ಆಕಾಶದಷ್ಟು ಆಸೆಗಳು
ಆಸರೆಯಾಗಿ ನಿಲ್ಲಲಿಲ್ಲ
ಭೂಮಿಯಗಲ ಮಾತುಗಳು
ಬಾಯ್ಬಿಚ್ಚಿ ಮಾತಾಡಲಿಲ್ಲ
ನೆಮ್ಮದಿಯ ರೇಖೆಗಳು
ಕೈಯಲ್ಲಿ ಮೂಡಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಅಳಿಸಿಬಿಡುತ್ತೇನೆ
ಕೈಯಲ್ಲಿ ಮೂಡಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಅಳಿಸಿಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ
ಕನಸುಗಳಿಗೆ ರೆಕ್ಕೆಬರಲಿಲ್ಲ
ಭಾವನೆಗಳು ಬಲಗೊಳ್ಳಲಿಲ್ಲ
ಕಣ್ಣೀರಿಗೆ ಭರವಿರಲಿಲ್ಲ
ಸಂಬಂಧಗಳು ಸಾವರಿಸಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಕಳೆದುಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ
ದಾರಿ ದಿಕ್ಕುತೋರಲಿಲ್ಲ
ಮೌನ ಮಾತನಾಡಲಿಲ್ಲ
ರಕುತ ಒಳಸೇರಲಿಲ್ಲ
ಹೃದಯ ಸದ್ದುಮಾಡಲಿಲ್ಲ
ಒಂದು ಕ್ಷಣ ಕಾಯಿರಿ
ಒಂದು ಕ್ಷಣ ಕಾಯಿರಿ
ಅವುಗಳನ್ನು ಬದಲಿಸಿಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ
ಸೂರ್ಯ ಕೆಂಪಾಗಲಿಲ್ಲ
ಗಾಳಿ ತಣ್ಣಗಾಗಲಿಲ್ಲ
ಚಂದ್ರ ಬೆಳಕತೋರಲಿಲ್ಲ
ಕತ್ತಲು ಕವಲೊಡೆಯಲಿಲ್ಲ
ಕ್ಷಮಿಸಿ ಬಿಡಿ ನನಗೆ
ಈ ಬದುಕು ಅರ್ಥವಾಗಲಿಲ್ಲ
ಅದಕ್ಕೆ
ನಾನು ನಾನಾಗಲಾಗಲಿಲ್ಲ

4 comments:
ವಸಂತ್;ಸುಂದರ ಕವನ.ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್
ಒಂದು ಕ್ಷಣ ನಮ್ಮ ನೀತಿಗೆ, ಬದುಕುವ ರೀತಿಗೆ ವಿಸ್ಮಯ ಅನಿಸಿಬಿಡುತ್ತದೆ...
ನಾವು ನಾವಾಗಿ ಬದುಕುವುದಕ್ಕಿಂತ, ಇನ್ನೊಬ್ಬರ ಮುಂದೆ 'ನಾವು ನಾವೇ' ಎಂದು ತೋರಿಸಿಕೊಳ್ಳುವುದಕ್ಕೆ ಬದುಕುತ್ತೇವೆ...
ತೋರಿಕೆ ಜೀವನವಲ್ಲ ಎಂಬುದನ್ನ ಚೆನ್ನಾಗಿ ವಿವರಿಸಿದ್ದೀರಿ..
ಇಷ್ಟವಾಯ್ತು..
ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ ನಿಮ್ಮ ಮಾಡಿನಂತೆ ಖಂಡಿತ >ಇನ್ನೊಬ್ಬರ ಮುಂದೆ 'ನಾವು ನಾವೇ' ಎಂದು ತೋರಿಸಿಕೊಳ್ಳುವುದಕ್ಕೆ ಬದುಕುತ್ತೇವೆ< ಇದು ಆಗಬಾರದೂ ಆದರೂ ಅನಿವರ್ಯವಾಗುತ್ತಿದೆ ಇದಕ್ಕೆ ಅವರವರೆ ಆತ್ಮವಿಮರ್ಶೆ ಅವರವರೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದಷ್ಟೆ..
Post a Comment