Thursday, February 9, 2012

ಕಾಲಮಾನ....


ಭವದ ಬಯಲಲ್ಲಿ
ಸಾವಿನ ಕರಿನೆರಳು
ಸೂರ್ಯನಿಲ್ಲದ ಹಗಲು
ಕತ್ತು ಬಿಗಿದಿದೆ ಮುಗಿಲು

ಸೋಲಿನ ಸುಳಿಯಲ್ಲಿ
ಸಿಕ್ಕಿ ಸೊರಗಿದೆ ಮನ
ಋತು-ಮಾನದ ಬೇಗೆಯನು
ಕಳಚಿಕೊಳ್ಳುವ ಋಣ

ಕಿತ್ತು ತಿನ್ನಲು ಕಾದ
ರಣ-ಹದ್ದಿನ ಧ್ಯಾನ
ಎಣಿಸುತ್ತಿದೆ ಕಾಲಮಾನ
ಸಾವ ಸಮೀಪದ - ಕ್ಷಣ

ಭವದ ಬಯಲೊಳಗೆ
ಬದುಕು ಎಲ್ಲರಿಗೂ ಒಂದೆ
ಮೇಲು ಕೀಳಿನ ನಡುವೆ
ಸಣ್ಣದೊಂದು ಬಿರುಕಂತೆ

ಯಾರು ಏನೆಂದರೂ
ಕುರುಡಾಗದಿರಲಿ ಮನಸ್ಸು
ಮತ್ತೊಂದು ಸಾವಿಗಾಗಿ
ಹೊಂಚು-ಹಾಕಿದಿರಲಿ ಸಮಯ

4 comments:

Dr.D.T.Krishna Murthy. said...

ವಸಂತ್;ನಿಮ್ಮಿಂದ ಇಂತಹ ಅದ್ಭುತ ಕವನ ಬರುತ್ತಿರುವುದಕ್ಕೆ ಅತ್ಯಂತ ಸಂಭ್ರಮ ಪಡುವವರಲ್ಲಿ ನಾನೂ ಒಬ್ಬ.ಹಾರ್ದಿಕ ಅಭಿನಂದನೆಗಳು.ಬ್ಲಾಗಿಗೆ ಬನ್ನಿ.

ವಸಂತ್ ಕೋಡಿಹಳ್ಳಿ said...

ನಿಮ್ಮೆಲ್ಲರ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಗಳೇ ನನ್ನ ಕವನಗಳಿಗೆ ಸ್ವೂರ್ತಿ ಸರ್ ತುಂಬಾ ಧನ್ಯವಾಗಳು....

ಮೌನರಾಗ said...

ಚಂದದ ಕವನ......ಅರ್ಥಪೂರ್ಣವಾಗಿದೆ...

ಜಲನಯನ said...

ವಸಂತ್ ಬಹಳ ಸುಂದರ ಕವನ.. ಪದಬಳಕೆಯಲ್ಲಿ ..ಅಷ್ಟೇ ನೈಜ ಭಾವಪ್ರಕಟಣೆಯಲ್ಲಿ...ಶುಭವಾಗಲಿ...ಇನ್ನೂಬರಲಿ ಬರಬರದಂತೆ ಪದಹದದಲ್ಲಿ ಕೋದ ಮಾಲೆಯಾಗಿ....