Wednesday, March 7, 2012

“ಅಂತರಾಷ್ಟ್ರೀಯ ಮಹಿಳಾ ದಿನ”ದ ಶುಭಾಶಯಗಳು

      ಅಮ್ಮ, ಅಕ್ಕ, ಅಜ್ಜಿ ಮೊದಲಾಗಿ ಇಡೀ ಪ್ರಪಂಚವನ್ನೇ ಅರ್ಥದಷ್ಟು ತುಂಬಿರುವ ಈ ವಾತ್ಸಲ್ಯ ತುಂಬಿದ ಮಾತುಗಳು ಎಲ್ಲಾ ಭಾಷೆ, ಧರ್ಮ, ಸಂಸ್ಕೃತಿ, ವರ್ಗಗಳಲ್ಲೂ ಕೇಳಿಬರುತ್ತದೆ. ಅಪಾರ ಸಾಧನೆಗೈದು ಉತ್ತುಂಗಕ್ಕೇರಿರುತ್ತಿರುವ ಸಂಗೀತ, ಸಾಹಿತ್ಯ, ಸಿನಿಮಾ, ಕ್ರೀಡೆ, ಪೋಲೀಸ್, ವೈಮಾನಿಕ, ಹೀಗೆ ಎಲ್ಲಾ ರಂಗಗಳಲ್ಲೂ ಮಹಿಳೆಯರು ದುಡಿಯುವುದನ್ನು ನಾವು ಕಾಣಬಹುದು ಭಾಷಾವಾರು, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ, ರಾಷ್ಟ್ರೀಯ, ಅಥವಾ ರಾಜಕೀಯ ಕ್ಷೇತ್ರಗಳಲ್ಲೂ ತನ್ನದೇ ಆದ ಚಾಪನ್ನು ಮೂಡಿಸಿದ್ದಾಳೆ. ಮದರ್ ತೆರೇಸಾ, ಇಂದಿರ ಗಾಂಧಿ, ನಮ್ಮ ನಾಡಿನ ದೀರ ಕಿತ್ತೂರಿರಾಣಿ ಚೆನ್ನಮ್ಮ, ಒನಕೆ ಓಬವ್ವ ಇಂಥ ದಿಟ್ಟ ಚೇತನಗಳನ್ನು ಎಂದೂ ಮರೆಯಲು ಸಾಧ್ಯವಾಗುವುದಿಲ್ಲ. ಪುರುಷರಿಗೆ ಮಾದರಿಯಾಗಿ ದುಡಿಯುತ್ತಿರುವ ವಿಶ್ವದ ಎಲ್ಲಾ ಮಹಿಳೆಯರಿಗೂ “ಅಂತರಾಷ್ಟ್ರೀಯ ಮಹಿಳಾ ದಿನ”ದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಲು ಬಯಸುತ್ತೇನೆ.

1 comment:

sunaath said...

ನಿಮ್ಮ ಜೊತೆಗೆ ನನ್ನದೂ ಶುಭಾಶಯಗಳು.