Saturday, July 28, 2012

ಬಾರಯ್ಯ ಭಾಸ್ಕರನೇ


ಬಾರಯ್ಯ ಭಾಸ್ಕರನೇ
ಎನ್ನ ಮನೆಯಂಗಳಕೆ
ನಿನ್ನ ಆಗಮನಕ್ಕಾಗಿ
ಕಾದು ಕುಳಿತಿಹೆನು

ಮೂಡಣದಿ ಎದ್ದು
ಬಂದು ಬಿಡು ಸುಮ್ಮನೆ
ಕಾವೇರಿಯ ತಟದಲ್ಲೆ
ನನ್ನ ಮನೆಯಿಹುದು

ಜುಳು ಜುಳುನೆ ಹರಿವ
ಝರಿ ಸುಮಧುರ ನಾದ
ಹಕ್ಕಿಗಳ ಚಿಲಿ ಪಿಲಿ
ಸಂಮೋಹನಾ ವೇದ

ಜಿಂಕೆ ಮೊಲ ನವಿಲುಗಳು
ದಾರಿ ತೋರುವುವಯ್ಯ
ಕೋಗಿಲೆ ಬೆಳ್ಳಕ್ಕಿಗಳು
ನಿನ್ನ ಸ್ವಾಗತಿಸುವವು

ಬಂದು ಬಿಡು ಸುಮ್ಮನೆ
ಬಡವನೆಂದ್ ಯೋಚಿಸದಿರು
ಸಕಲ ಭಕ್ಷ್ಯಗಳ ನೀಡಿ
ಭಕ್ತಿಯಿಂದಲೇ ಸತ್ಕರಿಸುವೆ

ಬಾರೆನೆಂದ್ ಎನ್ನದಿರು
ಸಂಜೆ ಕವಿಯುವುದಯ್ಯ
ಮರು ದಿನ ನೀ ಹೊಸಬ
ಮತ್ತೆ ಕರೆಯೆನು ನಾ.

No comments: