Friday, September 30, 2011

ಭಜಿಸು, ಪೂಜಿಸು, ಆರಾಧಿಸು...

ನೆನೆಯದಿರು ಮನವೆ ಅನೀತಿಯ ಅರ್ಥವನ್ನು
ತುಳಿಯದಿರು ಪಾದವೇ ಅಪಕೀರ್ತಿಯ ಹಾದಿಯನ್ನು
ನುಡಿಯದಿರು ಬಾಯೇ ಸುಳ್ಳಿನ ಸರಮಾಲೆಯನ್ನು
ಹೀರದಿರು ಮೂಗೆ ದುರ್ಗಂಧದ ಪರಿಮಳವನ್ನು
ನೋಡದಿರು ನಯನವೇ ಬೆತ್ತಲಾದ ಪ್ರಪಂಚವನ್ನು
ಪ್ರತಿ ದಿನವೂ ನೀ ಭಜಿಸು, ಪೂಜಿಸು, ಆರಾಧಿಸು
ನಮ್ಮ ಮಲ್ಲಿಕಾರ್ಜುನನೆಂಬ ಮೂರ್ತಿಯನ್ನು...

4 comments:

ಮನದಾಳದಿಂದ............ said...

ಒಳ್ಳೆಯ ಬೇಡಿಕೆ..........!
ಚನ್ನಾಗಿದೆ.

Dr.D.T.Krishna Murthy. said...

ಚಂದದ ಪ್ರಾರ್ಥನೆ.ಇಷ್ಟವಾಯ್ತು.

ವಿಚಲಿತ... said...

ಪ್ರಾರ್ಥನೆ ಚೆನ್ನಾಗಿದೆ

sunaath said...

ಇದೇ ಅಧ್ಯಾತ್ಮದ ಮಾರ್ಗ.