ಸರಿರಾತ್ರಿಯ
ಸಮಯ
ನಿದುರೆಯು ಎಲ್ಲರನ್ನೂ
ಬೆನ್ನುತಟ್ಟಿ
ಬೆಚ್ಚಗೆ ಮಲಿಗಿಸಿತ್ತು
ಲೋಕವೆಲ್ಲಾ ಮೌನವಾಗಿ ಮಲಗಿರುವಾಗ
ಅವನೊಬ್ಬನಿಗೆ ಮಾತ್ರ ಎಚ್ಚರವಾಗಿತ್ತು
ತಣ್ಣಗೆ ಗಾಳಿ
ಬೀಸುತ್ತಿತ್ತು
ಚುಕ್ಕಿಗಳು ಇಣುಕಿನೋಡುತ್ತಿದ್ದವು
ಚಂದ್ರ ಬೆಳದಿಂಗಳನ್ನು
ಚೆಲ್ಲಿದ್ದ
ಅವನು ಎದ್ದು
ನಿಧಾನವಾಗಿ ನಡೆಯತೊಡಗಿದ
ಕೋಟೆಯಂತಹ ಮನೆ
ಚಿನ್ನ ಹೊನ್ನಿನ ಖಜಾನೆ
ನಯವಾದ ಕೆಂಪು
ಕಲ್ಲಿನ ನೆಲ
ಉಕ್ಕಿನ ಬಾಗಿಲುಗಳು
ಒಂದು ಕ್ಷಣವೂ
ಅವನು ಯೋಚಿಸಲಿಲ್ಲ
ತಂದೆ ತಾಯಿ ಮಡದಿ ವ್ಯಾಮೋಹಿಸಲಿಲ್ಲ
ತಂದೆ ತಾಯಿ ಮಡದಿ ವ್ಯಾಮೋಹಿಸಲಿಲ್ಲ
ಬಾಗಿಲುಗಳು ತೆರೆದುಕೊಂಡವು
ಭೋಗ ಅವನನ್ನು
ತಡೆಯಲೆತ್ನಿಸಿತು
ಆಸೆಯು ಅಸೂಯೆಪಟ್ಟಿತು
ಎಲ್ಲವನ್ನೂ ದೂರಕ್ಕಟ್ಟಿ
ಬೋಧಿ ವೃಕ್ಷದಡಿ
ಮೌನವಾಗಿ ಕುಳಿತುಬಿಟ್ಟ
ಬೆಚ್ಚು ಬೆರಗಾಯಿತು ಜಗ
ತೀಕ್ಷ್ಣ ಕಣ್ಣಿನಿಂದ
ಇವನನ್ನೇ ನೋಡತೊಡಗಿತು
ವರ್ತನಗೆಳು
ವಿಚಿತ್ರವೆನಿಸಿದವು
ಮಾತಿನ ವರಸೆ
ಒಂದು ಕ್ಷಣ
ಎಲ್ಲರನ್ನೂ ಕಟ್ಟಿ
ನಿಲ್ಲಿಸುವಂತಿತ್ತು
ಅಲ್ಲೊಬ್ಬಳು
ಅತಿಯಾಗಿ ವೇದನೆ ಪಡುತ್ತ
ತನ್ನ ಕರುಳ ಬಳ್ಳಿಯನ್ನು
ತಬ್ಬಿಕೊಂಡು
ಉಳಿಸಿಕೊಡಿ ! ಉಳಿಸಿಕೊಡಿ !!
ಎನ್ನುತ್ತ
ಗೋಗರೆದು ಇವನಲ್ಲಿಗೆ ತರುತ್ತಿದ್ದಾಳೆ
ಎಲ್ಲರೂ ಮೌನರಾಗಿದ್ದಾರೆ
ಅವನೂ ಮೌನವಾಗಿದ್ದಾನೆ
ಉಪಾಯ ಸರಳ ಸಾಮಾನ್ಯದಂತಿತ್ತು
ಅದು ಸಾವಿಲ್ಲದ
ಮನೆಯ
ಸಾಸುವೆಯ ಕಾಳಾಗಿತ್ತು
ಅವಳು ಬಡಿಯ ತೊಡಗಿದಳು
ಒಂದೊಂದೆ ಮನೆಯ
ಒಂದು ಎರಡು ಮೂರು
ಹತ್ತು ಇಪ್ಪತ್ತು ನೂರು
ಹತ್ತು ಇಪ್ಪತ್ತು ನೂರು
ಸಾವಿರ ಬಾಗಿಲುಗಳನ್ನು
ದ್ವಂದ್ವ ಅವಳಲ್ಲಿ
ಆವರಿಸಿತ್ತು
ಸೋತು ಸುಮ್ಮನೆ
ಕೈಚೆಲ್ಲಿ ಕುಳಿತಳು
ಎಲ್ಲರ ಮನೆಯಲ್ಲೂ
ಸಾಸುವೆಯಿತ್ತು
ಅದರಡಿಯಲ್ಲಿ ಸಾವಿತ್ತು
ಅದರಡಿಯಲ್ಲಿ ಸಾವಿತ್ತು
ಅದರ ಕರಿ ನೆರಳು
ಎಲ್ಲರನ್ನೂ ಕವಿದಿತ್ತು
ಅವಳು ಮೌನವಾದಳು
ಅವನೂ ಮೌನವಾದ್ದನು
ಮಂದಿಯೆಲ್ಲ ಮೌನವಾದರು
ಅವನು ಜಗವನ್ನೇ
ಜಯಸಿದ
ಜನ ಸಾಮಾನ್ಯರ ಮನಕ್ಕೆ ಅತ್ತರವಾದ
ಆಸೆಯೇ ದುಃಖಕ್ಕೆ
ಮೂಲ ಕಾರಣವೆಂದ
ಆಸೆಯನ್ನು ತೊರೆದರೆ ಮೋಕ್ಷಸಾಧಿಸಬಹುದೆಂಬ
ಅನುಭವದ ನುಡಿಗಳನ್ನಾಡಿದ
ಹಲವರಿಗೆ ದೈವವಾದ
ಆಸೆಯನ್ನು ತೊರೆದರೆ ಮೋಕ್ಷಸಾಧಿಸಬಹುದೆಂಬ
ಅನುಭವದ ನುಡಿಗಳನ್ನಾಡಿದ
ಹಲವರಿಗೆ ದೈವವಾದ
ಮತ್ತಲವರಿಗೆ
ಸ್ಪೂರ್ಥಿಯಾದ
ಇನ್ನಲವರಿಗೆ ದಾರಿತೋರೋ ದಾತನಾದ
ಇನ್ನಲವರಿಗೆ ದಾರಿತೋರೋ ದಾತನಾದ
ಬೌಧ ಧರ್ಮದ
ಉಗಮಕ್ಕೆ ಕಾರಣವಾದ
ಮಹಾನ್ ಪುರುಷ “ಗೌತಮ ಬುದ್ಧ”..

4 comments:
ವಸಂತ್;ಕವನ ಚೆನ್ನಾಗಿದೆ.ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳು ನುಸುಳಿವೆ.'ಹಿಣುಕಿ'ಅನ್ನುವುದು 'ಇಣುಕಿ'ಆಗಬೇಕಿತ್ತು.'ಕಜಾನೆ'ಅನ್ನುವುದು 'ಖಜಾನೆ'ಆಗಬೇಕಿತ್ತು.ಗೌತಮ ಬುದ್ಧ ಸ್ಥಾಪಿಸಿದ್ದು 'ಬೌದ್ಧ ಧರ್ಮ',ಜೈನ ಧರ್ಮವಲ್ಲ.ಅದನ್ನು ಸರಿಮಾಡಿ.ಪ್ರಯತ್ನ ಮುಂದುವರೆಯಲಿ.ಧನ್ಯವಾದಗಳು.ನಮಸ್ಕಾರ.
ನಿಮ್ಮ ಪ್ರತಿಕ್ರಿಯೆಗೆ ಮತ್ತು ನನ್ನ ಸಣ್ಣ ತಪ್ಪುಗಳನ್ನು ತಿಳಿಸಿಕೊಟ್ಟಿದ್ದಕ್ಕೆ ನಿನಗೆ ನನ್ನ ಧನ್ಯವಾದಗಳು ಸರ್..
ಕವನಿಸಿದ ಪರಿ ನನಗಿಷ್ಟವಾಯ್ತು...
ನಿಮ್ಮ ಅನಿಸಿಕೆಗೆ ಧನ್ಯವಾದಗಳು...
Post a Comment