ಅವಳ ನೆನಪು
ಬೇಡವೆಂದರೂ ಕಾಡುತ್ತದೆ
ಕೆಂಪು ಇರುವೆ ಕಡಿತಗಿಂತಲೂ ಹೆಚ್ಚಾಗಿ
ಬರೆಯಲಾಗದ ಕವನವನ್ನು
ಬರೆಯಲೇ ಬೇಕೆಂದು ಬೆನ್ನಿಗೆ ಬಿದ್ದ
ಬೇತಾಳನಂತೆ
ಮೌನದಲ್ಲೂ
ಮನಸ್ಸು ತಲ್ಲಣಗೊಳ್ಳುತ್ತದೆ
ಹೃದಯದಲ್ಲಿ ಅವಳ ರೂಪ
ನಿಧಾನವಾಗಿ ತೆರೆದುಕೊಳ್ಳುತ್ತದೆ
ಗಲಿಬಿಲಿಗೊಳ್ಳುವ ಮನಸ್ಸಿನಲ್ಲಿ
ಅಕ್ಷರಗಳು ಮೂಡುವದಕ್ಕಾದರೂ
ಆಸ್ಪದವುಂಟೇ ?
ಅವಳ ಚಂದ್ರನಂತ ನೋಟವನ್ನು
ಏನೆಂದು ಬರೆಯಲಿ
ಏನೆಂದು ಬರೆಯಲಿ
ಬರೆದೇ ಕೂಡಲೆ ?
ಆಗದೆನ್ನಲೆ ?
ಆಗದೆನ್ನಲೆ ?
ಭ್ರಾಂತಿಯ ಬಯಲಲ್ಲಿ ಮೂಡವ
ಅಕ್ಷರಗಳಾದರೂ ಎಂತವೋ ಏನೋ ?
ಎಷ್ಟಾದರೂ ಸರಿ ನನ್ನವಳಲ್ಲವೆ
ಅವಳನ್ನೇ ಬರೆಯಲೆತ್ನಿಸುವೆ
ಅವಳನ್ನೇ ಬರೆಯಲೆತ್ನಿಸುವೆ
ಅದು ಕವನವಾದರೂ ಸರಿ
ಕಥೆಯಂತಾದರೂ ಸರಿ
ಓದಿ ತೀರ್ಮಾನಿಸುವ ಇಚ್ಛೆ
ಖಂಡಿತ ನನ್ನದಲ್ಲವಲ್ಲ !…

4 comments:
ನೆನಪು-ಕೆಂಪು ಇರುವೆ ಕಡಿತ, ಬೆನ್ನಿಗೆ ಬಿದ್ದಬೇತಾಳ..... ಏನಿದು ನಿಮ್ಮ ವೈಖರಿ ವಸ೦ತ್! ನನ್ನ ಬ್ಲಾಗ್ ಗೂ ಬನ್ನಿ.
ವಸಂತ್ ...
ಚೆನ್ನಾಗಿದೆ ನಿಮ್ಮ ಕವನ....ಇಷ್ಟ ಆಯಿತು,,,,
ಅವಳ ಕೋಪ, ಪ್ರತಾಪ, ನಂತರ ಸಂತಾಪವನ್ನು ಈ ರೀತಿ ವರ್ಣಸಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು prabhamani ಮೇಡಂ...
ಪ್ರತಿಕ್ರಿಯೆಗೆ ತುಂಬು ಮನಸ್ಸಿನ ಧನ್ಯವಾದಗಳು ಸರ್...
Post a Comment