Monday, August 13, 2012

ಬಂಧ ಮುಕ್ತಿ


ನನಗೂ ಉಂಟಂತೆ
ಕೈ, ಕಾಲು ಮೂಳೆಗಳು
ಅದಗಂಟಿರುವ ಚರ್ಮ
ಮೈಯೊಳಗಿನ ನಾಡಿ ಮಂಡಲ
ಮಾತಾಡುವ ಬಾಯಿ
ನೋಡುವ ಕಣ್ಣು
ಯೋಚಿಸಲೊಂದು ಮೆದುಳು

ಇಷ್ಟೆಲ್ಲಾ ಇದ್ದರೂ
ಚಿತ್ರಕಾರನ ಕುಂಚದಲ್ಲಿ ಅರಳಿದ
ಚತ್ರದಂತೆ ಎಲ್ಲವೂ ಸ್ಥಬ್ದ
ಕೈ, ಕಾಲು ಮೂಳೆಗಳು ಸ್ಥಬ್ದ
ಮೈಯೊಳಗಿನ ನಾಡಿ ಮಂಡಲ,
ಮಾತಾಡುವ ಬಾಯಿ,
ನೋಡುವ ಕಣ್ಣು ಸ್ಥಬ್ದ
ಯೋಚಿಸುವ ಮೆದಿಳೂ ಸಹ ಸ್ಥಬ್ದವೆ

ನನಗೆ ಅರ್ಥವಾಗುತ್ತಿಲ್ಲ
ಈ ರೀತಿಯ ಘನೀ ಭವನದ
ಸ್ಥಿತಿಗೆ ಕಾರಣರಾರು?
ಸೃಷ್ಟಿಯ ಲಯವೆ?
ಚಿತ್ರಕಾರನ ಕುಂಚವೆ?
ಸಮಾಜದ ಒಡಕುಗಳೆ?
ಸಮ್ಮೋಹಿನಿ ಪ್ರಭಾವವೇ?

ನಾ ಎದ್ದು ನಿಲ್ಲಬೇಕಿದೆ
ಈ ಜಗವ ಅರಿಯಬೇಕಿದೆ
ಇಲ್ಲಿನ ಮಾರ್ಪಾಡುಗಳ ತಿದ್ದಬೇಕಿದೆ
ಇಲ್ಲಿನ ಸಂಕೋಲೆಗಳ ಕಳಚಬೇಕಿದೆ
ಸಮಾನತೆಯ ಬೆಳಕ ಚೆಲ್ಲಬೇಕಿದೆ

ಓ ಬಾ, ಬಾ, ಗೆಲುವೆ!
ಬಾ, ಬಾ, ಸ್ವಾತಂತ್ರ್ಯವೇ!
ಬಾ, ಬಾ, ಸಮಾನತೆಯೇ!
ಬಂದೆನ್ನ ಆವರಿಸು
ನನ್ನಂತ ಸಹಸ್ರಾರು
ಮಂದಿಯೊಳಗೂ ಪ್ರಜ್ವಲಿಸು
ಎಲ್ಲರೂ ಮನುಷ್ಯರೇ ಎಂಬ 
ಸುಜ್ಞಾನದ ಜ್ಯೋತಿಯನ್ನು 
ಎಲ್ಲೆಡೆಯೂ ಬೆಳಗಿಸು

4 comments:

ಶ್ರೀಗುರುವೇ.. said...

ಹೌದು ಬಂಧಮುಕ್ತವಾಗಬೇಕಿದೆ

sunaath said...

ಉತ್ತಮ ಆಶಯದ ಉತ್ತಮ ಕವನ!

ವಸಂತ್ ಕೋಡಿಹಳ್ಳಿ said...

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಶ್ರೀಗುರು ಸರ್...

ವಸಂತ್ ಕೋಡಿಹಳ್ಳಿ said...

ತುಂಬಾ ತುಂಬಾ ಧನ್ಯವಾದಗಳು ಸುನಾಥ್ ಸರ್...