ಮಂಜು ಕವಿದ ಆಗಸ
ಇಬ್ಬನಿಯ ಹನಿಗುಡುವಿಕೆ
ಹೆಜ್ಜೆಯಿಟ್ಟ ಕಡೆಯಲ್ಲಾ
ಹಚ್ಚೊತ್ತುವ ನೆಲ
ತಂಪು ತಂಪು ತಂಗಾಳಿ
ಕಚಗುಳಿಯಿಡುವ ಹಕ್ಕಿಗಳ ಸುನಾದ
ಬೆಚ್ಚನೆಯ ಹೊದಿಕೆಯೊಳಗಿನ್ನೂ
ಕಳೆದುಹೋದ ಕನಸಿನ ಕಾತುರವಿದೆ
ಪ್ರಿಯತಮೆಯ ಬೆಚ್ಚನೆಯ ಭಾವವಿದೆ
ಆತ್ಮೀಯತೆಯ ಮೋಹವಿದೆ
ಅನುರಾಗದ ದಾಹವಿದೆಆದರೂ ಕಣ್ಣುಬಿಡದೇ
ಬೇರೆ ದಾರಿಯಿಲ್ಲ
ಅಮ್ಮನ ಅಡುಗೆಯ ಘಮಲು
ಹೊರಗಿನ ದೊಡ್ಡಿಯಲ್ಲಿ
ಆಕಳಿನ ಅಸಹಾಯಕ ಅಳಲು
ಕನಸು ಕನಸಾದರೂ
ವಾಸ್ತವಕ್ಕೆ ದೂರವೆಂಬ ಭಾವ
ನೆನಪುಗಳ ಬುತ್ತಿಯೊಗಳಗೆ
ಸವಿ ಪ್ರೀತಿಯ ಸೊಂಪಿದೆ
ತೆರೆದು ಮುಚ್ಚುವ ಕಣ್ಣನಲ್ಲಿ ನೂರು
ಬಯಕೆಯ ಕಾತರವಿದೆ
ಒಂದು ಕ್ಷಣ ನಲಿವಾದರೆ
ಮತ್ತೊಮ್ಮೆ ಒಂಟಿಯೆಂಬ ಕೊರಗು
ಇರಲಿ ಈ ದಿನವಿಷ್ಟೆ
ನಾಳೆಗೆ ಮತ್ತೊಂದು ಕನಸು ಕಾಣುತ್ತೇನೆ
ಈ ಸುಂದರ ಕ್ಷಣಗಳನ್ನು
ಮೈಮರೆಯುತ್ತಾ ಕಳೆಯುತ್ತೇನೆ.

6 comments:
Nice one vasant.. Good description of the early morning scene!
ಚೆಂದದ ಸಾಲುಗಳು
Nice lines.....
ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರದೀಪ್.....
ಧನ್ಯವಾದಗಳು ಗೆಳೆಯ....
ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಮೇಡಂ.....
Post a Comment