ಮೈಸೂರು ಬ್ಯಾಂಕ್ ವೃತ್ತಕಾಲಿಡಲಾಗದಂತಹ ವಾಹನದಟ್ಟಣೆ
ರಸ್ತೆಯಂಚಿನಲ್ಲಿ ಬೆಳಗುತ್ತಿದ್ದ ದೀಪಗಳ
ಬದಲಾವಣೆಯನ್ನು ಅನುಸರಿಸುತ್ತ
ಮುಂದೆ ಮುಂದೆ ಸಾಗುತ್ತಿದ್ದ ಜನರು
ಇಂತಹ ದಟ್ಟಣೆಯಲ್ಲೂ
ಅಲ್ಲಲ್ಲಿ ಕೇಳಿಬರುತ್ತಿದ್ದ
ಹೋರಾಟದ ಕೂಗುಗಳು
ರೋಷ, ಆವೇಶದ ಆರ್ಭಟಗಳು
ಬಿಳಿ, ಹಳದಿ ಬ್ಯಾನರ್ರುಗಳು
ಕೇಸರಿಯ ಬಾವುಟಗಳು
ಅಲ್ಲಲ್ಲಿ ಕೂಗಾಟ
ಜಯಘೋಷ, ಧಿಕ್ಕಾರಗಳು
ಸುತ್ತಲೂ ನೆರೆದಿದ್ದ ಪೋಲಿಸರು
ಮಾಧ್ಯಮಗಳ ಜೊತೆ
ಬಿಡುವಿಲ್ಲದ ಸಮರ್ಥನೆಗಳು
ಈಗಿದ್ದರೂ..!
ನಿಷ್ಠಾವಂಥರದ್ದೆಲ್ಲಾ ಒಂದೇ ಕೂಗು
ನಿಮ್ಮ ಸ್ವಾರ್ಥವ ಬಿಟ್ಟು
ಮಾನವ ಮೌಲ್ಯಗಳಿಗೆ ಬೆಲೆಕೊಡಿ
ಮನುಷ್ಯರನ್ನು ಮನುಷ್ಯರಂತೆಯೇ
ಕಾಣಲು ಪ್ರಯತ್ನಿಸಿ
ನ್ಯಾಯದೆಡೆಗೆ ನಿಮ್ಮ ನಡೆಯಿರಲಿ
ನೀತಿಯೆಂಬುದು ನಿಮ್ಮ ಕೂಗಾಗಲಿ !
ವಾಹನಗಳು ಸಂಚರಿಸುತ್ತಲೇ ಇದ್ದವು
ನಿಲ್ಲಲು ಯಾರಿಗೂ ಪುರುಸೊತ್ತಿರಲಿಲ್ಲ
ಎಂದಿನಂತೆ ಹೋರಾಟಗಳು
ನಿಲ್ಲದೆ ಸಾಗುತ್ತಿದ್ದವು
ಜನ ಮಾತ್ರ ತಮ್ಮ ಪಾಡಿಗೆ ತಾವು
ರಸ್ತೆಯಂಚಲ್ಲಿ ಬೆಳಗುತ್ತಿದ್ದ ದೀಪಗಳ
ಬದಲಾವಣೆಯನ್ನು ಅನುಸರಿಸುತ್ತ
ಮುಂದೆ ಮುಂದೆ ಸಾಗಿ ಹೋಗುತ್ತಿದ್ದರು.
8 comments:
ಉತ್ತಮ ಕವನ.
ಉತ್ತಮ ವಿಚಾರಗಳು ವಸಂತ್.
ವಿಚಾರ ಪೂರಿತವಾಗಿದೆ ವಸಂತ್, ಹೀಗೇ ಸಾಗಲಿ, ಶುಭಾಶಯಗಳು.
nice poem vasanth
liked..:)
ತುಂಬಾ ಧನ್ಯವಾದಗಳು ಸುನಾಥ್ ಸರ್...
ಧನ್ಯವಾದಗಳು ಮೂರ್ತಿ ಸರ್...
ತುಂಬಾ ಧನ್ಯವಾದಗಳು ಭಟ್ ಸರ್...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚುಕ್ಕಿಚಿತ್ತಾರ ಮೇಡಂ...
Post a Comment