Saturday, February 18, 2012

ನಾನೂ ಬಾಳುವೆ ಛಲದಿಂದ


ಬುಟ್ಟಿಯ ಹೊತ್ತು
ಮನದೊಳಗತ್ತು
ಬರುತಿಹೆ ಭಾರದ ಮನಸಿಂದ

ಮಣ್ಣಲಿ ನಡೆಯುತ
ಹೆಜ್ಜೆಯ ನಿಕ್ಕುತ
ನಡೆದಿಹೆ ತೋಟದ ಬಯಲತ್ತ

ತಂದೆಯು ಇಲ್ಲಾ
ತಾಯಿಯು ಇಲ್ಲಾ
ನೋಡುವರ್ಯಾರು ನನ್ನನ್ನ

ಮುಸುರೆಯ ತಿಕ್ಕುವ
ಕಸವನು ಗುಡಿಸುವ
ಜೀವನ ನೀಡಿದ ಭಗವಂತ

ಶಾಲೆಯ ಕಲಿಕೆ
ಗೆಳೆಯರ ಜೋಡಿಗೆ
ಓದಲು ನನಗೂ ಆಸೆಯಿದೆ

ಕಳಿಸುವರ್ಯಾರು
ಪಾಠದ ಮನೆಗೆ
ಗುಡಿಸಲ ಕಾಯುವ ಪಾಡುಯಿದೆ

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನ-ವಿದು
ಚಲಿಸುವ ಬಂಡಿ
ನಾನೂ ಬಾಳುವೆ ಛಲದಿಂದ

4 comments:

Dr.D.T.Krishna Murthy. said...

ವಸಂತ್;ಸುಂದರ ಕವಿತೆ.ಚಲ ಎನ್ನುವುದು ಛಲ ಎಂದಿರಬೇಕಿತ್ತು.ನನ್ನ ಬ್ಲಾಗಿಗೆ ಬನ್ನಿ.

ರವಿ ಮುರ್ನಾಡು said...

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನವೆಂದು
ಸಾಗುವ ಬಂಡಿ
ಬಾಳುವೆ ನಾನೂ ಛಲದಿಂದ !
:ಲಯಬದ್ಧ ರಚನೆ ಖುಷಿ ಆಯಿತು. ಈ ಸಾಲುಗಳು ತುಂಬಾ ಚೆನ್ನಾಗಿದೆ.

sunaath said...

ವಸಂತ,
ಇದು ಮನಸ್ಸನ್ನು ತಟ್ಟುವ ಕವನ. ಲಯಬದ್ಧವಾಗಿದೆ.

Ashok.V.Shetty, Kodlady said...

ವಸಂತ್....

ಸುಂದರ, ಲಯಬದ್ಧ ಸಾಲುಗಳು....ಚೆನ್ನಾಗಿದೆ...

ನನ್ನ ಬ್ಲಾಗ್ ಗೂ ಬನ್ನಿ...