Sunday, May 27, 2012

ಬೆಲೆ ಏರಿಕೆಯ ಬಿಸಿ


     ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ಗಗನಕ್ಕೆ ಮುಖಮಾಡುತ್ತಿವೆ. ಬಡವನ ಬದುಕು ದುಸ್ತರವಾಗುತ್ತಿದೆ. ಎಲ್ಲಾ ಹಂತದಲ್ಲೂ ಬೆಲೆಗಳಿಗೆ ಕಡಿವಾಣ ಹಾಕಬೇಕಿದ್ದ ಸರ್ಕಾರಗಳು ಹಣದುಬ್ಬದ ನೆಪವೊಡ್ಡಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕಾರ್ಯ ದರ್ಶಿಗಳು ಸಷ್ಟದ ಹೇಳಿಕೆಗಳನ್ನು ನೀಡುತ್ತ ಬಡ ಜನರ ಬದುಕಿನ ಮೇಲೆ ಭ್ರಹ್ಮಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಒಂದೇ ವರ್ಷದಲ್ಲಿ ಹಲವಾರೂ ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಲೇ ಸಾಗುತ್ತಿದ್ದಾರೆ. ಇದರಿಂದ ಎಲ್ಲಾ ದರಗಳು ತಂತಾನೇ ಹೆಚ್ಚಾಗುತ್ತಿವೆ. ಹಿಂದೆ 8 ರೂಗಳಿಗೆ ಸಿಗುತ್ತಿದ್ದ ದೋಸೆ ಇಂದು 30-50 ಗಡಿ ದಾಟುತ್ತಿದೆ. 8 ರೂ ಇರುವ ಪ್ರಯಾಣ ದರ ಇಂದು 30 ರ ಆಸುಪಾಸಿನಂಚಿನಲ್ಲಿದೆ. ಈಗಿನ ಬೆಲೆಗಳ ವೇಗವನ್ನು ಗಮನಿಸುತ್ತಿದ್ದರೆ ಮುಂದೆ ಯಾವ ಸ್ವರೂಪವನ್ನು ಪಡೆಯುತ್ತವೆ ಎನ್ನುವುದರ ದಿಗಿಲು ಮೂಡಿಸುವಂತಿದೆ. ಮೊದಲು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಅತಿ ಹೆಚ್ಚಳ ಅಂದರೆ 50 ಪೈಸೆಯಿಂದ  1 ರೂಗಳಿಗೆ ಸೀಮಿತಗೊಳಿಸುತ್ತಿದ್ದರು. ಆದರೆ ಈಗಿನ ಏರಿಕೆಯನ್ನು ಗಮನಿಸಿದರೆ ಅದು ರೂಪಾಯಿಗಳ ವೇಗದಲ್ಲಿ ಬೆಳೆಯುತ್ತಿವೆ. ಮೊನ್ನೆ ಹೆಚ್ಚಿಸಿದ ಪೆಟ್ರೋಲ್ ದರದ ತೀವ್ರತೆಯನ್ನೊಮ್ಮೆ ಗಮನಿಸಿನೋಡಿ ಹಿಂದಿನ ದಾಖಲೆಗಳನ್ನೆಲ್ಲಾ ಮೀರಿಸಿದಂತೆ 7.50 ರೂಪಾಯಿಗಳ ಹೆಚ್ಚಳ ಕಂಡಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಬೆಲೆಯನ್ನು ಹೆಚ್ಚಿಸಿರುವುದು ಎಂದರೆ ತಪ್ಪಾಗಲಾರದು. ಅದರಂತೆ ಇದೇ ವೇಗದಲ್ಲಿ ಡೀಸಲ್, ಸಿಮೇ ಎಣ್ಣೆ. ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.
     ಇದು ತೀರ ಮದ್ಯಮ ವರ್ಗದ ಜನರ ಬದುಕಿನ ಮೇಲೆ ಬರೆಯೆಳೆದಂತೆ ಅಲ್ಲವೆ?. ಕಡೇ ಪಕ್ಷ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಸುಂಕವನ್ನು ಕಡಿಮೆಗೊಳಿಸಿದರೆ ಈಗಿನ ದರದಲ್ಲಿ ಸ್ವಲ್ಪ ಮಟ್ಟಿನ ವಿನಾಯಿತಿಯನ್ನು ನೀಡಬಹುದಿದೆ. ಆದರೆ ಇದರ ಬಗ್ಗೆ ಕರ್ನಾಟಕದ ಯಾವುದೇ ರಾಜಕೀಯ ಪಕ್ಷಗಳು ತಲೆಕೆಡಿಸಿಕೊಂಡು ಕೂರುವುದಿಲ್ಲ. ಇವರಿಗೆ ಜನರ ಹಿತಾಸಕ್ತಿಗಿಂತ  ತಮ್ಮ ಕುರ್ಚಿಯ ಮೇಲಿನ ವ್ಯಾಮೋಹ ಮತ್ತು ಅಧಿಕಾರದಾಹ ಇಮ್ಮಡಿಯಾಗುತ್ತಿರುವುದು ಬಡವರನ್ನು ಬೀದಿಗೆ ತಳ್ಳುವಂತಾಗುತ್ತಿದೆ. ಇಲ್ಲಿ ಜನರ ಬವಣೆಗಳನ್ನು ಪೂರ್ಣವಾಗಿ ಮರೆತೇ ಹೋಗಿದ್ದಾರೆ ಎಂದರೆ ತಪ್ಪಾಗಲಾರದು. ಗಣಿ ಹಗರಣಗಳು, ವಯಕ್ತಿಕ ಕಲಹಗಳು, ಸಭೆ ಸಮಾರಂಭಗಳಲ್ಲಿನ ನಂಗನಾಚ್ ಪ್ರೈರುತ್ತಿಯನ್ನು ಬೆಳೆಸಿಕೊಂಡು ತಮ್ಮ ಗೌರವಕ್ಕೆ ತಾವೇ ಕುತ್ತುತಂದುಕೊಳ್ಳುತ್ತಿದ್ದಾರೆ, ಸದಾ ಕಿತ್ತಾಟ, ಕಚ್ಚಾಟ, ಕೆಸರೆರಚಾಟ ಇವುಗಳನ್ನು ಬಿಟ್ಟರೆ ಇವರ ಪ್ರಗತಿ ಶ್ಯೂನ್ಯವೆನ್ನಬಹುದು. ಇವರ ನಡುವಳಿಕೆಗಳು ಸಮಾಜಕ್ಕೆ ಮಾರಕವಾದವು. ಇವರ ವರ್ತನೆಯು ಹೀಗೇ ಸಾಗಿದ್ದಲ್ಲಿ ಶ್ರೀ ಸಾಮಾನ್ಯನ ಜೀವನ ಬಾಣಲೆಯಿಂದ ಬೆಂಕಿಗೆ ಬಿಳುವಂತ ಸನ್ನಿವೇಶ ತಳ್ಳಿಹಾಕುವಂತಿಲ್ಲ. ಇನ್ನಾದರೂ ರಾಜಕೀಯ ಪಕ್ಷಗಳು ತಮ್ಮ ಕಲಹಗಳನ್ನು ಮರೆತು ಜನರ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಒತ್ತುಕೊಡಬೇಕಿದೆ. ಅವರ ಕುಂದು ಕೊರತೆಗಳಿಗತ್ತ ಗಮನ ಹರಿಸಿಬೇಕಿದೆ. ಒಂದೆಡೆ ಬರ ತಾಂಡವವಾಡುತ್ತಿದೆ. ಇದರ ಮಧ್ಯದಲ್ಲೇ ಏರುತ್ತಿರುವ ಬೆಲೆಗಳು. ಇದರಿಂದ ಜನ ತತ್ತರಿಸುತ್ತಿದ್ದಾರೆ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇವುಗಳಿಗೆ ಆದಷ್ಟು ಶೀಗ್ರವೇ ಕಡಿವಾಣ ಆಕಬೇಕಿದೆ. ಜನರ ಸಮಸ್ಯಗಳಿಗೆ ಸ್ವಲ್ಪಮಟ್ಟಿಗಾದರೂ ಸ್ವಂದಿಸುವಂತ ಕಾರ್ಯಗಳಾಗಬೇಕಿವೆ. ಇದರಂತೆಯೇ ಜನರೂ ಸಹ ಸುಮ್ಮನಾಗದೆ ತಮ್ಮ ಹಕ್ಕುಗಳಿಗಾಗಿ ಹೋರಾಟದ ಹಾದಿಯನ್ನು ತುಳಿಯುಬೇಕು. ಪ್ರಜಾ ಪ್ರಭುತ್ವದ ಮಹತ್ವವನ್ನು ತಿಳಿದುಕೊಳ್ಳಬೇಕು. ಭ್ರಷ್ಟ ಅಧಿಕಾರಿಗಳ ಬಂಡವಾಳ ಬಯಲಿಗೆ ತರುವ ಪಣತೊಡಬೇಕು. ಚುನಾವಣೆಗಳಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವಂತ ಕೆಲಸವಾಗಬೇಕಿದೆ. ಇಲ್ಲದಿದ್ದಲ್ಲಿ ಅದೋಗತಿಯ ದಿನಗಳು ದೂರವಿಲ್ಲವೆಂದೆನಿಸುತ್ತಿದೆ.

2 comments:

pramod shetty said...

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿ ಸರ್ಕಾರದ ಬೊಕ್ಕಸವನ್ನು ತುಂಬುವ ಕೆಲ್ಸ ಮಾಡ್ತಾ ಇದ್ದಾರೆ ನಮ್ಮ ಈ ರಾಜಕೀಯ ವ್ಯಕ್ತಿಗಳು .ಇರಲಿ ದೇಶಕ್ಕೆ ನಷ್ಟ ಮಾಡದೇ ಬೊಕ್ಕಸ ತುಂಬಲಿ .ಆ ಬೊಕ್ಕಸದಲ್ಲಿ ತುಂಬಿದ ಹಣ ಸಾರ್ವಜನಿಕರಿಗೊಸ್ಕರ ಖರ್ಚಿಯಾದರೆ ನಮಗೂ ಸಂತೋಷ ,ಆದರೆ ಆಗುವುದೇನು .ಸರಕಾರ ಬೊಕ್ಕಸದಲ್ಲಿ ತುಂಬಿಟ್ಟ ಹಣ ಅಧಿಕಾರಿಗಳ ,ರಾಜಕೀಯ ವ್ಯಕ್ತಿಗಳ ಕಿಸೆಗೆ ಸಾಲುವುದಿಲ್ಲ .ಅದೂ ಸಾಲದೇ ಒಂದಿಷ್ಟೂ ವಿದೇಶ ಸಾಲ ಕೂಡ ಇದೆ .ಅದು ನಮ್ಮ ಮೇಲಿರುವ ಇನ್ನೊಂದು ದೊಡ್ಡ ಹೊರೆ . ಪ್ರಜಾಪ್ರಭುತ್ವ ಎಂಬುದು ಹೆಸರಿಗೆ ಮಾತ್ರ ಆಗಿದೆ .ನಮಗೂ ಒಬ್ಬನೇ ಯಾರದ್ರೂ ರಾಜ ಇರ್ತಿದ್ರೆ ಒಳ್ಳೇದಿತ್ತು .

ವಸಂತ್ ಕೋಡಿಹಳ್ಳಿ said...

ನಿಮ್ಮ ಅನಿಸಿಕೆಗೆ ತುಂಬುಮನದ ಧನ್ಯವಾದಗಳು ಪ್ರಮೋದಣ್ಣ...