Tuesday, December 31, 2013

ಹೊಸ ವರುಷ

ನಾನು ಕಳೆದುಕೊಳ್ಳುತ್ತೇನೆ
ವರುಷಕೊಮ್ಮೆ ಪೊರೆಯನ್ನು
ಇದು ಕೆಲವರಿಗೆ
ಸೋಜಿಗವಾಗಿ, ಸಂತೋಷವಾಗಿ
ದುಃಖದ ಕರಿ ನೆರಳಾಗಿ
ಸಿಹಿನೀರ ಕಡಲಾಗಿ
ನವಿರಾದ ನೆನಪಾಗಿ
ಕಾಡದೇ ಇರದು

ಆದರೆ ವಾಸ್ತವಕ್ಕೂನನಗೂ
ಯಾವುದೇ ಸಂಬಂಧವಿಲ್ಲ
1 ರಿಂದ 12 ಡರ ಲೆಕ್ಕದಲ್ಲಿ
365 ದಿನಗಳ ಪಕ್ವವಾದ ವಿಚಾರ
ಕೂಡಿ, ಕಳೆದು, ಎಣಿಸಿ
ಗುಣಿಸಿ, ಭಾಗಿಸಿ
ಸುಮ್ಮನಾದಾಗ ಅದು
ಕಾಲವು ಒಂದಂಕಿಯಷ್ಟು
ಮುಂದುವರೆದ ವಿಚಾರ

ಕುಣಿಯಿರಿ ನಲಿಯಿರಿ
ಹಾಗೇಯೇ ನನ್ನ
ಶಪಿಸುವುದನ್ನೂ ಮರೆಯದಿರಿ
ನಾನೊಂದು ಏಕಾಂತ
ನಾನೊಂದು ಭೀಕರ
ನಾನೊಂದುಯ ಬದಲಾವಣೆ
ನಾನೊಂದು ಚಲನೆ
ನಾನೊಂದು ಜೀವವಿಲ್ಲದ ಹರುಷ
ನಿಮಗೆಲ್ಲರಿಗೂ ಹೊಸ ವರುಷ.


ಚಿತ್ರಕೃಪೆ: http://s.wallpaperhere.com/



Monday, December 23, 2013

ಹೇಗೆ ಬರೆಯಲಿ ನಾ ?

ಕಾವ್ಯ ಹುಟ್ಟುವ ನಿಮಿಷದಲ್ಲಿ
ಕವನ ಕಟ್ಟುವ ಸಮಯದಲ್ಲಿ
ಈ ಕೊರೆವ ಚಳಿ
ನನ್ನ ಪದಗಳಿಗೆ ಕಂಬಳಿ ಹೊದಿಸಿ
ಬಿಸಿ ಕನಸ್ಸುಗಳ ಬಿಡಿಸಿ
ಬೆನ್ನು ತಟ್ಟಿ ನಿದ್ರಿಸುತ್ತಿದೆ
ಹೀಗಿದ್ದರೆ ನಾ !
ಹೇಗೆ ಬರೆಯಲಿ ಪದಗಳನ್ನು ?