Saturday, October 22, 2011

ಎಲ್ಲಿ ಹೋದ ಅವನು


ಮೌನವಾಗಿ ಜಾರುತಿದೆ ಹೊತ್ತು
ಆಗಾಗ ಸುಳಿದು ಸಾಗುತಿವೆ ನೆನಪುಗಳು
ಕತ್ತಲು ಬೆಳಕಾಯಿತು, ಬೆಳಕು ಕತ್ತಲಾಯಿತು
ನನ್ನ ನಿರೀಕ್ಷೆಗಳು ಉಸಿಯಾಯಿತೆ ?
ಬಯಕೆಗಳು ಬಣ್ಣ ಕಳೆದಂತೆ ಕಾಣುತ್ತಿವೆ
ಬಾನು ಬಾಗಿ ಕತ್ತಲಾಗಿದ್ದರೂ
ಇನ್ನೂ ಏಕೆ ಬರಲಿಲ್ಲ ಅವನು ?

ತಾರೆಗಳ ತೋಟದಲ್ಲಿ
ಹೊಂಬೆಳಕ ಬೀರುವ ಚಂದ್ರನ ಮುಂದೆ
ಚಲಿಸುತ್ತಿದ್ದ ಮೋಡಗಳ ಸಾಕ್ಷಿಯಾಗಿ
ಸದಾ ನಿನ್ನ ಬಾಳಿನಲ್ಲಿ ದೀಪದಂತೆ ಬೆಳಗುತ್ತೇನೆ
ಜನ್ಮ ಜನ್ಮದಲ್ಲೂ ಜೊತೆಯಾಗುತ್ತೇನೆ
ನೀ ಭಯಗೊಳ್ಳದಿರು ಸುಮವೆ ಎಂದಿದ್ದನಲ್ಲ ?

ಅಮಾವಾಸ್ಯಗಳು ಬಂದುಹೋಗುತ್ತಿವೆ
ಚಂದ್ರ ಕತ್ತಲಾಗಿದ್ದಾನೆ
ಮೋಡಗಳು ಚಲಿಸದೆ ಸುಮ್ಮನಾಗಿವೆ
ತಾರೆಗಳು ಜಾರಿ ಬೀಳಲಾರಂಭಿಸಿವೆ
ಎಲ್ಲಿಹೋದನೆಂದು ಅರಿಯದಾದೆನೆ !

ನನ್ನ ಬಯಕೆಗಳು ಉಸಿಯಾಗುವ ಮುನ್ನ
ಮತ್ತೊಂದು ಕತ್ತಲು ಕವಿಯುವ ಹೊತ್ತಿಗಾದರೂ
ಬಿದ್ದು ಹೋದ ತಾರೆಗಳನ್ನು
ಕತ್ತಲು ತೋರುವ ಚಂದ್ರನನ್ನು
ಚಲಿಸದೆ ಸುಮ್ಮನಾದ ಮೋಡಗಳನ್ನು
ತಡೆದು ಕೇಳಿಬಿಡುತ್ತೇನೆ ಎಲ್ಲಿ ಹೋದ ಅವನೆಂದು ?.

6 comments:

sunaath said...

"ಬಿದ್ದು ಹೋದ ತಾರೆಗಳನ್ನು
ಕತ್ತಲು ತೋರುವ ಚಂದ್ರನನ್ನು
ಚಲಿಸದೆ ಸುಮ್ಮನಾದ ಮೋಡಗಳನ್ನು
ತಡೆದು ಕೇಳಬೇಕಿದೆ ಎಲ್ಲಿ ಹೋದ ಅವನೆಂದು ?"
-ಸುಂದರವಾದ ಸಾಲುಗಳು.

ಕಲರವ said...

sundaravaa kavana,
abhinandanegalu.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು ಸುನಾಥ್ ಸರ್..

ವಸಂತ್ said...

ಪ್ರತಿಕ್ರಿಯೆಗೆ ವಂದನೆಗಳು ಕಲರವರವರೆ ನನ್ನ ಬ್ಲಾಗಿಗೆ ಬೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು..

ಮೌನರಾಗ... said...

chandada kavana sir..chennagide..

ವಸಂತ್ said...

ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.....