Saturday, January 28, 2012

ಕವನವೆಂದರೆ ?

ಕವನವೆಂದರೆ ಅದು
ಅಪ್ಸರೆಯ ಚಲುವ ಪ್ರತಿನಿಧಿಸಬೇಕು
ಕಥೆಯೆಂಬುದು ಮಾಯಾಜಿಂಕೆಯ
ಕುತೂಹಲವಾಗಬೇಕು
ಲೇಖನವೆಬುಂದು
ಕವಲೊಡೆವ ವೃಕ್ಷದಂತಿರಬೇಕು
ಕಾದಂಬರಿಗಳು ಬದುಕಿನ
ಬದಲಾವಣೆಗಳಾಗಬೇಕು
ಸುದ್ದಿ ಸಮಾಚಾರಗಳು
ಬದುಕಿನ ಆಶಾಕಿರಣಗಳಂತಾದರೆ ಸಾಕು
ಹಾಸ್ಯವೆಂಬುದು ಸದಾ
ಉಕ್ಕುವ ಪಾತ್ರೆಯಂತೆ ಹೊರಹೊಮ್ಮಬೇಕು
ಒಟ್ಟಿನಲ್ಲಿ ಇವುಗಳೆಲ್ಲಕ್ಕೂ
ಉತ್ತಮ ಜ್ಞಾನಸಂಪದವಿರಬೇಕು...

...........................................by: Vasanth kodihally

ಖಾಲಿ ತಲೆಯೊಳಗೆ ಹೊಳದ ಹಲವು ಸಾಲುಗಳಿವು
ತಪ್ಪಾಗಿದ್ದರೆ ಕ್ಷಮೆಯಿರಲಿ ...

6 comments:

sunaath said...

ಸಾಹಿತ್ಯಕ್ಕೆ ಜ್ಞಾನಸಂಪತ್ತು ಬೇಕೆನ್ನುವ ನಿಮ್ಮ ಮಾತು ಸರಿಯಾಗಿದೆ.

Dr.D.T.Krishna Murthy. said...

ಕವನದ ಬಗ್ಗೆ ಚಂದದ ಸಾಲುಗಳು.

ಮನದಾಳದಿಂದ............ said...

ವಸಂತ್.............
ಸತ್ಯವಾದ, ಬಹುಮುಖ್ಯವಾದ ಮಾತುಗಳು......

ಚನ್ನಾಗಿದೆ.

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸುನಾಥ್ ಸರ್

ವಸಂತ್ ಕೋಡಿಹಳ್ಳಿ said...

ಧನ್ಯವಾದಗಳು ಮೂರ್ತಿ ಸರ್

ವಸಂತ್ ಕೋಡಿಹಳ್ಳಿ said...

ತುಂಬಾ ಧನ್ಯವಾದಗಳು ಪ್ರವೀಣ್ ಸರ್...