Monday, November 7, 2011

ಮೂಕ ಮನದ ವೇದನೆ


ದೇವರೇ ನನ್ನ ಮನವಿಯನ್ನೊಮ್ಮೆ ಆಲಿಸು
ಜೀವನವು ತುಂಬಾ ಬೇಸರವಾಗುತ್ತಿದೆ
ಕಷ್ಟಗಳಿಗೆ ಕರುಣೆಯಿಲ್ಲದಂತಾಗಿದೆ
ಕೊರತೆಗಳಲ್ಲಿ ಸಿಕ್ಕಿ ನರಳಾಡುತ್ತಿರುವೆ

ದೇವರೇ ನನಗೆ ಚಿನ್ನ ಕೊಡು 
ಹೊನ್ನು ನೀಡೇಂದು ಬೇಡುವುದಿಲ್ಲ
ದವಸ ಧಾನ್ಯಗಳನ್ನು ಕೊಡದಿದ್ದರೂ ಚಿಂತೆಯಿಲ್ಲ
ಒಂದಷ್ಟು ನೆಮ್ಮದಿಯನ್ನು ಕೊಟ್ಟರೆ ಸಾಕು ನಾನು ಧನ್ಯ

ದೇವರೇ ನನ್ನನ್ನು
ಪ್ರಾಣಿಯೆಂದು ತಿರಸ್ಕರಿಸದಿರು
ನನಗೂ ಒಂದು ಬದುಕಿದೆ
ನನ್ನಗೂ ಹಲವು ಯೋಚನೆಗಳಿವೆ ?

ದೇವರೇ ನೀ ಕರುಣಾಮಯಿ
ನಿನ್ನ ಪೂಜಿಸುವಷ್ಟು ಶಕ್ತಿ ನನಗಿಲ್ಲ
ನಿನಗೆ ಸಮರ್ಪಿಸಲು ನನ್ನ ಬಳಿ ಏನೂ ಉಳಿದಿಲ್ಲ
ನನ್ನ ಮನವಿಯನ್ನು ಆಲಿಸಿ ಒಮ್ಮೆ ದಯೆತೋರು.

8 comments:

sunaath said...

ಸುಂದರವಾದ ಕವನ.

Dr.D.T.Krishna Murthy. said...

ಚಂದದ ಕವನ.

ರವಿ ಮುರ್ನಾಡು said...

ಕವಿತೆ ಚೆನ್ನಾಗಿದೆ.ದೇವರಿಗೆ ನಿಮ್ಮ ಮನವಿ ಮುಟ್ಟಲಿ. ಅದಕ್ಕಿಂತ ಮೊದಲು ಮನೆಯಲ್ಲಿ ತಾಯಿ-ತಂದೆಗೆ ಈ ವಿಷಯ ತಿಳಿಸಿಬಿಡಿ.

ಹಳ್ಳಿ ಹುಡುಗ ತರುಣ್ said...

sundarvaagide kavana vasanth...

bega nimma besarakke kaliylu aa devaru ashirvadisali..:)

ವಸಂತ್ ಕೋಡಿಹಳ್ಳಿ said...

ಪ್ರತಿಕ್ರಿಯೆಗೆ ಧನ್ಯವಾದಗಳು ಸುನಾಥ್ ಸರ್

ವಸಂತ್ ಕೋಡಿಹಳ್ಳಿ said...

ಧನ್ಯವಾದಗಳು ಮೂರ್ತಿ ಸರ್..

ವಸಂತ್ ಕೋಡಿಹಳ್ಳಿ said...

ಮೊದಲಿಗೆ ನಮ್ಮ ತಂದೆ ತಾಯಿಯರಿಗೆ ದೇವರ ಸ್ಥಾನವನ್ನು ನೀಡಿ ನಂತರ ಮುಂದಿನದರ ಬಗ್ಗೆ ಯೋಚಿಸುತ್ತೇನೆ. ನಿಮ್ಮ ಅನಿಸಿಕೆಗೆ ವಂದನೆಗಳು ರವಿ ಸರ್..

ವಸಂತ್ ಕೋಡಿಹಳ್ಳಿ said...

ನಿಮ್ಮ ಅಕ್ಕರೆಯ ಮಾತುಗಳಿಗೆ ಧನ್ಯವಾದಗಳು ತರುಣ್....