Thursday, August 2, 2012

ಪ್ರೀತಿ ಯಾವತ್ತೂ ಮತ್ತೊಬ್ಬರ ಕೈಗೊಂಬೆಯಂತಾಗಕೂಡದಲ್ಲವೆ ?

     "ಪ್ರೀತಿ" ಎಂಬುದು ಬರಿ ಎರಡೇ ಅಕ್ಷರಗಳು ?. ಆದರೆ ಇದರೊಳಗಿನ ಅಗಾಧ ಶಕ್ತಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟದ ಕೆಲಸವೇ ಅನ್ನಿ. ಸಾವಿಗೂ ಮತ್ತು ಬದುಕಿನ ಮಧ್ಯೆ ಇದರ ಪಾತ್ರ ಬಹಳಷ್ಟಿದೆ ಎನ್ನಬಹುದು. ಪ್ರೀತಿಯಿಲ್ಲದ ಸ್ಥಳವಿಲ್ಲ ಪ್ರೀತಿಯಿಲ್ಲದ ಜಗವಿಲ್ಲ. .ಸಲೀಂ ಅನಾರ್ಕಲಿಯಿಂದಿಡಿದು. ದೇವದಾಸು ಪಾರ್ವತಿಯ ತನಕ ಚರಿತ್ರೆಯ ಪುಟಗಳನ್ನು ಬಿಚ್ಚಿ ತೋರಿಸುತ್ತದೆ. ಪ್ರೀತಿ ಎಂಬುದು ತಾಯಿ ಮಗುವಿನಿಂದ ಹಿಡಿದು ಸಖಲ ಜೀವಜಗತ್ತಿಗೂ ಅನ್ವಯವಾಗುತ್ತದೆ. ಪ್ರೀತಿಯಿಲ್ಲದಿದ್ದಲ್ಲಿ ಈ ಜಗವು ಶೂನ್ಯವೆಂಬಂತೆ ಗೋಚರಿಸುತ್ತದೆ ಇದರ ಅಗಾಧತೆಯನ್ನಯ ಅರಿಯುವುದು ಸಾಮಾನ್ಯವಲ್ಲ. ಎಲ್ಲೋ ಇದ್ದ ಎರಡು ಹೃದಯಗಳನ್ನು ಬೆಸೆಯುವಂತೆ ಮಾಡುವುದು, ಎಲ್ಲರನ್ನೂ ನಿರ್ಧಾಕ್ಷಣ್ಯವಾಗಿ ತೊರೆದು ಎರಡು ಕುಂಟುಂಗಳ ನಡುವೆ ಕಲಹವಾಗುವಂತೆ ಮಾಡುವುದು ಪ್ರೀತಿಯ ಕಾರಣಕ್ಕಾಗಿಯೇ. ಪ್ರಿಯತಮನನ್ನು ಕಳೆದುಕೊಂಡು ಅವನ ನೆನಪಲ್ಲಿ ನೊಂದು ಬೆಂದು ಕೊನೆಯಾಗುವಂತೆ ಮಾಡುವುದು  ಇದೇ ಪ್ರೀತಿಯೇ.

ಆದರೆ ನಿಜವಾದ ಪ್ರೀತಿಗೆ ಒಂದು ಮಹತ್ವವಿದೆ ಮನ್ನಣೆಯಿದೆ. ತಾಯಿ ತನ್ನ ಮಗುವನ್ನು ಕಣ್ಣರೆಪ್ಪೆಯಂತೆ ಸಲಹುತ್ತಾಳೆ ಅದು ಶುದ್ಧ ಪ್ರೀತಿ ಎನ್ನಬಹುದು. ಆದರೆ ಅದೇ ತಾಯಿಯನ್ನು ನಡುರಸ್ತೆಯಲ್ಲೋ ಅನಾಥಾಲಯದಲ್ಲೋ ಬಿಟ್ಟುಸಾಗುವಂಥ ಸಾಕಷ್ಟು ನಿದರ್ಶನಗಳನ್ನು ಕಾಣಬಹುದಿದೆ. ಇದು ಯಾವ ರೀತಿಯ ಪ್ರೀತಿಯೋ ಹೇಳುವುದಕ್ಕೆ ಕಷ್ಟವಾಗುತ್ತದೆ. ಕೆಲವರಿಗೆ ಈ ಪ್ರೀತಿ ಬರಿ ಆಕರ್ಷಣೆಯ ಪ್ರತೀಕವಾಗಿರುತ್ತದೆ. ಇದರ ಆಳವನ್ನು ಕೆದಕಿನಿಂತಾಗ ಅಲ್ಲೊಂದು ಅಂತ್ಯ ಸಂಭವಿಸಿರುತ್ತೆ. ಇದೇ ಪ್ರೀತಿಯ ಕಾರಣಕ್ಕಾಗಿ ಸಾಕಷ್ಟು ಮಂದಿ ಪ್ರಾಣಕೊಟ್ಟವರೂ ಇದ್ದಾರೆ. ಇದೇ ಪ್ರೀತಿಯಲ್ಲಿ ಜಯಗಳಿಸಿ ಬಾಳುತ್ತಿರುವವರು ಇದ್ದಾರೆ. ಖಂಡಿತ ಪ್ರೀತಿ ಮಾಡುವುದು ಅಪರಾಧವಲ್ಲ ಆದರೆ ಮುಂದೆ ಸಂಭವಿಸುವ ತೊಡಕುಗಳು ತೊಂದರೆಗಳನ್ನು ಮೆಟ್ಟಿನಿಲ್ಲುವುದು ಅಷ್ಟು ಸುಲಭದ ಮಾತಲ್ಲ. ಆದರೂ ನಂಬಿಕೆಯಿಂದ ನಡೆದು ಕನಸುಗಳಿಗೆ ರೆಟ್ಟಿಕಟ್ಟಿಕೊಂಡು ಹಾರುವವರಿದ್ದಾರೆ. ಕಷ್ಟವೋ ಸುಖವೋ ಒಟ್ಟಿನಲ್ಲಿ ಬಾಳುತ್ತೇವೆ ಎನ್ನುವವರೂ ಇದ್ದಾರೆ. ಈ ಜಗತ್ತಿನಲ್ಲಿ ನಿಜವಾದ ಪ್ರೀತಿಗೆ ಎಂದೂ ಸೋಲಿಲ್ಲ. ಪ್ರೀತಿಗೊಂದು ಶಕ್ತಿಯಿದೆ ಅದು ಯಾರ ಮೇಲೆ ಯಾವ ರೀತಿಯಲ್ಲಾದರೂ ಹುಟ್ಟಬಹುದು. ಹುಟ್ಟಿದ ಪ್ರೀತಿಯನ್ನು ಅವಲೋಕಿಸಿ ವಾಸ್ತವದ ಅರ್ಥವನ್ನು ಅರಿವಾಗುವಂತೆ ತಿಳಿಸುವುದು ಒಳ್ಳೆಯದು. ಹಾಗೇ ಪ್ರೀತಿಯ ಒಳ ಹೊರ ಅಂಥರವನ್ನು ಇಬ್ಬರೂ ಪರಸ್ಪರವಾಗಿ ತಿಳಿದುಕೊಳ್ಳಬೇಕಾಗುವುದು ಮುಖ್ಯ ಎಂಬುದು ಹಲವರ ಅಂಬೋಣ.

ಮುಂದಿನ ಬದುಕು-ಭವಣೆಯ ಬಗ್ಗೆ ಮೊದಲೇ ನಿರ್ಧರಿಸಿ ಒಂದು ಯೋಜನೆಯನ್ನು ಸಿದ್ದಪಡಿಸಿಕೊಂಡು ಮುನ್ನಡೆದರೆ ಒಳ್ಳೆಯದು. ಈಗಿನ ಕಾಲದಲ್ಲಿ ಪ್ರೀತಿ ಒಂದು ಫ್ಯಾಷನ್ ವಸ್ತುವಾಗಿ ಮಾರ್ಪಡುತ್ತಿದೆ. ಯಾವುದೋ ನೋಟ ಮತ್ಯಾವುದೋ ಮಾತು ಮತ್ಯಾರನ್ನೋ ಕಟ್ಟಿನಿಲ್ಲಿಸುತ್ತದೆ. ದಾರಿಯಲ್ಲಿ ಕಲ್ಲು ಮುಳ್ಳುಗಳಿವೆ ಎನ್ನುವುದರ ಅರಿವೂ ಸಹ ಇಲ್ಲದೇನೆಯೇ ನೋಟಗಳು ಒಂದಾಗಿಬಿಡುತ್ತವೆ. ಬದುಕು ಬರಿ ಭ್ರಮೆಯ ರೂಪವಾಗಬಾರದು. ಎರಡು ನಿಮಿಷದ ಕಣ್ಣೋಟ ಯಾವುದೇ ಅಂತ್ಯಕ್ಕೆ ದಾರಿಯಾಗಕೂಡದು. ಯಾರಿಗೂ ತಿಳಿಸದಂತೆ ಓಡಿಹೋಗುವುದು. ಉತ್ತಮ ವ್ಯಕ್ತಿತ್ವವದ ಲಕ್ಷಣವಲ್ಲ. ಪರಿಸ್ಥಿತಿಯ ಬಗ್ಗೆ ಅರಿವಿರಬೇಕು ಎರಡು ಕುಟುಂಬಗಳ ಮುಂದಿನ ಸ್ಥಿತಿ ಗತಿಯ ಬಗ್ಗೆ ಮನವರಿಕೆಯಿರಬೇಕು. ವರ್ಷಗಳ ಕಾಲ ಸಾಕಿ ಸಲುಹಿದ ತಂದೆ ತಾಯಿಯರಿಗೂ ತಿಳಿಸದೆ ಬಿಟ್ಟುಹೋಗುವುದು ಅವಿವೇಕಿತನವಲ್ಲದೆ ಮತ್ತೇನು?. ಸಾಧ್ಯವಾದಷ್ಟು ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಪಾಲಕರಿಗೆ ಮನದಟ್ಟು ಮಾಡಿಕೊಡಬೇಕು. ಸಮಾಜ ಎಷ್ಟು ಶಿಕ್ಷಣವನ್ನು ಪಡೆಯುತ್ತಿದೆಯೋ ಅದಕ್ಕೆ ಎರಡರಷ್ಟು ಜಾತಿ ವ್ಯವಸ್ತೆಗೆ ಅಂಟಿಕೊಳ್ಳುತ್ತಿದೆ. ಇದರಿಂದ ವರದಕ್ಷಣೆ ಅನಾಚಾರಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇಂಥ ವಿಷಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವವರು ಸುಶಿಕ್ಷಕರೇ ಎನ್ನಬುದು, ಅದರಂತೆ ಜಾತಿಯ ಬೇರುಗಳು ಬಹಳ ಆಳವಾಗಿ ಹೂತುಬಿಟ್ಟಿವೆ. ಈ ಬೇರಿನ ಮೂಲವನ್ನು ಹುಡುಕುತ್ತಾ ಸಾಗುವುದು ದಡ್ಡತನವಲ್ಲದೆ ಬೇರೇನು ಇಲ್ಲ.

ಸಭೆ ಸಮಾರಂಭಗಳಲ್ಲಿ ಜಾತಿಯತೆಯನ್ನು ಮೆಟ್ಟಿನಿಲ್ಲುವಂಥ ಜನನಾಯಕರು ಸಂಜೆಯಾದಕೂಡಲೇ  ತಮ್ಮ ವರಸೆಯನ್ನು ಬದಲಿಸಿಬಿಡುತ್ತಾರೆ. ಅವರೂ ಸಹ ಕಟ್ಟುಪಾಡುಗಳಿಗೆ ಸಿಕ್ಕಿ ನಲುಗುತ್ತಿರುತ್ತಾರೆ. ಅಂತರ್ಜಾತಿ ವಿವಾಹಗಳಿಗೆ ಅವರು ಸುತರಾಂ ಒಪ್ಪುವುದಿಲ್ಲ. ಆದರೂ ಪರಿಸ್ಥಿತಿಯ ವಾಸ್ತವವನ್ನು ವಿವರಿಸುವುದು ಉತ್ತಮ ಲಕ್ಷಣ. ನಾಳೆ ಅದು ಮತ್ತೊಂದು ಅಂತ್ಯಕ್ಕೆ ನಾಂದಿಯಾಗದಿರಬೇಕಲ್ಲವೆ. ಒಂದು ವೇಳೆ ಇವರು ಒಪ್ಪದಿದ್ದಲ್ಲಿ ಮುಂದಿನ ಬೆಳವಣಿಗೆಗೆ ಅವರಿಬ್ಬರೆ ಸೀಮಿತವಾಗುವುದು ಸರಿಯಲ್ಲ. ಸಮಾಜವನ್ನು ತಿದ್ದುವಂತ ಕ್ರಿಯೆಯಲ್ಲಿ ಎಲ್ಲರ ಪಾತ್ರ ಬಹಳಷ್ಟಿದೆ. ಸಜಾಜ ಚಿಂತಕರು ಬುದ್ದಿ ಜೀವಿಗಳು ಮೂಡ ಮನಗಳ ಪರಿವರ್ತನೆತ್ತ ಶ್ರಮವಹಿಸಬೇಕಿದೆ. ಎಲ್ಲಾ ಪ್ರೀತಿಯೂ ಮೊಗ್ಗಾಗಿ ಅರಳುವುದಿಲ್ಲ. ಎಲ್ಲರ ಹೃದಯದಲ್ಲೂ ಅಣತೆ ಬೆಳಗುವುದಿಲ್ಲ. ಆದ್ದರಿಂದ ಬಾಳ ಸಂಗಾತಿಯ ಆಯ್ಕೆಯಲ್ಲಿ ಇಬ್ಬರಲ್ಲೂ ಜಾಗರೂಕತೆಯಿರಬೇಕು. ಮುಂದಿನ ಭವಿಷ್ಯಕ್ಕೆ ಅದುವೇ ಮೆಟ್ಟಿಲುಗಳಂತಿರಬೇಕು. ಮುಂದಿನ ಬೆಳವಣಿಗೆಗೆ ಅದು ಮೆಟ್ಟಿಲಾಗುವಂತಿರಬೇಕು. ಪರಸ್ಪರ ಕೂಡಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ. ಜೀವನದ ಹೆಜ್ಜೆಗಳನ್ನಿಡುವ ಸಂದರ್ಭದಲ್ಲಿ ಅಪ್ಪಿ ತಪ್ಪಿ ತಪ್ಪು ಹೆಜ್ಜೆಯನ್ನಿಟ್ಟಲ್ಲಿ ಅಂಥ ಪ್ರೀತಿಯನ್ನು ಉಳಿಸಿಕೊಳ್ಳುವುದು ಹಳಷ್ಟು ಕಷ್ಟ. ಅದರಂತೆ ಈ ಪ್ರೀತಿ ಯಾವತ್ತೂ ಶಾಶ್ವತವಾಗಿರಬೇಕೆ ವಿನಹಃ ಮತ್ತೊಬ್ಬರ ಕೈಗೊಂಬೆಯಂತಾಗಕೂಡದಲ್ಲವೆ ?.

No comments: