ಸುತ್ತಲೂ ಹಸಿರ ವನ
ವನದ ಮಧ್ಯದಲ್ಲೊಂದು ಕೊಳ
ಕೊಳದ ತಡಿಯಲ್ಲೊಂದು ಕಲ್ಲು ಹಾಸು
ಆ ಕಲ್ಲು ಹಾಸಿನ ಕೆಳಗೆ
ಬಿಂಬ ತೋರುವ ನೀರು
ಮೌನದಂಗಳದಲ್ಲಿ
ಹೊರ ಹೊಮ್ಮುವ
ದುಖಃ ದುಮ್ಮಾನಗಳನ್ನು
ತಾನೇ ಸಂತೈಸಿಕೊಂಡಂತೆ
ತನ್ನ ಮನಸ್ಸಿನ ವೇಧನೆಯನ್ನು
ಬಿಂಬವಾಗಿ ಪ್ರಶ್ನಿಸಿಕೊಳ್ಳುತ್ತದೆ
ಗಾಳಿಯು ಬೀಸಲಿಲ್ಲ
ಹನಿಗಳು ಉದುರಲಿಲ್ಲ
ತಡಿಯಲಿರುವ ಬಿಂಬವನ್ನು ಗಮನಿಸಿದಾಗ
ಅದು ಅತ್ತು ಕರೆದು
ಸುಮ್ಮನಾದಂತೆ ತೋರುತ್ತದೆ
ಭವ್ಯ ಕನಸುಗಳ ಕಂಡು
ಹುಸಿಯಾದ ಬದುಕಿನಲ್ಲಿ
ತನ್ನ ನೆಲೆ ಎಂತು ಎಂದುಕೊಂಡಾಗ ?
ನನ್ನೊಳಗಿನ ಒಂಟಿ ಮನಸ್ಸು
ಬೆಚ್ಚಿ ಬೆದುರುತ್ತದೆ
ಆ ಮನಸ್ಸ ತಳದಲ್ಲೊಂದು ನೆರಳು
ಅದಕ್ಕೆ ಧೈರ್ಯವನ್ನು ತುಂಬುತ್ತದೆ.

6 comments:
ವಸಂತ,
ಮನಸ್ಸನ್ನು ಕೊಳಕ್ಕೆ ಹೋಲಿಸಿದರೆ, ಅದರಲ್ಲಿ ಹುದುಗಿರುವ ವಿವಿಧ ಆಸೆ, ಹೆದರಿಕೆ ಮೊದಲಾದವುಗಳೆಲ್ಲ ನೆರಳುಗಳೇ. ತುಂಬ ಸುಂದರವಾದ ಕವನ.
ವಸಂತ್;'ಆ ಮನಸ್ಸಿನ ತಳದಲ್ಲೊಂದು ನೆರಳು ಅದಕ್ಕೆ ಸಾಂತ್ವನ ಕೊಡುತ್ತದೆ!'ಸುಂದರ ಸಾಲುಗಳು.ಕವಿತೆ ತುಂಬಾ ಚೆಂದವಿದೆ.ಇಷ್ಟವಾಯಿತು.ನಿಮ್ಮಿಂದ ಇನ್ನಷ್ಟು ಸುಂದರ ಕವನಗಳು ಬರಲಿ ಎನ್ನುವ ಹಾರೈಕೆ.
ಇಷ್ಟವಾದ ಕವಿತೆ.ಎದೆಯಾಳದಲ್ಲಿನ ಹುಸಿ ನಿರಾಸೆಗೆ ಧೈರ್ಯ ನೀಡಲು ಪಸರಿಸಿದ ನೆರಳ ಸಾಂತ್ವನದ ಕನವರಿಕೆಯು ಸೊಗಸಾಗಿದೆ.ಬದುಕಿಗೆ ಬರವಸೆ ನೀಡುವ ಛಾಯೆಯೂ ಕವನದಲ್ಲಿ ಹಾಸುಹೊಕ್ಕಾಗಿದೆ.
ಖಂಡಿತ ಸುನಾಥ್ ಸರ್ ಮನಸ್ಸಿನ ಕೊಳದಲ್ಲಿ ಮೋಹ ಭಯಗಳು ಬೆದರಿಕೆಗಳು ಕಾಡದೇ ಬಿಡಲಾರವು..
ನಿಮ್ಮ ಉತ್ತಮವಾದ ಪ್ರತಿಕ್ರಿಯೆಗೆ ಮತ್ತು ಮೆಚ್ಚುಗೆಯ ಮಾತುಗಳಿಗೆ ತುಂಬು ಮನದ ಧನ್ಯವಾದಗಳು ಮೂರ್ತಿ ಸರ್..
ನಿಮ್ಮ ಅಭಿಪ್ರಾಯಕ್ಕೆ ಮತ್ತು ಕವನ ಬಗ್ಗೆ ನಿಮ್ಮ ಪುಟ್ಟ ಆಶಯಕ್ಕೆ ತುಂಬು ಮನದ ಧನ್ಯವಾದಗಳು ಬನವಾಸಿ ಸರ್...
Post a Comment