Sunday, November 2, 2014

ಒಂದಷ್ಟು ಚುಟುಕುಗಳು

ಕಟ್ಟಿಂಗ್ ಶಾಪ್

ಹೇರ್
ಕಟ್ಟಿಂಗಿಗಾಗಿ
ಕನ್ನಡಿಯ
ಮುಂದೆ ಕುಳಿತಾಗ

ಎದುರಿಗಿದ್ದ
ಕನ್ನಡಿ ನನ್ನ
ವೃತ್ತಾಂತವನ್ನೆಲ್ಲಾ
ಲೆಕ್ಕಾಚಾರ ಮಾಡುತ್ತಿತ್ತು



ಜ್ಞಾನಿ ಮತ್ತು ರಾಜಕಾರಣಿ

ಅವನೆಂದ
ನಾನು ಮಹಾ
ಜ್ಞಾನಿಯಾಗಬೇಕು.!

ಅವನ ಮಗನೆಂದ
ನಾನೂ ಸಹ ಮಹಾ
ರಾಜಕಾರಣಿಯಾಗಲೇ ಬೇಕು..!!



ಕವಿ ಮತ್ತು ಕಥೆ

ನಾನು
ಕವಿಯಾಗಲು
ಹೊರಟೆ.!

ಅವಳು
ಕಥೆಯಾಗಿ
ಹೋದಳು..!!



ನದಿ ಮತ್ತು ಪ್ರವಾಹ

ನದಿಯಾಗಿ
ಅವಳು
ನನ್ನ ದಡ
ಮುಟ್ಟಿಸುತ್ತಾಳೆ
ಎಂದುಕೊಂಡೆ.!

ಏಕೋ..,!
ಗೊತ್ತಾಗಲಿಲ್ಲ
ಪ್ರವಾಹವಾಗಿ
ಅಂಡಮಾನ್
ನಿಕೋಬಾರ್ ನತ್ತ
ಎಸೆದು ಹೋಗಿದ್ದಾಳೆ..!!



ಅವಳು ನಾನು

ಅವಳು
ಕೊಡೆಯಿಡಿದು
ವಯ್ಯಾರದಿಂದ
ನಡೆದು
ಹೊರಟಳು

ನಾನು
ಕೊಡವಿಡಿದು
ದಿನವಿಡೀ
ನೀರಿಗಾಗಿ
ಕಾದು ಕಳೆದೆ..!!



ಬಣ್ಣದ ಆಗಸ

ನಮ್ಮ
ಬದುಕೊಂದು
ಬಣ್ಣದ ಆಗಸದಂತೆ

ಆಯ್ಯೋ ಬಿಡಿ
ದಿನವಿಡೀ ಮೋಡ
ಮುಚ್ಚಿಕೊಂಡೇ
ಸತಾಯಿಸುತ್ತಿದೆ.



ರಂಗೋಲಿ ಸ್ಪರ್ಧೆ

ಅಂಗಳದ ತುಂಬಾ
ಬಣ್ಣ ಬಣ್ಣದ
ರಂಗೋಲಿಗಳ ಚಿತ್ತಾರ.!

ಆ ದಿನದ
ರಂಗೋಲಿ ಸ್ಪರ್ಧೆ
ಅಲ್ಲಿಗೆ ಮುಕ್ತಾಯವಾಗಿತ್ತು..!!



ಮೋಹ

ಅವಳ ಮೋಹಕ್ಕೆ
ಮನ ಸೋಲದವರೇ
ಇಲ್ಲವಾಗಿದ್ದರಂತೆ.!

ಸಧ್ಯ ಈಗವಳು
ಮ್ಯೂಸಿಯಂ ಒಂದರಲ್ಲಿ
ಮೂರ್ತಿಯಾಗಿ ಸೊರಗುತ್ತಿದ್ದಾಳೆ..!!



ನಕ್ಲೆಸ್

ಅವಳ ಕೋಪ
ಮಿತಿ ಮೀರಿ
ಹೋದಾಗ.!

ಆ ಕೋಪವನ್ನು
ಒಂದು ನಕ್ಲೆಸ್
ತಣ್ಣಗಾಗಿಸಿತ್ತು..!!



ಮಂಜುಗಡ್ಡೆ ಮತ್ತು ಮಂಜು

ಅವನು
ಮಂಜುಗಡ್ಡೆಯಲ್ಲಿ ಸಿಲುಕಿ
ಒದ್ದಾಡುವಂತಿದ್ದರೆ.!

ಇವಳು
ಮಂಜಿನಲ್ಲಿ ಸಿಲುಕಿ
ನಲಿದಾಡುತ್ತಾಳೆ..!!



ಕಾಮನಬಿಲ್ಲು

ಆಗ ವರ್ಷದಲ್ಲಿ
ಒಮ್ಮೆಯಾದರೂ ಕಾಮನಬಿಲ್ಲನು
ಕಾಣಬಹುದಿತ್ತು.!

ಈಗ ವರ್ಷವಿಡೀ
ಬರಿ ಬೀಧಿಕಾಮಣ್ಣರನ್ನೇ ಮಾಧ್ಯಮಗಳಲ್ಲಿ
ಕಾಣುವಂತಾಗಿದೆ..!!


                                                               -ವಸಂತ್ ಕೋಡಿಹಳ್ಳಿ


6 comments:

ಮನಸಿನಮನೆಯವನು said...

ಕವಿ ಮತ್ತು ಕಥೆ ಇಷ್ಟವಾಯಿತು

sunaath said...

ನಿಮ್ಮ ಚುಟುಕಗಳ ವೈಶಿಷ್ಟ್ಯವೆಂದರೆ, ಚುಟುಕದ ಮೊದಲ ಭಾಗ ಒಂದು ಭಾವವನ್ನು ಹೇಳುತ್ತಿದ್ದಾಗ, ಎರಡನೆಯ ಭಾಗವು ಥಟ್ಟನೆ ಒಂದು ತಿರುವನ್ನು ನೀಡುತ್ತದೆ. ಇದು ನನಗೆ ತುಂಬ ಮೆಚ್ಚಿಕೆಯಾಯಿತು.

- ವಸಂತ್ ಕೋಡಿಹಳ್ಳಿ said...

ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ ಧನ್ಯವಾದಗಳು ಮನಸಿನಮನೆಯವರೇ....

- ವಸಂತ್ ಕೋಡಿಹಳ್ಳಿ said...

ನಿಮ್ಮ ಮೆಚ್ಚುಗೆಯ ಮಾತುಗಳು ನನ್ನ ಬರಹಗಳನ್ನು ಮತ್ತಷ್ಟು ಧ್ವಿಗುಣಗೊಳಿಸುವಂತೆ ಮಾಡುತ್ತಿವೆ ನಿಮ್ಮ ಅಭಿಪ್ರಾಯಕ್ಕೆ ತುಂಬು ಮನದ ಧನ್ಯವಾದಗಳು ಸುನಾಥ್ ಸರ್...

DIVYA M said...

ಚುಟುಕು ಇಷ್ಟವಾಯ್ತು

- ವಸಂತ್ ಕೋಡಿಹಳ್ಳಿ said...

ಪ್ರತಿಕ್ರಿಯೆಗೆ ಧನ್ಯವಾದಗಳು ದಿವ್ಯರವರೆ.