ಹೆಪ್ಪುಗಟ್ಟಿದ-ಮಾತು
ದೇಹ ಸುಡುವ-ಬೆಂಕಿ
ಮನಸ್ಸು ಮಾಗಿದ ಸಮಯ
ಅಸ್ಪಷ್ಟ ಆಕೃತಿಗಳ ಮಿಲನ
ಬೆರಗುಗಣ್ಣಿನ-ನೋಟ
ಕದಲಾಡುವ ಹಣತೆ
ಮೌನವ ಬೆನ್ನಟ್ಟಿದ ಉಸಿರು
ಮನಸ್ಸು ಕಾಮನ-ಬಿಲ್ಲು
ಕವಲೊಡೆವ ಆಸೆಗಳು
ನಿಚ್ಚಳದ ಭಾವ
ನೆಲದ ಎದೆಯೊಳಗೆ
ಹೆಡೆ-ಬಿಚ್ಚಿದ ಬೀಜ
ಹೂ ಅರಳುವ-ಗಳಿಗೆ
ತಂಗಾಳಿಯ ಸ್ವರ್ಷ
ಕತ್ತಲ ಕರಿಮಣಿಯೊಳಗೆ
ಹೊಳೆವ ಮುತ್ತಿನ ಹರಳು
4 comments:
ವಸಂತ್...........
ಸುಂದರ ಕವನ,
ಇಷ್ಟವಾಯ್ತು.
ನಿಮ್ಮ ಪ್ರತಿಕ್ರಿಯೆಗೆ ತುಂಬ ತುಂಬಾ ಧನ್ಯವಾದಗಳು ಸರ್ ...
ಕತ್ತಲ ಕರಿಮಣಿಯೊಳಗೆ
ಹೊಳೆವ ಮುತ್ತಿನ ಹರಳು
very nice
Swarna
ವಾವ್ಹ್.. ತುಂಬಾ ಸುಂದರ ಕವನ...
ಭಾವಗಳು ಹಾಗೆ ಮನ ಸ್ಪರ್ಶಿಸುತ್ತದೆ....
ಪ್ರತಿ ಸಾಲನ್ನೂ ಬಹಳ ಇಷ್ಟ ಪಟ್ಟೆ..
Post a Comment