Saturday, October 15, 2011

ಇನ್ನು ಕೇವಲ ಸ್ವಲ್ಪವೇ ಸಮಯವಷ್ಟೆ


ಎಲ್ಲೆಲ್ಲೂ ಗಾಡ ಕತ್ತಲು
ಮನೆಗಳಲ್ಲಿ ಮಂದವಾಗಿ
ಬೆಳಕು ತೋರುವ ಚಿಮಣಿ ಬುಡ್ಡಿಗಳು
ಮೇಣಿದ ಬತ್ತಿಗಳ ನಿದ್ದೆಯ ಜೋಂಪು
ಒಂದೆರಡು ಕಡೆ ವಿದ್ಯುತ್ತಿನಂತೆ
ಉಸಿರಾಡುವ ಎಮರ್ಜನ್ಸಿ ಬಲ್ಬುಗಳು

ತೋಳಗಳ ಆರ್ಥನಾದ
ಗೂಬೆಗಳ ಬೊಬ್ಬೆಗಳು
ಮೌನವಾಗಿ ಸುಳಿದಾಡುವ ತಿಳಿಗಾಳಿ
ಮಿಣಿಕುಹುಳುಗಳ ಕಣ್ಣಾಮುಚ್ಚಾಲೆ
ಎಲ್ಲವನ್ನೂ ಚಾಚು ತಪ್ಪದೇ
ಗಮನಿಸುತ್ತಿರುವ ನಕ್ಷತ್ರ ಪುಂಜ

ಗೋಡೆಯ ಬಣ್ಣ ಕಪ್ಪಾಗಿದೆ 
ಆ ಕಪ್ಪೊಳಗೊಂದು ಕನ್ನಡಿಯಲ್ಲಿ
ಗಾಡ ಕತ್ತಲು ಕವಿದಿದೆ
ಗೋಚರಿಸದ ಬಿಂಬಕ್ಕಾಗಿ
ಅದರ ಮುಂದೊಂದು ಕಪ್ಪು ಛಾಯೆ
ಬಿಕ್ಕಿ ಬಿಕ್ಕಿ ಅಳುತ್ತಿದೆ

ಅಗೋ ಆಗಸದಲ್ಲೊಂದು
ಸಿಡಿಲ ಕೋಲು ಮಿಂಚಿ ಮರೆಯಾಯಿತು
ಅದರ ಕಿಡಿತಾಗಿ ಇಳೆಯ ಮರವೊಂದು
ಧಗಧಗಿಸಿ ಉರಿಯುತ್ತಿದೆ
ಮೋಡಗಳು ಮೌನವಾಗಿ ನೋಡುತ್ತಿವೆ

ಆ ದಾರಿ ಈಗ ನಯವಾಗಿದೆ
ಮೊನ್ನೆಯಷ್ಟೇ ಅದಕ್ಕೆ ಭಾವಿನ ರೋಗವಿತ್ತು
ಯಾವುದೋ ಸರ್ಕಾರಿ ಆಸ್ವತ್ರೆಯಲ್ಲಿ
ಚಿಕಿಸ್ಥೆ ಪಡೆದು ಗುಣವಾಗಿಸಿಕೊಂಡಿರಬೇಕು
ನನ್ನ ಚಂಚಲ ಮನಸ್ಸಿನ ಕಾಯಿಲೆಗೂ
ಈ ದಾರಿಯೇ ಉತ್ತರಿಸಬಹುದೇನೋ ?

ಇನ್ನು ಸ್ವಲ್ಪ ಸಮಯವಷ್ಟೇ ಕಾಯಿರಿ
ಆಗಸದ ತುಂಬೆಲ್ಲ ಬೆಂಕಿ ಹೊಗೆಯಾಡುತ್ತದೆ
ಅಕ್ಕಿ ಅನ್ನವಾಗುತ್ತದೆ
ಅಸಿವು ಮಾಯವಾಗುತ್ತದೆ
ಇನ್ನು ಕೇವಲ ಸ್ವಲ್ಪವೇ ಸಮಯವಷ್ಟೆ
ಇದೇ ದಾರಿಯಲ್ಲಿ ಅಮೃತವು ಸಹ
ಕೋಡಿಯಾಗಿ ಹರಿಯುತ್ತದೆ.

4 comments:

Dr.D.T.Krishna Murthy. said...

ಸುಂದರ ಪ್ರತಿಮೆಗಳ ಉತ್ಕೃಷ್ಟ ಉಪಮೆಗಳ ಅದ್ಭುತ ಕವನ!ಆದರೆ ಕವನದ ಅಂತ್ಯ ಧನಾತ್ಮಕವಾಗಬಹುದಿತ್ತೇನೋ!
ಉತ್ತಮ ಕವನ ನೀಡಿದ್ದಕ್ಕೆ ಅಭಿನಂದನೆಗಳು.ನನ್ನ ಬ್ಲಾಗಿಗೂ ಭೇಟಿ ಕೊಡಿ.

ವಸಂತ್ said...

ಕವನದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸರ್ ನಿಮ್ಮ ಅನಿಸಿಕಯಂತೆ ಅಂತ್ಯವನ್ನು ಧನಾತ್ಮಕವಾಗಿಸುತ್ತೇನೆ....

ಹಳ್ಳಿ ಹುಡುಗ ತರುಣ್ said...

very nice vashant......

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ತರುಣ್ ರವರೆ...