ಬನ್ನಿ ಬನ್ನಿ ಸ್ನೇಹಿತರೇ
ಮನೆಯ ಕದವು ತೆರೆದಿದೆ
ಗೋಡೆ ಮೇಲೆ ದೀಪ ಉರಿದು
ಮೈಮರೆತು ಕಳೆದಿದೆ
ಸ್ವಾಗತವನು ಕೋರಿದೆ
ಕರಿ ಗುಡ್ಡ ತಡಿಯ ಮನೆ
ಜಿನು ಜಿನುಗುವ ನೀರ ಝರಿಯು
ಹಸಿರ ಸಿರಿಯ ಹೊದಿಕೆ ಹೊದ್ದ
ತಂಪು ಇಂಪಿನ ನೆಲೆಯು
ಬನ್ನಿ ಬನ್ನಿ ಸ್ನೇಹಿತರೇ
ಒಲೆಯ ಮೇಲೆ ರಾಗಿ ರೊಟ್ಟಿ
ಬಿಸಿ ಹಾರದ ಭೋಜನವು
ಹಾಲು ತುಪ್ಪ ಸಂಡಿಗೆ
ರುಚಿ ಸವಿಯುವ ಜಾಗವು
ಬನ್ನಿ ಬನ್ನಿ ಸ್ನೇಹಿತರೇ
ನಡು ಗುಡ್ಡವ ಹತ್ತಿ ಬನ್ನಿ
ನೀರ ಝರಿಯ ಜಿಗಿದು ಬನ್ನಿ
ಕಾಲು ಹಾದಿ ತುಳಿದು ಬನ್ನಿ
ಬಂಡೆ ಹತ್ತಿ ಮುಂದೆ ಬನ್ನಿ
ಬನ್ನಿ ಬನ್ನಿ ಸ್ನೇಹಿತರೇ
ಇದೋ ತಂದೆ ಚಾಪೆಯನು
ಚಾಮರವ ವೀಯಲಾರೆ
ಮರೆಯದಿರಿ ಕಾಯುವೆನು
ಇತ್ತ ಒಮ್ಮೆ ಹೆಜ್ಜೆಯೂರಿ
ಬನ್ನಿ ಬನ್ನಿ ಸ್ನೇಹಿತರೇ
ಬದುಕುಘೋರ ಮನಸ್ಸುಭಾರ
ಎಲ್ಲ ಚಿಂತೆ ದೂರ ಮಾಡಿ
ಹಸಿರಮ್ಮನ ಮಡಿಲ ಸೇರಿ
ವಾತ್ಸಲ್ಯದಿ ಮುಳುಗುವ
ನಿಮಗಾಗಿ ಕಾಯುತಿಹೆ
ಬನ್ನಿ ಬನ್ನಿ ಸ್ನೇಹಿತರೆ ಬನ್ನಿ ಬನ್ನಿ.
ಬನ್ನಿ ಬನ್ನಿ ಸ್ನೇಹಿತರೆ ಬನ್ನಿ ಬನ್ನಿ.

2 comments:
ಹಸಿರುಟ್ಟ ಪ್ರಕೃತಿಯ ಮಡಿಲ ಮಧ್ಯದಲ್ಲೊಂದು ಮನೆಯ ಮಾಡಿ ಝರಿ ತೊರೆಗಳಿರಲಿ ಸುತ್ತಮುತ್ತಾ. ಗಿರಿ ಕಂದರಗಳು ಅನಾತಿ ದೂರ. ನಾವೆಲ್ಲಾ ಬರುವೆವು ಪ್ರವಾಸದೆಸರಲ್ಲಿ ಪ್ರವಾಹದಂತೆ. ಚಾಮರವ ಬೀಸಬೇಡಿ ಚಾಪೆಯನು ಹಾಸಬೇಡಿ. ಭೂರಮೆಯ ಹಾಸೆ ಸಾಕು. ತಂಗಾಳಿಯ ಪಿಸುಮಾತೆ ಪರಾಕು ನಮಗೆ. ರಾಗಿ ರೊಟ್ಟಿ ಯೊಂದಿಗಿಷ್ಟು ಉಚ್ಚೆಳ್ ಚಟ್ನಿ ಸಾಕಷ್ಟಾಗುವುದು ನಮ್ಮ ಉದರಕೆ. ವಾತ್ಸಲ್ಯದಿಂದ ಕರೆದಿರಲ್ಲ ಅಷ್ಟೇ ಸಾಕು. ದಿನಾಂಕವೊಂದನ್ನು ನಿಗದಿ ಮಾಡಿ ಅಂದೇ ನಾವೆಲ್ಲಾ ನಿಮ್ಮ ಮುಂದೆ.
ನಿಮ್ಮ ಅನಿಸಿಕೆ ತುಂಬಾ ಖುಷಿಕೊಟ್ಟಿತು ಸರ್ ಇದಕ್ಕೆ ಯಾವರೀತಿ ಪ್ರತಿಕ್ರಿಯಿಸಿಸಬೇಕು ತಿಳಿಯುತ್ತಿಲ್ಲ ತುಂಬಾ ಧನ್ಯವಾದಗಳು..
Post a Comment