂಟಿಸಿರುವ ಕಪ್ಪು ಮಸಿ
ಕಲೆಗಳನ್ನು ತೆರವುಗೊಳಿಸುತ್ತಿದ್ದಾರೆ.

ಒಂದಿಷ್ಟು ಗಲಾಟೆ
ಲಾಠಿ ಬೂಟುಗಳ ಟಪ ಟಪ
ಕೋವಿಯ ಗರ್ಜನೆ
ಅಲ್ಲಿ ಹೆಣವೊಂದು ಅನಾತವಾಗಿ ಬಿದ್ದಿದೆ

ಇದೇ ಸ್ಥಳದಲ್ಲಿ 
ರಾಜಕೀಯ ಸಮಾವೇಶವೊಂದರ
ತಾಲೀಮೂ ನಡೆಯಲಿದೆಯಂತೆ
ಆಶ್ವಾಸನೆಗಳ ಮುಖಗಳು
ಬರವಸೆಯ ಕೈಬೆರಳುಗಳು 
ಆಶೆ ಆಮೀಶಗಳ ಸ್ವರ್ಶಗಳು
ಬಡವನ ಬೆನ್ನು ತಟ್ಟಲಿವೆಯಂತೆ.

ಅವಳ ದಾರಿಯಲ್ಲಿ ದೀಪಗಳು
ಸದಾ ಕಪ್ಪಾಗಿ ಉರಿಯುತ್ತವೆ
ಚುಕ್ಕಿಗಳು ಬಣ್ಣ ಕಳೆದುಕೊಂಡಿವೆ
ಚಂದ್ರ ಮೋಡಗಳ ಮರೆಯಲ್ಲಿ ಕುಳಿತಿದ್ದಾನೆ
ಸೂರ್ಯ ಮಂಕಾಗಿದ್ದಾನೆ.

ಕಿಟಕಿಯ ಸಂದಿಯಿಂದ
ಕಿರಣಗಳು ಮನೆಯೊಳಗೆ ಇಣುಕಿದರೂ
ಅವಳಿಗೆ ಇನ್ನೂ ರಾತ್ರಿಯ ಅನುಭವಂತೆ
ಕತ್ತಲಿಗೆ ಬೆಳಕ ದೀಪ ಹಚ್ಚಬೇಕಿದೆಯಂತೆ
ಬೆಳಕ ಮೂಡುಸುವ ಸಂಭ್ರಮಕ್ಕಾಗಿ
ಹಗಲಿನಲ್ಲಿ ಕನಸಾಗುತ್ತಿದ್ದಾಳಂತೆ..

                                                                                                         ವಸಂತ್ 

ಚಿತ್ರಕೃಪೆ.http://kadrip.files.wordpress.com

8 comments:

Pradeep Rao said...

ಅವಳು ಕಾಣುತ್ತಿರುವ ಕನಸು ಓದುಗರನ್ನೇ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ.. ಚೆನ್ನಾಗಿದೆ ವಸಂತ್...

ವಸಂತ್ said...

Prathikriyege Tumbha Dhanyavadagalu Rradeep.......

VAIJUNATH.GULBARGA said...

TUMBA CHENAGIDE

ವಸಂತ್ said...

Prathikriyege Tumbha Dhanyavadagalu VAIJUNATH.....

ಚುಕ್ಕಿಚಿತ್ತಾರ said...

ಕವಿತೆ ಸು೦ದರವಾಗಿದೆ..
”ಅತಾಶೆ” ಅನ್ನುವಲ್ಲಿ ಹತಾಶೆ ಆಗಬೇಕಿತ್ತಾ ಅ೦ತ..

ವಸಂತ್ said...

ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು ಮೇಡಂ ಹೌದು ನಿಮ್ಮ ಮಾತು ನಿಜ ಇಲ್ಲಿ ”ಅತಾಶೆ” ಅನ್ನುವಲ್ಲಿ ತಪ್ಪಾಗಿದೆ ಅದನ್ನು ಹತಾಶೆ ಎಂದು ಬದಲಿಸಿದ್ದೇನೆ ವಂಧನೆಗಳು...

ch.hameed said...

ಕವನ ಚೆನ್ನಾಗಿದೆ ... ಮುಂದೆಯೂ ಹಲವಾರು ಕವನಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ.

ಸಂಪಾದಕರು,

ವಿಶ್ವ ಕನ್ನಡಿಗ ನ್ಯೂಸ್.

www.vknewz.com

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆ ತುಂಬಾ ಧನ್ಯವಾದಗಳು ಸರ್ ನಿಮ್ಮ ಆಶಯದಂತೆ ಇನ್ನೂ ಉತ್ತಮವಾದ ಕವನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ... ವಂದನೆಗಳೊಂದಿಗೆ...

ವಸಂತ್