Saturday, February 11, 2012

ಹರಳಿಕಟ್ಟೆ ಮಾತು… (ನಗೆ ಬರಹ)


[ಗುಂಡ ನಡ್ಗತ ನಡ್ಗತ ಅರಳಿಕಟ್ಟೆ ಅತ್ರ ಬರ್ತಿದ್ದಾನೆ. ಕೆಂಚ ಅರಳಿಕಟ್ಟೆ ಮೇಲೆ ಬೀಡಿ ಸೇದ್ತ ಕುಂತಿದ್ದಾನೆ. ಗುಂಡ ಬರ್ತಿರೋ ದಾಟಿ ನೋಡಿ]
‘’ಏನ್ಲಾ ಗುಂಡ ಈ ಪಾಟಿ ನಡ್ಗತ ಬರ್ತಿದ್ದಿಯ ಹಿಮಲಯಕ್ಕೇನಾರು ಹೋಗಿ ಬಂದ್ನೇನ್ಲ..'' ?.
ಅದ್ಯಾಕ್ಲ ಕೆಂಚ ಹೀಮಾಲಯಕ್ಕೆ,,,,,,?? ರಾರ್ತಿನಾಗೆಲ್ಲಾ ಅಟ್ಯಾಗೇ ಇದ್ದೆ !!.
ಮತ್ಯಾಕ್ಲ ಒಳ್ಳೆ ಪಿಡ್ಸ್ ಬಂದಿರೋನ್ ತರ ನಡ್ಗಾತಿದ್ದೀ’’ !
‘’ಮೊನ್ನೆ ಟಿವಿ 9 ನೋಡ್ದೆ ಕಣ ಅದ್ಕೆ ಇಂಗೆ’’..
‘’ಹೌದ ಏನ್ಲಾ ಅಂತಾದ್ದು ತೋರಿಸಿದ್ದು ಟಿವಿ 9 ನಾಗೆ’’ ?
‘’ಯಾವಾನೋ ‘’ಕಿಮ್ ಜಾಂಗ್ ಹುನ್’’ ಅಂತೆ ಕನ್ಲ... ಅವ್ನಿಗಿನ್ನ 27 ವರ್ಸನಂತೆ.. ಯಾವ್ದೋ ಕೊರಿಯ ದೇಶ್ದಾಗೆ ಇದ್ದಾನಂತೆ ಅವ್ರಪ್ಪ ಬೇರೆ ಸತ್ತೋದ್ನಂತೆ, ಈಗ ಅವ್ನೆ ದೇಶಾನ ಆಳೋವ್ನಂತೆ ಕನ್ಲ. ನಮ್ ಮೇಲೆ ಬಾಂಬ್ ಹಾಕಿ ಸುಟ್ಟಾಕ್ತಾನಂತೆ ಅಂಥ ತೋರ್ಸಿದ್ರು’’ !
‘’’’ಅಲಲಲಲಾ ಯಾವಾನೋ ‘’’ಕಿಮ್ ಜಾಂಗ್ ಹುನ್ ಅಂತೆ’’ ಅವ್ನಿಗಿನ್ನ 27 ವರ್ಸನಂತೆ’’ ಯಾವ್ದೋ ಕೊರಿಯ ದೇಶ್ದಾಗೆ ಅದಾನಂತೆ ನಮ್ ಮೇಲೆ ಬಾಂಬ್ ಹಾಕಿ ಸುಟ್ಟಾಕ್ತಾನಂತೆ ಏನ್ಲಾ ಒಳ್ಳೆ ಆಡೋ ಮಗಿಗೇಳ್ದಂಗೆ ಹೇಳ್ತಿದ್ದೀಯ ?.. ಯಾವಾನೋ ಎಲ್ಲೋ ಕೊರಿಯಾ ದೇಶ್ದಾಗಿದ್ದು ಇಲ್ಲೆಂಗ್ಲ ಬಾಂಬ್ ಹಾಕ್ತಾನೆ’’’…
ವಿಷ್ಯ ಅದಲ್ಲ ಕನ’’,,,ಮುಂದ್ಕೇಳ್ತೀನಿ ಆಮೇಕೆ ನಗು ಆಯ್ತ ?....
ಸರಿ ಹೇಳಪ್ಪ !!
ನೋಡು ಅವ್ನು ಸಣ್ಣವ್ನನಾದ್ರು ಅವ್ನತಾವ 68 ನ್ಯೂಕ್ಲಿಯಸ್ ಬಾಂಬ್ಗಳು ಅವಂತೆ’’,,‘’ಒಂದಾಕಿದ್ರೆ ಸಾಕಂತೆ ಒಂದ್ದೇಶನೆ ಫೀನಿಸ್ ಗೊತ್ತ’’ ?,,,,,
‘’’’ಓಓಒಓ ಸರಿ ಸರಿ ಇದೇನಾ ಆ ಟಿವಿ9 ನವ್ರು ನಿಂಗೇ ತೋರ್ಸಿದ್ದು’’’. ಅವ್ರುಗು ಮಾಡಾಕ ಬೇರೆ ಕೆಲ್ಸ ಇದ್ದಂತೆ ಕಾಣಿ’’’,,, ಇಂಗಾನ್ನ ಜನಕ್ಕೆ ಭಯ ಇಕ್ಸೋವ ಅಂತಾನೇನೋ ?’’… ಯಾವಾಗನ್ನ ನೋಡು ಪ್ರಳಯ... ಫಜೀತಿ... ‘’ಅದು, ಇದು, ಅಂಥ ಭಯ ಇಕ್ಸೋದೆ ಆಗೋಯ್ತು ಅವ್ರ್ ಜನ್ಮ ..’’!
‘’ಲೇ ಕೆಂಚ ಅಂಗೆಲ್ಲಾ ಹೇಳ್ಬೇಡ ಕನ್ಲ,, ಟಿ.ವಿ 9 ನವ್ರಗೆ ಏನಾರು ಅಂದ್ರೆ ನಾ ಸುಮ್ಕಿರಾಕಿಲ್ಲ ಅಟ್ಟೇಯಾ,,,,’’’ ಅವ್ರೇನು ಸುಳ್ಳೇಳ್ತಾರ ?’’’’…
‘’ಏನೋ ನಂಗೊತ್ತಿಲ್ಲಪ್ಪ’’ !!!
‘’ನೋಡ್ಲ ಅವ್ನು ಸರಿಲ್ವಂತೆ ಯಾವಾಗ್ ಬೇಕಾರು ನಮ್ ಮೇಲೆ ಬಾಂಬ್ ಎಸಿಬೊದಂತೆ ಅದ್ಕೆ ಊರ್ ಬಿಟ್ಟು ಹೋಗೋಣಂತಿದ್ದಿನಿ ಕೆಂಚ’’…
‘’ಅಲಾ ಗೂಬೆ ಗುಂಡ’’ ದೇಶನೆ ಸುಟ್ಟೋಗೋವಾಗ ನೀ ಮಾದಟ್ಟಿಯಿಂದ ಸೋಮನಾಪುರಗಂಟ ಹೋಗ್ಬಿಟ್ರೆ ಆಗ್ತಾದ... ಅಲ್ಲಾ ಮೊನ್ನೆ ಏನೋ ಪ್ರಳಯ ಅಗುತ್ತೆ ಅಂದಿಲ್ವ ಏನಾರು ಆಯ್ತ ಹೇಳು ? ಮುಂದ್ಕೇನು ಅಗುತ್ತೆ ಅಂತಾರಲ್ಲ ಅದೆಲ್ಲಾ ಆಗ್ಬಿಡುತ್ತಾ ಗುಂಡ ?.... ಆದ್ರೆ ಒಂದೇ ದಪ ಎಲ್ರು ಹೋಗೋಣ್ವಂತೆ ನಡಿಲಾ.. ಹೊಲ್ದಾಗ ಕುರಿಗ್ಲು ಏನಾದ್ವೋ ಏನೋ ?,,,, ಮೊನ್ನೆ ಒಂದ್ ಕುರಿನ ಮುದಿ ನರಿ ತಿಂದಾಕ್ಲಿಲ್ವ ವಿಷ್ಯ ನಿನ್ ಚೆನ್ನಿಗೆ ಗೊತ್ತಾದ್ರೆ ನಿನ್ನ ಸಿಗ್ದಾಕ್ತಾಳೆ ನಡಿಲಾ ಅಯ್ಯೋ ನಡೀಲಾ ಇನ್ ಯಾವ್ದನ್ನ ತಿಂದಾಕ್ಬಿಟ್ಟಾತು……2 comments:

ರವಿ ಮುರ್ನಾಡು said...

ಚೆನ್ನಾಗಿದೆ ಪದ ಸಾಮ್ರಾಜ್ಯದ ಶ್ರೀಮಂತಿಕೆ ವಸಂತಣ್ಣ. ಖುಷಿ ಆಯಿತು.

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರವಿ ಮುರ್ನಾಡು ಸರ್ ...ಇದು ಮೊದಲ ಪ್ರಯತ್ನ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಮತ್ತಷ್ಟು ಬರೆಯುವ ಮನಸ್ಸಾಗುತ್ತಿದೆ...