Sunday, December 25, 2011

ಸಜ್ಜನ ಸಂಗವನು ಬಯಸಿ


ಹಾರುತಿದೆ ಜೀವಸೆಲೆ
ಹಾದಿ ಬೀದಿಗಳ ದಾಟಿ
ಹುಡುಕಾಡುತಿದೆ ಸಜ್ಜನ
ಸಂಮನಸ್ಕರನ್ನು

ಮತಿಹೀನ ಭ್ರಮೆಗಳು
ತನ್ನತ್ತ ಸೆಳೆಯುತಿವೆ
ದಾಹ ದಾರಿದ್ರ್ಯಗಳು
ಬೆಂಬಿಡದೆ ಕಾಡುತಿವೆ

ಲೋಕವೇ ಪಾಪಕೂಪವಾಗಿ
ನನ್ನೊಳಗೆ ಸೇರಿಕೋ
ನನ್ನೊಳಗೆ ಸೇರೆಂದು
ಬಾಯ್ತೆರೆದು ಕುಳಿತಾಗ

ಎಲ್ಲಿ ಅರಳಲಿ ನಾ ?
ಹೇಗೆ ಬೆಳೆಯಲಿ ನಾ ?
ಗೊಂದಲವೆ ಗಾಳವಾಗಿ
ಚೇಷ್ಟೆಯಲಿ ತೊಡಗಿದೆ

ನೆಮ್ಮದಿಯ ಬಯಲು
ಸಿಗಬಹುದೆಂಬ ಭರವಸೆ
ಇಂದಾದರಾಗಲಿ
ನಾಳೆಯಾಗಿ ಹೊಮ್ಮಲಿ

ಸಜ್ಜನರ ಸಂಗವನ್ನು
ಸಾವಧಾನದಲಿ ಹುಡುಕುತ್ತ
ನೆಮ್ಮದಿಯ ಬಯಲಲ್ಲಿ
ಮಗುವಾಗಿ ಅರಳುತ್ತೇನೆ.

4 comments:

ವಿಚಲಿತ... said...

uttama saalugalu,
adashtu bega 'santeyolage santaru' nimage sigali.. namagoo sigali..

prabhamani nagaraja said...

`ಸಜ್ಜನರ ಸಂಘವನ್ನುಸಾವದಾನದಲಿ ಹುಡುಕುತ್ತ
ನೆಮ್ಮದಿಯ ಬಯಲಲ್ಲಿ ಮಗುವಾಗಿ ಅರಳುತ್ತೇನೆ.'
ನಿಮ್ಮ ಸಹನೆಗೆ ನಮನಗಳು, ಕವನ ಚೆನ್ನಾಗಿದೆ ಅಭಿನ೦ದನೆಗಳು ವಸ೦ತ್ . ನನ್ನ ಬ್ಲಾಗ್ ಗೆ ಭೇಟಿ ಕೊಡಿ.

ಮೌನರಾಗ... said...

nice..

ashokkodlady said...

Nice Vasanth..Chennagide..