Tuesday, May 29, 2012

ಕರ್ಮ ಫಲ


      “ಕರ್ಮ ಪದಕ್ಕೆ ಮೊದಲ ಅರ್ಥ ಕಾಯಕ. ಕೆಲಸ ಅಥವಾ ದುಡಿಮೆ ಎಂಬಾಗುತ್ತದೆ. ಲೋಕದಲ್ಲಿ ಮಾಡಲೇ ಬೇಕಾದ ಕರ್ತವ್ಯದ ನಿಯಮವನ್ನು ಕರ್ಮವೆಂದು ಹೇಳಬಹುದು. ಹಿಂದೂ ಧರ್ಮದ ಭಗವದ್ಗೀತೆಯ ಪ್ರಕಾರ ಕರ್ಮವೆಂಬ ಪದದ ಅರ್ಥ ಹೀಗಿದೆ. ಅಂದರೆ ಹಿಂದೂ ಧರ್ಮದಲ್ಲಿ ಹೇಳಲ್ಪಡುವ ನಾಲ್ಕು ಯೋಗಗಳಲ್ಲಿ ಕರ್ಮಯೋಗವೂ ಒಂದು. 'ಕರ್ಮ' ಎಂಬ ಶಬ್ದವು 'ಕೃ' ಎಂಬ ಧಾತುವಿನಿಂದ ಹುಟ್ಟಿರುತ್ತದೆ. 'ಕೃ' ಎಂದರೆ ಮಾಡುವುದು, ವ್ಯವಹರಿಸುವುದು ಮುಂತಾದ ಅರ್ಥಗಳ ಪ್ರಕಾರ ಕರ್ಮ ಎಂದರೆ ಕೆಲಸ ಎಂದು ತಾತ್ಪರ್ಯವಾಗುತ್ತದೆ. ಅಂದರೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ (ಕೆಲಸ) ಮಾಡುತ್ತಲೇ ಇರುತ್ತಾನೆ

         ಕರ್ಮಗಳಿಂದ  ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಒಳ್ಳೆಯ ಅಥವಾ ಕೆಟ್ಟ ಪ್ರತಿಫಲಗಳನ್ನು ಗಳಿಸಿಕೊಳ್ಳುತ್ತಾನೆ. ರೀತಿ ಕೆಲಸಗಳನ್ನು ಮಾಡುತ್ತಾ ಅದಕ್ಕೆ ಪ್ರತಿಫಲಗಳನ್ನು ಪಡೆಯುತ್ತಾ  'ಕರ್ಮಬಂಧ'ಕ್ಕೆ ಒಳಗಾಗುತ್ತಾನೆ. ಇದರಿಂದಾಗಿ ಮತ್ತೆ ಮತ್ತೆ ಹುಟ್ಟು ಸಾವುಗಳ ಚಕ್ರಕ್ಕೆ ಸಿಲುಕುತ್ತಾನೆ. ತಾನು ಮಾಡುವ ಕೆಲಸಗಳಿಂದ ಯಾವಾಗ  'ಕರ್ಮಬಂಧ' ಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮದಿಂದ ಮುಕ್ತನಾಗುತ್ತಾನೆ. ಒಂದೆಡೆ ಕೆಲಸಗಳು ಜನತೆಯನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಜನತೆಯ ಕರ್ಮವಿಮೋಚನೆಗೆ ಸಾಧನವಾಗುತ್ತದೆ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. 

     ಅದೇ ರೀತಿ ಕರ್ಮವೆಂಬ ಪದಕ್ಕೆ ಮತ್ತೊಂದು ಅರ್ಥದಲ್ಲಿ ಬಡತನ, ದಾರಿದ್ಯ್ರ, ಕಷ್ಟ ಕಾರ್ಪಣ್ಯಗಳು, ಕೈಗೂಡದ ಬಯಕೆಗಳು, ರೋಗ ರುಜಿನಗಳು ಹೀಗೆ ಹತ್ತಾರೂ ವ್ಯಾಖ್ಯಾನಗಳು ಹುಟ್ಟುತ್ತಾ ಸಾಗುತ್ತವೆ.  ಅಯ್ಯೋ ಶಿವನೆ ನಾನ್ಯಾವ ಕರ್ಮ ಮಾಡಿರುವೆ ನನ್ನ ಕಷ್ಟಕ್ಕೆ ಪ್ರತಿಫಲವೇ ಇಲ್ಲವೆ ? ಎಂಬಂತೆ ಹಲವಾರೂ ರೂಪಗಳಲ್ಲಿ ಜನರ ಮಧ್ಯೆ ಜೀವಾಳ ಪಡೆದುಕೊಳ್ಳುತ್ತದೆ. ಅದರಂತೆ ಮಾನವ ಸಂಬಂಧಗಳಲ್ಲಿ ಹಾಸುಹೊಕ್ಕಾಗಿ ಹೂತುಹೋಗಿದೆಯೂ ಸಹ. ಮಾಡಿದ ತಪ್ಪಿಗಾಗಿ ಕೆಲವರು ಶಿಕ್ಷೆಗೊಳಪಡುತ್ತಾರೆ. ಆದರೆ ಅವರು ತಮ್ಮ ಸಂವೇಧನೆಯನ್ನು ಕರ್ಮವೆಂಬ ಪದದ ಮೂಲಕವೇ ಸೂಚಿಸುತ್ತಾರೆ. ಕರ್ಮ ಸಿದ್ಧಾಂತವು ನಮ್ಮ ಧರ್ಮ ಗ್ರಂಥಗಳಲ್ಲಿ ಪ್ರತಿಪಾಧಿಸಿದಂತೆ ಹಲವಾರೂ ಅರ್ಥಗಳನ್ನೊಳಗೊಂಡಿದೆ. ಒಂದರ್ಥದಲ್ಲಿ ಕಾರ್ಯೋನಿಮಿತ್ತವಾದ ಕಾರಣಗಳನ್ನು ಹುಡುಕುತ್ತ ಸಾಗುವುದೇ ಕರ್ಮದ ಫಲ ಅಥವ ಕಾರ್ಯವೆನ್ನಬಹುದು. ಒಂದೆಡೆ ಬಿಡುವಿಲ್ಲದ ಕೆಲಸಗಳು ಮಾನವನನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಮಾನವನ ಕರ್ಮವಿಮೋಚನೆಗ ದಾರಿಯಾಗುತ್ತದೆ

   ಹಾಗೆಯೇ ತನ್ನ ದಾರಿದ್ರ್ಯವನ್ನು ದೂರಮಾಡುವ ಸಾಧನವೂ ಕರ್ಮವೆಂಬ ಪದದಲ್ಲೇ ಅಡಗಿದೆ. ಎಲ್ಲಾ ತೊಂದರೆಗಳಿಗೂ ಮೂಲ ರೂಪ ಇಕರ್ಮಫಲವೆಂದರೆ ತಪ್ಪಾಗಲಾರದು. ಆದರೆ ನಾವು ಸೋಮಾರಿತನದಿಂದ ಕರ್ಮದ ಅರ್ಥವನ್ನು ಹುಡುಕಲು ಪ್ರಯತ್ನಿಸಿದರೆ ಅದಕ್ಕೆ ಯಾವುದೇ ಅರ್ಥವು ಸಿಗುವುದಿಲ್ಲ. ನಮ್ಮ ಕಷ್ಟ ನಷ್ಟಗಳನ್ನು ಕರ್ಮವೆಂಬ ಪದಕ್ಕೆ ತೂಗುಹಾಕದೆ ತಾನು ಮಾಡುವ ಕಾರ್ಯಗಳನ್ನು ನಿಷ್ಟಾನೂಸಾರ ಮಾಡುತ್ತ ಕರ್ಮಬಂಧಕ್ಕೆ ಸಿಲುಕದಂತೆ ಮಾಡಿ ಅದೇ ಕೆಲಸಗಳನ್ನು ಆತ್ಮಸಾಕ್ಷಾತ್ಕಾರ ವನ್ನಾಗಿಸಿಕೊಳ್ಳುವುದೇ ಇದರ ಮೂಲ. ಅಂದರೆ ಮುಕ್ತಿಗೆ ಸಾಧನವನ್ನಾಗುವಂತಾಗುವುದೇ ಕರ್ಮಯೋಗದ ಫಲ. ಸಕಲ ಕಾರ್ಯಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಿರ್ವಹಿಸುತ್ತಾ ಸಾಗಿದ್ದಲ್ಲಿ ಕರ್ಮವೆಂಬುದು ನಮ್ಮನ್ನು ಕಳಚಿ ಬಹುದೂರ ಸಾಗಿಹೋಗುತ್ತದೆ. ಅದರಂತೆ ನಮ್ಮ ಜೀವನವನ್ನು ಸಾಕ್ಷಾತ್ಕಾರದತ್ತ ಕೊಂಡೊಯ್ಯುವ ಕೀಲಿಯೂ ಕರ್ಮಫಲವೇ ಆಗಿದೆ.

(ನನಗೆ ಗೊತ್ತಿರುವಷ್ಟು ಬರೆಯಲು ಪ್ರಯತ್ನಿಸಿದ್ದೇನೆ ಏನಾದರೂ ಬದಲಾವಣೆಗಳಿದ್ದಲ್ಲಿ ಖಂಡಿತ ಸ್ವಾಗತಿಸುತ್ತೇನೆ)

Sunday, May 27, 2012

ಬೆಲೆ ಏರಿಕೆಯ ಬಿಸಿ


     ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ಗಗನಕ್ಕೆ ಮುಖಮಾಡುತ್ತಿವೆ. ಬಡವನ ಬದುಕು ದುಸ್ತರವಾಗುತ್ತಿದೆ. ಎಲ್ಲಾ ಹಂತದಲ್ಲೂ ಬೆಲೆಗಳಿಗೆ ಕಡಿವಾಣ ಹಾಕಬೇಕಿದ್ದ ಸರ್ಕಾರಗಳು ಹಣದುಬ್ಬದ ನೆಪವೊಡ್ಡಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕಾರ್ಯ ದರ್ಶಿಗಳು ಸಷ್ಟದ ಹೇಳಿಕೆಗಳನ್ನು ನೀಡುತ್ತ ಬಡ ಜನರ ಬದುಕಿನ ಮೇಲೆ ಭ್ರಹ್ಮಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಒಂದೇ ವರ್ಷದಲ್ಲಿ ಹಲವಾರೂ ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಲೇ ಸಾಗುತ್ತಿದ್ದಾರೆ. ಇದರಿಂದ ಎಲ್ಲಾ ದರಗಳು ತಂತಾನೇ ಹೆಚ್ಚಾಗುತ್ತಿವೆ. ಹಿಂದೆ 8 ರೂಗಳಿಗೆ ಸಿಗುತ್ತಿದ್ದ ದೋಸೆ ಇಂದು 30-50 ಗಡಿ ದಾಟುತ್ತಿದೆ. 8 ರೂ ಇರುವ ಪ್ರಯಾಣ ದರ ಇಂದು 30 ರ ಆಸುಪಾಸಿನಂಚಿನಲ್ಲಿದೆ. ಈಗಿನ ಬೆಲೆಗಳ ವೇಗವನ್ನು ಗಮನಿಸುತ್ತಿದ್ದರೆ ಮುಂದೆ ಯಾವ ಸ್ವರೂಪವನ್ನು ಪಡೆಯುತ್ತವೆ ಎನ್ನುವುದರ ದಿಗಿಲು ಮೂಡಿಸುವಂತಿದೆ. ಮೊದಲು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಅತಿ ಹೆಚ್ಚಳ ಅಂದರೆ 50 ಪೈಸೆಯಿಂದ  1 ರೂಗಳಿಗೆ ಸೀಮಿತಗೊಳಿಸುತ್ತಿದ್ದರು. ಆದರೆ ಈಗಿನ ಏರಿಕೆಯನ್ನು ಗಮನಿಸಿದರೆ ಅದು ರೂಪಾಯಿಗಳ ವೇಗದಲ್ಲಿ ಬೆಳೆಯುತ್ತಿವೆ. ಮೊನ್ನೆ ಹೆಚ್ಚಿಸಿದ ಪೆಟ್ರೋಲ್ ದರದ ತೀವ್ರತೆಯನ್ನೊಮ್ಮೆ ಗಮನಿಸಿನೋಡಿ ಹಿಂದಿನ ದಾಖಲೆಗಳನ್ನೆಲ್ಲಾ ಮೀರಿಸಿದಂತೆ 7.50 ರೂಪಾಯಿಗಳ ಹೆಚ್ಚಳ ಕಂಡಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಬೆಲೆಯನ್ನು ಹೆಚ್ಚಿಸಿರುವುದು ಎಂದರೆ ತಪ್ಪಾಗಲಾರದು. ಅದರಂತೆ ಇದೇ ವೇಗದಲ್ಲಿ ಡೀಸಲ್, ಸಿಮೇ ಎಣ್ಣೆ. ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.
     ಇದು ತೀರ ಮದ್ಯಮ ವರ್ಗದ ಜನರ ಬದುಕಿನ ಮೇಲೆ ಬರೆಯೆಳೆದಂತೆ ಅಲ್ಲವೆ?. ಕಡೇ ಪಕ್ಷ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಸುಂಕವನ್ನು ಕಡಿಮೆಗೊಳಿಸಿದರೆ ಈಗಿನ ದರದಲ್ಲಿ ಸ್ವಲ್ಪ ಮಟ್ಟಿನ ವಿನಾಯಿತಿಯನ್ನು ನೀಡಬಹುದಿದೆ. ಆದರೆ ಇದರ ಬಗ್ಗೆ ಕರ್ನಾಟಕದ ಯಾವುದೇ ರಾಜಕೀಯ ಪಕ್ಷಗಳು ತಲೆಕೆಡಿಸಿಕೊಂಡು ಕೂರುವುದಿಲ್ಲ. ಇವರಿಗೆ ಜನರ ಹಿತಾಸಕ್ತಿಗಿಂತ  ತಮ್ಮ ಕುರ್ಚಿಯ ಮೇಲಿನ ವ್ಯಾಮೋಹ ಮತ್ತು ಅಧಿಕಾರದಾಹ ಇಮ್ಮಡಿಯಾಗುತ್ತಿರುವುದು ಬಡವರನ್ನು ಬೀದಿಗೆ ತಳ್ಳುವಂತಾಗುತ್ತಿದೆ. ಇಲ್ಲಿ ಜನರ ಬವಣೆಗಳನ್ನು ಪೂರ್ಣವಾಗಿ ಮರೆತೇ ಹೋಗಿದ್ದಾರೆ ಎಂದರೆ ತಪ್ಪಾಗಲಾರದು. ಗಣಿ ಹಗರಣಗಳು, ವಯಕ್ತಿಕ ಕಲಹಗಳು, ಸಭೆ ಸಮಾರಂಭಗಳಲ್ಲಿನ ನಂಗನಾಚ್ ಪ್ರೈರುತ್ತಿಯನ್ನು ಬೆಳೆಸಿಕೊಂಡು ತಮ್ಮ ಗೌರವಕ್ಕೆ ತಾವೇ ಕುತ್ತುತಂದುಕೊಳ್ಳುತ್ತಿದ್ದಾರೆ, ಸದಾ ಕಿತ್ತಾಟ, ಕಚ್ಚಾಟ, ಕೆಸರೆರಚಾಟ ಇವುಗಳನ್ನು ಬಿಟ್ಟರೆ ಇವರ ಪ್ರಗತಿ ಶ್ಯೂನ್ಯವೆನ್ನಬಹುದು. ಇವರ ನಡುವಳಿಕೆಗಳು ಸಮಾಜಕ್ಕೆ ಮಾರಕವಾದವು. ಇವರ ವರ್ತನೆಯು ಹೀಗೇ ಸಾಗಿದ್ದಲ್ಲಿ ಶ್ರೀ ಸಾಮಾನ್ಯನ ಜೀವನ ಬಾಣಲೆಯಿಂದ ಬೆಂಕಿಗೆ ಬಿಳುವಂತ ಸನ್ನಿವೇಶ ತಳ್ಳಿಹಾಕುವಂತಿಲ್ಲ. ಇನ್ನಾದರೂ ರಾಜಕೀಯ ಪಕ್ಷಗಳು ತಮ್ಮ ಕಲಹಗಳನ್ನು ಮರೆತು ಜನರ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಒತ್ತುಕೊಡಬೇಕಿದೆ. ಅವರ ಕುಂದು ಕೊರತೆಗಳಿಗತ್ತ ಗಮನ ಹರಿಸಿಬೇಕಿದೆ. ಒಂದೆಡೆ ಬರ ತಾಂಡವವಾಡುತ್ತಿದೆ. ಇದರ ಮಧ್ಯದಲ್ಲೇ ಏರುತ್ತಿರುವ ಬೆಲೆಗಳು. ಇದರಿಂದ ಜನ ತತ್ತರಿಸುತ್ತಿದ್ದಾರೆ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇವುಗಳಿಗೆ ಆದಷ್ಟು ಶೀಗ್ರವೇ ಕಡಿವಾಣ ಆಕಬೇಕಿದೆ. ಜನರ ಸಮಸ್ಯಗಳಿಗೆ ಸ್ವಲ್ಪಮಟ್ಟಿಗಾದರೂ ಸ್ವಂದಿಸುವಂತ ಕಾರ್ಯಗಳಾಗಬೇಕಿವೆ. ಇದರಂತೆಯೇ ಜನರೂ ಸಹ ಸುಮ್ಮನಾಗದೆ ತಮ್ಮ ಹಕ್ಕುಗಳಿಗಾಗಿ ಹೋರಾಟದ ಹಾದಿಯನ್ನು ತುಳಿಯುಬೇಕು. ಪ್ರಜಾ ಪ್ರಭುತ್ವದ ಮಹತ್ವವನ್ನು ತಿಳಿದುಕೊಳ್ಳಬೇಕು. ಭ್ರಷ್ಟ ಅಧಿಕಾರಿಗಳ ಬಂಡವಾಳ ಬಯಲಿಗೆ ತರುವ ಪಣತೊಡಬೇಕು. ಚುನಾವಣೆಗಳಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವಂತ ಕೆಲಸವಾಗಬೇಕಿದೆ. ಇಲ್ಲದಿದ್ದಲ್ಲಿ ಅದೋಗತಿಯ ದಿನಗಳು ದೂರವಿಲ್ಲವೆಂದೆನಿಸುತ್ತಿದೆ.

Tuesday, May 22, 2012

ನಾಳೆ ನೆನ್ನೆಗಳ ಹುಡುಕುತ್ತ


ಲೋಕವ ಅರಿಯುವುದೇ ಜೀವನ
ಬದುಕಿನ ಅರ್ಥವನ್ನುಡುಕುವುದೇ ಪಯಣ
ಗೋಚರಿಸದ ಅದ್ಭುತಗಳೇ ದೇವರು
ನೊಂದ ಮನಕ್ಕೆ ಧೈರ್ಯತುಂಬುವವನೇ ನೆಂಟ
ಅರ್ಥಕಾಣದ ಆಸೆಗಳನ್ನು ಬದಿಗೊತ್ತಿ
ನಾಳೆ ನೆನ್ನೆಗಳ ಹುಡುಕುತ್ತ
ಸಂತಸದಿ ಸಾಗಿಹೋಗುವ ಬನ್ನಿ

Sunday, May 20, 2012

ಹೊಸ ಹಾದಿ


ಜೀವನದಲಿ ಬೇಸತ್ತು
ಅಲೆಯುತ್ತ ಸಾಗಿದ್ದೆ
ಬೆಟ್ಟಗಳು,
ಗುಹೆಗಳು,
ಸ್ಮಶಾನಗಳು,
ಗಿರಿ ಶಿಖರಗಳು,
ಕಾಡು ಮೇಡುಗಳ ಹೊಕ್ಕು
ಹೊರಬಂದಾಗ ನಾ
ಶ್ರೀಮಂತನಾಗಿದ್ದೆ
ಹೊನ್ನಿನಿಂದಲ್ಲ!
ಉತ್ಸಾಹದಿಂದ

ಆಗ ನನಗನಿಸಿತ್ತು
ಮನ ಮನೆಗಳಲ್ಲಿದ
ಗುಡಿ ಗೋಪುರಗಳಲ್ಲಿಲ್ಲದ
ಹಣ ಅಂತಸ್ಸಿನಲ್ಲಿಲ್ಲದ
ಜನ ಜಂಗುಳಿಯಲ್ಲಿಲ್ಲದ 
ಈ ಉತ್ಸಾಹ!
ಬೆಟ್ಟಗಳಲ್ಲಿ, ಗುಹೆಗಳಲ್ಲಿ
ಸ್ಮಶಾನಗಳಲ್ಲಿ,
ದೊರೆತದ್ದಾದರೂ ಹೇಗೆ!
ಸೋಜಿಗವೆನಿಸಿತ್ತು

ನೊಂದ ಮನಸ್ಸಿಗೆ
ಸರ್ವತಾ ನೆಮ್ಮದಿಯೇ
ಮೈದಡವಿ ಲಾಲಿಸಿದಂತೆ
ನಾನಲ್ಲಿ ನಿದ್ರಿಸಿದ್ದೆ
ಹೊಸದೊಂದು ಬರವಸೆಯ
ಆಶಾಕಿರಣ ಮೂಡಿತ್ತು
ನವ ಕಾವ್ಯದ ಮುನ್ನುಡಿಗೆ 
ಅಂಕಿತ ಬರೆದಿತ್ತು
ನವ್ಯ ಹಾದಿಯೊಂದು
ನನಗಾಗಿ ಕಾಯುತ್ತಲಿತ್ತು
 

Saturday, May 12, 2012

ವಿರಹಾಜ್ಞಿ

ಈ ಘೋರ ವಿರಹವನ್ನು
ಅನುಭವಿಸಲು ನಾ ಸಿದ್ದನಿಲ್ಲ ನಲ್ಲ
ನಿನ್ನ ನೆನಪುಗಳು ಕ್ಷಣ ಕ್ಷಣವೂ
ನನ್ನ ಚಿತ್ರಹಿಂಸೆಗೆ ಗುರಿಪಡಿಸುತ್ತಿವೆ

ನಾ ಹೇಳುವ ಸತ್ಯಗಳು ಅವುಗಳಿಗೆ
ಕೊಂಚ ಮಾತ್ರವೂ ಕರುಣೆತರುತ್ತಿಲ್ಲ
ನೀ ನನ್ನ ತೊರೆದು ಹೋದೆಯಲ್ಲ
ಬಂದು ಅವುಗಳನ್ನು ಸಂತೈಸು

ನೀ ಸ್ವರ್ಗ ಲೋಕದಲ್ಲಿರುವೆಯೋ
ನರಕದಲ್ಲಿ ಸಿಕ್ಕಿಕೊಂಡಿರುವೆಯೋ
ನನ್ನನ್ನು ನಿನ್ನ ಜೊತೆಗೆರಿಸಿಕೋ
ಬಾ ನಲ್ಲ ನಾನೆಚ್ಚು ಕಾಯಲಾರೆ

ಈ ಕಪ್ಪುಕಡಲು ಕೆಕ್ಕರಿಸಿ ನಗುತ್ತಿದೆ
ಆ ಬೆಳ್ಮುಗಿಲು ತಳಮಳ ಸೃಷ್ಟಿಸುತ್ತಿದೆ
ಈ ಬಿರಿದ ನೆಲ ನಡು ನಡುಗಿಸುತ್ತಿದೆ
ತಡಮಾಡಬೇಡ ನಲ್ಲ

ನಾ ತಾಳಲಾರೇ ಇಗೋ
ಈ ಕಡಲಿಗೆ ಆಹಾರವಾಗುತ್ತೇನೆ
ಆ ಮುಗಿಲಿಗೆ ನಿರಾಸೆಯಾಗುತ್ತೇನೆ
ಈ ನಿನ್ನ ಶಿಲುಬೆಗೆ ಬಲಿಯಾಗುತ್ತೇನೆ

ಕೊಂಚ ಸಮಯವಷ್ಟೇ ತಾಳು
ನಾನೇ ನಿನ್ನರಿಸಿ ಬರುತ್ತೇನೆ
ಈ ನೆಲದ ಋಣವ ಕಳೆದುಕೊಳ್ಳುತ್ತೇನೆ
ಇದೋ ಒಂದು ಕ್ಷಣ ಕಾಯುತ್ತಿರು
ನಾನೇ ಬರುತ್ತೇನೆ ..

Friday, May 11, 2012

ಬನ್ನಿ ಬನ್ನಿ ಸ್ನೇಹಿತರೆ


ಬನ್ನಿ ಬನ್ನಿ ಸ್ನೇಹಿತರೇ
ಮನೆಯ ಕದವು ತೆರೆದಿದೆ
ಗೋಡೆ ಮೇಲೆ ದೀಪ ಉರಿದು
ಮೈಮರೆತು ಕಳೆದಿದೆ
ಸ್ವಾಗತವನು ಕೋರಿದೆ

ಕರಿ ಗುಡ್ಡ ತಡಿಯ ಮನೆ
ಜಿನು ಜಿನುಗುವ ನೀರ ಝರಿಯು
ಹಸಿರ ಸಿರಿಯ ಹೊದಿಕೆ ಹೊದ್ದ
ತಂಪು ಇಂಪಿನ ನೆಲೆಯು
ಬನ್ನಿ ಬನ್ನಿ ಸ್ನೇಹಿತರೇ

ಒಲೆಯ ಮೇಲೆ ರಾಗಿ ರೊಟ್ಟಿ
ಬಿಸಿ ಹಾರದ ಭೋಜನವು
ಹಾಲು ತುಪ್ಪ ಸಂಡಿಗೆ
ರುಚಿ ಸವಿಯುವ ಜಾಗವು
ಬನ್ನಿ ಬನ್ನಿ ಸ್ನೇಹಿತರೇ

ನಡು ಗುಡ್ಡವ ಹತ್ತಿ ಬನ್ನಿ
ನೀರ ಝರಿಯ ಜಿಗಿದು ಬನ್ನಿ
ಕಾಲು ಹಾದಿ ತುಳಿದು ಬನ್ನಿ
ಬಂಡೆ ಹತ್ತಿ ಮುಂದೆ ಬನ್ನಿ
ಬನ್ನಿ ಬನ್ನಿ ಸ್ನೇಹಿತರೇ

ಇದೋ ತಂದೆ ಚಾಪೆಯನು
ಚಾಮರವ ವೀಯಲಾರೆ
ಮರೆಯದಿರಿ ಕಾಯುವೆನು
ಇತ್ತ ಒಮ್ಮೆ ಹೆಜ್ಜೆಯೂರಿ
ಬನ್ನಿ ಬನ್ನಿ ಸ್ನೇಹಿತರೇ

ಬದುಕುಘೋರ ಮನಸ್ಸುಭಾರ
ಎಲ್ಲ ಚಿಂತೆ ದೂರ ಮಾಡಿ
ಹಸಿರಮ್ಮನ ಮಡಿಲ ಸೇರಿ
ವಾತ್ಸಲ್ಯದಿ ಮುಳುಗುವ
ನಿಮಗಾಗಿ ಕಾಯುತಿಹೆ 
ಬನ್ನಿ ಬನ್ನಿ ಸ್ನೇಹಿತರೆ ಬನ್ನಿ ಬನ್ನಿ.

Monday, May 7, 2012

ಒಂದು ಸಣ್ಣಕಥೆ


      ಟಿ.ವಿಯಲ್ಲಿ ಯಾವುದೋ ಒಂದು (Action movie) ಆಕ್ಷನ್ ಸಿನಿಮಾ ಓಡುತ್ತಿದೆ. ಗುಂಡಿನ ಮೊರೆತ ಎದೆ ಸೀಳುವಂತ ಶಬ್ದವನ್ನು ಹೊರಹೊಮ್ಮಿಸುತ್ತಿದೆ. ಪರದೆಯ ಮೇಲೆ ಗಟಾನುಗಟಿ ವ್ಯಕ್ತಿಗಳಿಬ್ಬರು ಸೆಣೆಸಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಗುಂಡು ಹಾರಿಸಿಕೊಳ್ಳುತ್ತಿದ್ದಾರೆ. ಒಬ್ಬನಿಗೆ ಬಲಗಾಲಿನ ಮೂಳೆಗೆ ಗುಂಡು ಹೊಕ್ಕಿದೆ. ಮತ್ತೊಬ್ಬನ ಎದೆಯ ಭಾಗದಲ್ಲಿ ರಕ್ತ ಚಿಮ್ಮಿ ಹರಿಯುತ್ತಿದೆ. ಹೀಗಿದ್ದರೂ ಇಬ್ಬರಲ್ಲೂ ಕೊಲ್ಲುವಂತ ಆವೇಶ ಕೊಂಚ ಮಾತ್ರ ಕಡಿಮೆಯಾಗುತ್ತಿಲ್ಲ. ಪರಿಸ್ಥಿತಿ ಉದ್ವಿಜ್ಞವಾಗತ್ತಿದೆ. ಇಬ್ಬರ ಕೈಗಳಲ್ಲೂ (Gun) ಪಿಸ್ತೂಲ್ ಗಳು ಮುಖಾಮುಖಿಯಾಗಿ ನಿಂತಿವೆ ಇನ್ನೇನು ಗುಂಡುಹಾರಿಸಬೇಕು ಎನ್ನುವಾಗಲೇ ಕತ್ತಲಾವರಿಸಿತು. ಬಹುಷಃ (Power) ವಿದ್ಯುತ್ ಹೋಗಿರಬೇಕು. ಮನೆಲ್ಲಿ ಗಾಡಾಂಧಕಾರ ತುಂಬಿದೆ, ಸಣ್ಣ ಗುಂಡುಸೂಜಿ ಬಿದ್ದರೂ ಕೇಳಿಸುವಂತ ಮೌನ  ಆವರಿಸಿದೆ, ಸಿಡಿಲುಬಡಿದಂತ ಶಬ್ದದಲ್ಲಿ ಟೆಲಿಫೋನ್ ರಿಂಗಣಿಸಿತು. ಯಾರು ತೆಗೆಯುವವರಿಲ್ಲ. ಐದತ್ತು ಬಾರಿ ಬಾರಿ ಬಡಿದುಕೊಂಡು ಮೌನಕ್ಕೆ ಶರಣಾಯಿತು. ಮತ್ತೆ ಸ್ಮಶಾಣ ಮೌನ. ಎರಡು ಗಂಟೆಗಳ ಬಳಿಕ ಆ ಮನೆಯಲ್ಲಿ ಮೊದಲಿನಂತೆ ಬೆಳಕು ಹೊತ್ತಿಕೊಂಡು ಯತಾ ಸ್ಥತಿಯಾಯಿತು. ಈಗ ಅಲ್ಲಿ ಯಾವುದೇ ಸದ್ದಿಲ್ಲ. ಟಿ.ವಿಯ ಪರದೆಯ ಮೇಲೆ ಕಪ್ಪು ಬಿಳಿ ಬಣ್ಣದ ಡಾಟ್ಸ್ ಮೂಡುತ್ತಿವೆ. ಮನೆಯಲ್ಲಿ ಗಾಡ ಮೌನ ಬಿಟ್ಟು ಮತ್ಯಾವ ಶಬ್ಧಗಳು ಮೂಡಿಬರುತ್ತಿಲ್ಲ. ಕಣ್ಣು ತೆರೆದು ನೋಡಿದಾಗ ಅದು ಕನಸ್ಸೆಂದು ಗೊತ್ತಾಯಿತು.