Tuesday, December 31, 2013

ಹೊಸ ವರುಷ

ನಾನು ಕಳೆದುಕೊಳ್ಳುತ್ತೇನೆ
ವರುಷಕೊಮ್ಮೆ ಪೊರೆಯನ್ನು
ಇದು ಕೆಲವರಿಗೆ
ಸೋಜಿಗವಾಗಿ, ಸಂತೋಷವಾಗಿ
ದುಃಖದ ಕರಿ ನೆರಳಾಗಿ
ಸಿಹಿನೀರ ಕಡಲಾಗಿ
ನವಿರಾದ ನೆನಪಾಗಿ
ಕಾಡದೇ ಇರದು

ಆದರೆ ವಾಸ್ತವಕ್ಕೂನನಗೂ
ಯಾವುದೇ ಸಂಬಂಧವಿಲ್ಲ
1 ರಿಂದ 12 ಡರ ಲೆಕ್ಕದಲ್ಲಿ
365 ದಿನಗಳ ಪಕ್ವವಾದ ವಿಚಾರ
ಕೂಡಿ, ಕಳೆದು, ಎಣಿಸಿ
ಗುಣಿಸಿ, ಭಾಗಿಸಿ
ಸುಮ್ಮನಾದಾಗ ಅದು
ಕಾಲವು ಒಂದಂಕಿಯಷ್ಟು
ಮುಂದುವರೆದ ವಿಚಾರ

ಕುಣಿಯಿರಿ ನಲಿಯಿರಿ
ಹಾಗೇಯೇ ನನ್ನ
ಶಪಿಸುವುದನ್ನೂ ಮರೆಯದಿರಿ
ನಾನೊಂದು ಏಕಾಂತ
ನಾನೊಂದು ಭೀಕರ
ನಾನೊಂದುಯ ಬದಲಾವಣೆ
ನಾನೊಂದು ಚಲನೆ
ನಾನೊಂದು ಜೀವವಿಲ್ಲದ ಹರುಷ
ನಿಮಗೆಲ್ಲರಿಗೂ ಹೊಸ ವರುಷ.


ಚಿತ್ರಕೃಪೆ: http://s.wallpaperhere.com/



3 comments:

sunaath said...

ಜೀವವಿದ್ದವರಿಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು!

- ವಸಂತ್ ಕೋಡಿಹಳ್ಳಿ said...

ತಮಗೂ ಸಹ ಹಾರ್ದಿಕ ಶುಭಾಶಯಗಳು ಸರ್

kavya said...

Thumbs chennagide sir nim kavana