Sunday, February 5, 2012

ಆ ನೆಲದೆಡೆಗೆ


ಹೆಜ್ಜೆ ಊರದ ನೆಲದಲ್ಲಿ
ಮೌನ-ರಾಗದ ಗಾನ
ಬುದ್ಧನ ಧ್ಯಾನ
ಶಾಂತಚಿತ್ತ ಮನಸ್ಸುಗಳ
ಸುಮಧುರ ಪಾರಾಯಣ

ನೋವಿಲ್ಲ ನಲಿವಿಲ್ಲ
ಸುಖವಿಲ್ಲ ದುಃಖವಿಲ್ಲ
ಮೋಸ ವಂಚನೆಗಿದು ಜಾಗವೇ ಅಲ್ಲ
ಸದಾ ಬುದ್ದಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಚಾಮಿ

ಆ ನೆಲದ ಮಹಿಮೆಯೇ ಹಾಗೆ
ನಯನ ಮನೋಹರ
ಸಿಹಿನೀರ ಸಾಗರ
ಮೇಲು ಕೀಳುಗಳರಿಯದ
ಸುಂದರ ಸರೋವರ

ಈ ಭವ್ಯ ಜಗದಲ್ಲಿ
ನೆಮ್ಮದಿಯ ಮಾತೆಲ್ಲಿ
ಒಡೆದು ಹೋಳಾದ ಮನಸ್ಸುಗಳು
ಕಡಿದು ಚೂರಾದ ದೇಹಗಳು
ನಿತ್ಯವೂ ಶಾಂತಿಗೆ ಭಂಗ
ತನ್ನಿಷ್ಟದಂತೆ-ತಾನಾಡುವ ನಾಟಕರಂಗ

ಶಪಿಸುತ್ತೇನೆ
ಈ ಜಗದ ವರ್ತನೆಗಳನ್ನು
ಇಲ್ಲಿನ ಬವಣೆಗಳನ್ನು
ನೀಚ ಕಠೋರ ಹೃದಯಗಳನ್ನು
ಕಣ್ಣು ಕಾಣದ ಮನಸ್ಸುಗಳನ್ನು

ಸಾಧ್ಯವಾದರೆ
ಆ ಶಾಂತ ನೆಲದಲ್ಲಿ 
ಹೆಜ್ಜೆಯಿಡುತ್ತೇನೆ
ಸದಾ ಧ್ಯಾನದಲ್ಲಿ ಮುಳುಗಿ
ಈ ಜಗವ ಮರೆಯುತ್ತೇನೆ.

6 comments:

Smt. Sindhu Naveen said...

ತು೦ಬಾ ಚೆನ್ನಾಗಿ ಬರೆಯುತ್ತೀರಿ.. ನಿಮ್ಮ ಲೇಖನಿಯಿ೦ದಾ ಇನ್ನಷ್ತು ಲೇಖನಗಳು ಹೊರಹೊಮ್ಮಲಿ...
ಶುಭವಾಗಲಿ ನಿಮಗೆ..

Vasanthkumar Mysoremath said...

ಸದಾ ಧ್ಯಾನದಲ್ಲಿ ಮಿಂದು
ಈ ಜಗವ ಮರೆಯುತ್ತೇನೆ ....

-----ಸಾಧ್ಯವಾ ವಸಂತ್ ??
---------
ಹಸಿದ ಹೊಟ್ಟೆಯ ವೇದನೆಯನ್ನು ತಾಳ ಬಯಸುತ್ತೇನೆ,
ಸೂರಿಲ್ಲದೆ ಸುಡುತ್ತಿರುವ ನೆತ್ತಿಯನ್ನು ಸವರುತ್ತಿದ್ದೇನೆ,
ಒಣಗಿದ ಬಿರುಕು ಬಿಟ್ಟ ನೆಲವನ್ನು ಕಂಡು ಮರುಗುತ್ತಿದ್ದೇನೆ
ಮರೀಚಿಕೆಯಂತೆ ಬರುವ ಮೋಡವನ್ನು ಕಾಯುತ್ತಿದ್ದೇನೆ,
ಸಾವಾದರೂ ಬರಬಾರದೇ ಎಂದು ಯಾಚಿಸುತ್ತಿದ್ದೇನೆ.

- ಬವಣೆಯಿಂದ ಬತ್ತಿ ಬೆಂದಿರುವ ರೈತ ಬಂಧು
- ವಸಂತಕುಮಾರ್ ಮೈಸೂರುಮಠ

DEW DROP (ಮಂಜಿನ ಹನಿ) said...

ಶಾಂತಿ ಮಂತ್ರ ಜಪಿಸುತ್ತಾ ಬುದ್ಧನ ಪ್ರತಿಮೆಯನ್ನು ಮನದಲ್ಲಿ ಧ್ಯಾನಿಸುತ್ತಾ ಓದುಗರ ಮನದಲ್ಲಿ ಆ ಮಹಾನುಭಾವನ ಉದಾತ್ತ ಚಿಂತನೆಗಳನ್ನು ಬಿತ್ತಿದ ಕವಿತೆ ಇದು.. ತುಂಬಾ ಸುಂದರವಾಗಿ ಅರಳಿದೆ.. ಬದ್ಧ ಕಂಡ ನವ ಮತ್ತು ಸಮಾನತೆಯ ಸಮಾಜದ ನಿರ್ಮಾಣದ ಪರಿಕಲ್ಪನೆಗಳನ್ನು ಬಿಚ್ಚಿಡುತ್ತಿದೆ ಕವಿತೆ.. ತುಂಬಾ ಸುಂದರವಾದ ಕವಿತೆ, ಹಿಡಿಸಿತು ವಸಂತಣ್ಣ..:)))

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿದೆ ತುಂಬು ಮನಸ್ಸಿನ ಧನ್ಯವಾದಗಳು ಮೇಡಂ ಪ್ರತಿಕ್ರಿಯೆಗೆ ಧನ್ಯವಾದಗಳು...

ವಸಂತ್ ಕೋಡಿಹಳ್ಳಿ said...

ಖಂಡಿತ ಜಗದ ಬಗ್ಗೆ ವ್ಯಾಮೋಹವೇ ಇಲ್ಲದಾಗ ಈ ಜಗತ್ತಿನಿಂದ ದೂರವಾಗಿ ಗಾಳಿಯಲ್ಲಿ ತೇಲಿಹೋದ ಮನಸ್ಸು ಸದಾ ಬುದ್ದಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಚಾಮಿ ಎಂದು ಧ್ಯಾನಿಸುತ್ತೆ ಅಂತ ನನ್ನ ಅಭಿಮತ.. ನಿಮ್ಮ ಅನಿಸಿಕೆಗೆ ಧನ್ಯವಾದಗಳು ಹಾಗೂ ನಿಮ್ಮ ಸಾಲುಗಳಿಗೂ ಕೂಡ....

ವಸಂತ್ ಕೋಡಿಹಳ್ಳಿ said...

ನಿಮ್ಮ ವಿಮರ್ಶೆಯಂತಾ ಸಾಲುಗಳಿಗೆ ಧನ್ಯವಾದಗಳು ಪ್ರಸಾದಣ್ಣ ಈ ಒಕ್ಕಣೆಯಂತ ಮಾತುಗಳೇ ನನ್ನೊಳಗೆ ಕಾವ್ಯಾಸಕ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸೋದು ಮತ್ತೊಮ್ಮೆ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳನ್ನು ಸಲ್ಲಿಸುವೆ....