Saturday, February 4, 2012

ಅವಳು....


ಅವಳ ಹಾದಿಯಲ್ಲಿ
ಹೂವಾಗುತ್ತೇನೆ
ತನ್ನತ್ತ ದೃಷ್ಟಿ-ಹರಿಸಬಹುದೆಂದು

ಅವಳ ದಿಕ್ಕಲಿ
ಕಾಮನ ಬಿಲ್ಲಾಗುತ್ತೇನೆ
ನನ್ನ ಇಷ್ಟಪಡಬಹುದೆಂದು

ಅವಳ ರಾತ್ರಿಯಲ್ಲಿ
ಬೆಳದಿಂಗಳಾಗುತ್ತೇನೆ
ತನ್ನ ಅಂದವ ಬಣ್ಣಿಸಬಹುದೆಂದು

ಅವಳ ಕನಸಲ್ಲಿ
ಕವಲೊಡೆಯುತ್ತೇನೆ
ನನ್ನ ಭಾವನೆ ಅರ್ಥವಾಗಲೆಂದು

ಅವಳ ನೋವಿಗೆ
ಮದ್ದಾಗುತ್ತೇನೆ
ನನ್ನ ಕೂಡಿ ನಲಿಯಬಹುದೆಂದು

ಅವಳ ಮೌನದಲ್ಲಿ
ಜೊತೆಯಾಗುತ್ತೇನೆ
ನನ್ನೊಂದಿಗೆ ಹೆಜ್ಜೆಯಿಡಬಹುದೆಂದು

2 comments:

DEW DROP (ಮಂಜಿನ ಹನಿ) said...

ಏನಾದರೂ ಆಗಲಿ ನಾನೂ ನಿನ್ನೊಂದಿಗೆ ಇರಲು ಬಯಸುತ್ತೇನೆ ಎಂಬ ಮುದ್ದಾದ ಪ್ರೀತಿಯ ಭಾವಗಳನ್ನು ಅರಳಿಸಿದ ಕವಿತೆ ಮಧುರವೆನಿಸುವುದು.. ಕಲ್ಪನೆಗಳನ್ನು ಹೀಗೆ ನವಿರಾಗಿ ಅರಳಿಸಬೇಕು ಆಗ ಓದುಗನಿಗೆ ಸುಂದರ ಅನುಭೂತಿಗಳನ್ನು ನೀಡುತ್ತದೆ ಕವಿತೆ.. ಸುಂದರವಾದ ಪ್ರೇಮ ಕವಿತೆ..:)))

ವಸಂತ್ ಕೋಡಿಹಳ್ಳಿ said...

ನಿಮ್ಮ ಅಭಿಪ್ರಾಯಕ್ಕೆ ತುಂಬು ಮನಸ್ಸಿನ ಧನ್ಯವಾದಗಳು ಪ್ರಸಾದಣ್ಣ....