Sunday, November 9, 2014

ಒಂದಷ್ಟು ಚುಟುಕುಗಳು - 2

ಬಿಲ್ಲು ಮತ್ತು ರೈಫಲ್

ಅವಳ ನೋಟ ನೂರೆಂಟು
ಬಿಲ್ಲುಗಳಿಗೆ ಸಮವಂತೆ..!!

ಅಯ್ಯೋ ಬಿಡಿ.!
ಒಂದು ರೈಫಲ್ ಮುಂದೆ ಅವಳ
ಯಾವ ಆಟವೂ ನಡೆಯೋದಿಲ್ಲ...!!



ನಾಟಕ

ನಾಟಕ ಒಂದರಲ್ಲಿ ಒಳ್ಳೆ
ಪಾತ್ರದಾರಿ ಆಗಬೇಕೆಂದುಕೊಂಡೆ..!

ಕಡೆಗೆ ನನ್ನ ಜೀವನವೇ
ನಾಟಕ ರಂಗವಾಗಿ ಮಾರ್ಪಟ್ಟಿತು...!!



ಮಳೆ

ಬೀಳುತ್ತಿದ್ದ ಮಳೆಗೆ ನನ್ನ
ದೇಹ ಮಾತ್ರ ತಣಿಯುತ್ತಿತ್ತು..!

ಮನಸ್ಸು ಮಾತ್ರ ಅವಳ
ನೆನೆದು ನಲಿಯುತ್ತಿತ್ತು...!!



ಬೆವರು

ಕೃಷಿಕನ ಕಷ್ಟದ ಬೆವರು
ಸುವಾಸನೆ ಬೀರುತ್ತಿದ್ದರೆ..!

ಧನಿಕನ ಸುಖದ ಸೆಂಟಿನ
ಘಾಟು ಗಬ್ಬೆದ್ದು ನಾರುತ್ತಿತ್ತು...!!



ಭೂಕಂಪ

ಅವಳು ಕುಣಿದರೆ
ಇಡೀ ಭೂಮಿಯೇ ನಡುಗುತ್ತಿತ್ತು..!

ಸಾಧ್ಯವೇ ಇಲ್ಲ.! ಆ ಕ್ಷಣದಲ್ಲಿ ಬಹುಷಃ
ಭೂಕಂಪವಾಗಿರುವ ಸಾಧ್ಯತೆಯಿರಬಹುದು...!!


ನಕ್ಷತ್ರಗಳು

ಆಕಾಶದಲ್ಲಿ ನಕ್ಷತ್ರಗಳು
ಬಹಳ ಅಂದವಾಗಿ ತೋರುತ್ತವೆ..!

ಅವುಗಳಿಗೆ ಬೇಸರವಾದಾಗ
ಭೂಮಿಗೂ ಬಂದು ಅಪ್ಪಳಿಸುತ್ತವೆ...!!



ಯೋಚನೆಗಳು

ಯೋಚನೆಗಳು
ಸದಾ ನಮ್ಮ ಸುತ್ತ
ಸುಳಿದಾಡುತ್ತಿರುತ್ತವೆ
ಅವು ಆಗೆಯೇ ಇರಬೇಕು..!

ಒಂದು ವೇಳೆ
ಅವು ಸುತ್ತದೇ ಸತಾಯಿಸಿದರೆ
ಅಲ್ಲಿಗೆ ಬದುಕು
ಪರಿ ಸಮಾಪ್ತಿ...!!




                                                               -ವಸಂತ್ ಕೋಡಿಹಳ್ಳಿ

2 comments:

ಮನಸಿನಮನೆಯವನು said...

ಮಳೆಗೆ ದೇಹವನ್ನಷ್ಟೇ ನೆನೆಸುವ ಶಕ್ತಿ ಇದೆ, ಆದರೆ ಆ ನೆನಪುಗಳಿಗೆ ಮನಸ್ಸನ್ನು ನೆನೆಸುವ ಶಕ್ತಿ ಇದೆ

- ವಸಂತ್ ಕೋಡಿಹಳ್ಳಿ said...

ಖಂಡಿತ ನಿಮ್ಮ ಮಾತು ಸತ್ಯ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..