Sunday, January 8, 2012

"ಅತ್ಮಾವಲೋಕನ"

    ಹಿಂದೆ ಒಂದು ಕಾಲವಿತ್ತು ಜನ ಬಹಳ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಕಾಲವದು. ದೇವರಲ್ಲಿ ಅಪಾರ ನಂಬಿಕೆ. ಗುರು ಹಿರಿಯರಲ್ಲಿ ಪೂಜ್ಯ ಮನೋಭಾವ. ಅಜ್ಜ, ಅಜ್ಜಿ, ಅಪ್ಪ, ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ ಹೀಗೆ ತುಂಬಿದ ಅವಿಭಕ್ತ ಕುಟುಂಬಗಳು ಎತೇಚ್ಛವಾಗಿ ಕಾಣಸಿಗುತ್ತಿದ್ದವು. ಪಾಪ,ಪುಣ್ಯ ಮತ್ತು ಸ್ವರ್ಗ ನರಕಗಳ ಬಗ್ಗೆ ಅವರದೇ ಆದ ಚಿಂತನೆಯಿತ್ತು. ನಾವು ಪಾಪ ಮಾಡಿದರೆ, ಸುಳ್ಳು ಹೇಳಿದರೆ, ನರಕಕ್ಕೆ ಹೋಗುತ್ತೇವೆ. ಅಲ್ಲಿ ಮಾಡಿದ ತಪ್ಪಿಗೆ ಘೋರ ರೀತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ. ಎಂಬ ಭಯ ಎಲ್ಲರೊಳಗೂ ಮನೆಮಾಡಿತ್ತು. ಇದರಿಂದಾಗಿ ಮೋಸ ವಂಚನೆಗಳ ಪ್ರಮಾಣ ಕಡಿಮೆಯಿರುತ್ತಿತ್ತು. ಅವುಗಳನ್ನು ಮಾಡಲು ಸಹ ಜನರು ಹಿಂಜೆರೆಯುತ್ತಿದ್ದರು. "ಸತ್ಯವಾಗಿ ನಡೆದುಕೊಂಡರೆ ಸ್ವರ್ಗಸುಖ ಇಲ್ಲದಿದ್ದಲ್ಲಿ ನರಕಲೋಖ" ಎಂಬಂತೆ ಕೊಟ್ಟ ಮಾತಿಗೆ (ನಂಬಿಕೆಗೆ) ತಕ್ಕಂತೆ ನಡೆದುಕೊಳ್ಳುತ್ತಿದ್ದರು.

         ಕಾಲಕ್ರಮೇಣ ಜನರ ವರ್ತನೆಗಳಲ್ಲಿ ಬದಲಾವಣೆಗಳಾದವು. ವಿಜ್ಞಾನವು ಬೆಳೆದಂತೆ ಬುದ್ದಿವಂತಿಕೆಗನುಸಾರವಾಗಿ ತನ್ನ ಗುಣ ನಡತೆಯನ್ನು ವಿಕಾಸಗೊಳಿಕೊಂಡು ತನ್ನ ಮೌಲ್ಯಗಳನ್ನು ಮರೆಯುತ್ತ ಸಾಗುತ್ತಿದ್ದಾನೆ. ಭೋಗ ಜೀವನಕ್ಕೆ ಆತೊರೆಯುತ್ತಿದ್ದಾನೆ. ಪಾಪ ಪುಣ್ಯಗಳು ಕೇವಲ ಪುಸ್ತಕದ ಬದನೇಕಾಯಿ. ತಾನು ಇದ್ದಷ್ಟು ದಿನ ಚೆನ್ನಾಗಿದ್ದರೆ ಸಾಕು. ಮತ್ತೊಬ್ಬರ ಚಿಂತೆಗೆ ಬಾನೇಕೆ ದುಃಖಿಸಲಿ ಎಂಬ ಒಮ್ಮತದ ನಿಲುವಿಗೆ ಬದ್ಧನಾಗುತ್ತಿದ್ದಾನೆ. ಸ್ವಾರ್ಥ ಜೀವನಕ್ಕೆ ಹೊಂದಿಕೊಳ್ಳುತ್ತ ಮೋಸ ವಂಚನೆಗಳ ಮೈತುಂಬಿಸಿಕೊಳ್ಳುತ್ತ. ಧಯೆ ಧರ್ಮವನ್ನೂ  ದಾಟಿ ಮುನ್ನಡೆಯುತ್ತ. ಅತಿಯಾದ ಅಧಿಕಾರ ಧಾಹ, ಹಣದ ಮೇಲಿನ ವ್ಯಾಮೋಹ ತನ್ನನ್ನು ಎಂತಹ ಹೀನ ಕೃತ್ಯವನ್ನು ಮಾಡಡಿಸಲು ಸಿದ್ಧ ಎಂಬದನ್ನು ತೋರಿಸುತ್ತಿದ್ದಾನೆ. 

   ಒಳ್ಳೆಯ ತನದಿಂದ ಬದುಕಲು ಹವಣಿಸುವ ಜನರಿಗೆ ಇದು ಉತ್ತಮ ಕಾಲದಂತೆ ತೋರುವುದಿಲ್ಲ. ಅವರನ್ನು ನೆಮ್ಮದಿಯಿಂದ ಬದಕಲೂ ಸಹ ಬಿಡುವುದಿಲ್ಲ. ಹಾದಿ ಬೀದಿಗಳಲ್ಲಿ ತಮ್ಮ ಮಾನವನ್ನು ವ್ಯಾಪಾರವಾಗಿಸಿಕೊಂಡು ವ್ಯವಹರಿಸುತ್ತಿದ್ದಾರೆ. ಸ್ವಾರ್ಥ, ಮೋಸ, ವಂಚನೆಗಳೇ ಈ ಭೂಮಿಯನ್ನು ಆಳುವಂತಾಗಿದೆ. ದ್ವೇಷ, ಆಸೆಗಳು ಅವುಗಳೊಂದಿಗೆ ಸೇರಿ ಪ್ರತಿ ಕ್ಷಣ ರಕ್ತಧರ್ಪಣಕ್ಕಾಗಿ ಕಾಯುತ್ತಿವೆ.

       ಉತ್ತಮ ಸಮಾಜಕ್ಕಾಗಿ ಈ ಹಿಂದೆ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯಂತ ಮಹಾತ್ಮರು ತಮ್ಮ ಕೈಲಾದ ಸಲಹೆಗಳನ್ನು ನೀಡಿ. ಇತರರಿಗೆ ಸಲಹೆಯಿತ್ತರು. ನೆಮ್ಮದಿಯ ಬದುಕಿಗಾಗಿ ಆಸೆಗಳಿಂದ ದೂರವಿರಿ. ಮನುಷ್ಯರನ್ನು ಮನುಷ್ಯರಂತೆಯೇ ಕಾಣಲು ಪ್ರಯತ್ನಿಸಿ. ಮನುಷ್ಯ ಜನ್ಮ ಶಾಶ್ವತವಲ್ಲ. ಬೇಧಭಾವಗಳ ತೋರಬೇಡಿ ಎಂಬ ಕಟು ಸತ್ಯ ವಾಕ್ಯಗಳ ಪರಿಪಾಲಕರಾಗಿದ್ದರು. ಆದರೆ ಇವರ ಮಾತುಗಳು ಯಾರ ಕಿವಿಗೆ ಕೇಳುತ್ತವೆ ಹೇಳಿ ?. ಸದಾ ಕಚ್ಚಾಟ ಕಿತ್ತಾಟಗಳಿಂದಲೇ ತಮ್ಮ ಬದುಕನ್ನು ಮುಗಿಸಿಕೊಳ್ಳುತ್ತಾರೆ. ಸರಿಯಾಗಿ ತಿನ್ನಲು ಊಟವಿಲ್ಲ, ಮಲಗಲು ಸ್ಥಳವಿಲ್ಲ. ಎಲ್ಲವೂ ಉಳ್ಳವರ ಕಾಂಕ್ರೇಟಿನ ಕಾಡುಗಳಾಗಿಬಿಟ್ಟಿವೆ. ನೆನ್ನೆ ಮೊನ್ನೆ ಕಾಣುತ್ತಿದ್ದ ಕೆರೆ ಕೊಳ್ಳಗಳು ಮತ್ತೊಬ್ಬರ ಸೊತ್ತಾಗಿಬಿಡುತ್ತಿವೆ. ಇನ್ನು ಗುಬ್ಬಚ್ಚಿ ಕೊರವಂಕಗಳ ಮಾತೆಲ್ಲಿ! ಇಲ್ಲಿ ಎಲ್ಲವೂ ಮೌನವಷ್ಟೆ.

       ಈ ಲೋಕದ ಅರ್ಥವನ್ನು ಜನ ತಿಳಿಯಬೇಕಿದೆ. ಇದರೊಳಗಿನ ಸತ್ಯಾ ಸತ್ಯತೆಗಳ ಪರಾಮರ್ಶೆಯನ್ನು ಅರಿಯಬೇಕಿದೆ. ಇಲ್ಲಿ ನಮಗೆ ನಿಗುವ ಗೌರವ, ತಾನು ನಡೆವ ದಿಕ್ಕು. ತನ್ನಿಂದ ಯಾರಿಗೆ ಯಾವ ರೀತಿಯ ಲಾಭ. ಎಂಬುದರ ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಒಮ್ಮತದ ನಿಲುವುಗಳಿಗೆ ಬಲಿಯಾಗದೆ ಎಲ್ಲರೂ ಮನುಷ್ಯರೆಂಬ ಭಾವನೆಯು ಮೂಡಬೇಕಿದೆ. ಗಾಂಧಿ ಬುದ್ಧ ಮಾರ್ಕ್ಸರ ನುಡಿಗಳನ್ನು ಪರಿಪಾಲಿಸಬೇಕಿದೆ.

                                                                   "ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೇ ?
                                                                   ಕರ್ಪೂರದ ಮರವ ಕಡಿದು ಕಳ್ಳಿಗೆ ಬೇಲಿಯನ್ನಿಕ್ಕುವರೇ ?
                                                                   ಶ್ರೀಗಂಧದ ಮರವ ಕಡಿದು ಬೇಂವಿಂಗೆ ಅಡೆಯನ್ನಿಕ್ಕುವರೇ" ?

      ಎಂಬ ಈ ಸತ್ವಬರಿತ ಮಾತುಗಳನ್ನು ಬಸವಣ್ಣನವರು ಸುಮಾರು (850) ಎಂಟನೂರೈವತ್ತು ವರ್ಷಗಳ ಹಿಂದೆಯೇ ನುಡಿದಿದ್ದರು. ಈ ವಾಕ್ಯದೊಳಗಿನ ಅರ್ಥ ಅಮೂಲ್ಯವಾದದ್ದು. ಚಿನ್ನದ ನೇಗಿಲಿಂದ ಉತ್ತು ಎಕ್ಕೆಯ ಬೀಜವನ್ನಯಾಕೆ ನೆಡುತ್ತೀರಿ. ಕರ್ಪೂರದ ಮರಗಳ ಕಡಿದು ಕಳ್ಳಿಯ ಬೇಲಿಯನ್ಯಾಕೆ ಬೆಳೆಸುತ್ತೀರಿ. ಶ್ರೀಗಂಧದ ಮರವನ್ನು ಕಡಿದು ಬೇವಿನ ಮರ ಬೆಳೆದರೆ ಏನರ್ಥ ? ಎಂಬ ಅವರ ಪ್ರಶ್ನಾತೀತ ನುಡಿಗೆ ಒಂದುಕ್ಷಣ ವಿಸ್ಮಯರಾಗಬೇಕು ?. ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡಿ ಒಳ್ಳೆಯ ತನದಿಂದ ನಡೆದುಕೊಳ್ಳಿ ಉತ್ತಮ ವಿಚಾರಗಳತ್ತ ತಮ್ಮ ಮನಸ್ಸನ್ನು ಕೊಂಡೊಯ್ಯಿರಿ. ಎಂಬ ಅರ್ಥಗರ್ಭಿತ ವಿಚಾರಧಾರೆ. ಇದರೊಳಗಿನ ಅರ್ಥವನ್ನು ನಾವೆಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಗಲ್ಲದೆ ಈಗಿರುವ ರೀತಿಯಂತೆ ನಡೆದುಕೊಳ್ಳುತ್ತೇವೆ ಎಂದಲ್ಲಿ ಮುಂದೊಂದು ದಿನ ತೊಂದರೆಗಳು ತಪ್ಪಿದ್ದಲ್ಲವೆಂಬ ಈ ಸಂದೇಶ ಎಲ್ಲರಿಗೂ ಅರಿವಾಗಬೇಕಿದೆ..

No comments: