Wednesday, November 12, 2014

ಪುಸ್ತಕ ಬಿಡುಗಡೆ

           ಇದೇ ತಿಂಗಳ 14 ರಂದು ಬೆಳಗ್ಗೆ 11.00 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದವರು ನನ್ನ ಕವನ ಸಂಕಲನ "ನಾ ಕಂಡ ಜಗತ್ತು" ಮತ್ತು ಇನ್ನಿತರ ಹಲವು ಪುಸ್ತಕಗಳನ್ನು ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು ಇಲ್ಲಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಇದು ನನ್ನ ಬಹುದಿನಗಳ ಕನಸ್ಸು ಕೂಡ ಈಗ ನನಸಾಗುತ್ತಿದೆ. ತುಂಬಾ ಶ್ರಮಪಟ್ಟು ಮುದ್ರಣಗೊಳಿಸಿದ ನನ್ನ ಪುಸ್ತಕವನ್ನೂ ಒಳಗೊಂಡಂತೆ ಇನ್ನಿತರ ಹಲವು ಕವಿಗಳ ಕೃತಿಗಳನ್ನು "ನಯನ ಸಭಾಂಗಣ"ದಲ್ಲಿ ಶ್ರೀಮತಿ ಉಮಾಶ್ರೀ , ಸನ್ಮಾನ್ಯ ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ಡಾ. ಶಾಲಿನಿ ರಜನೀಶ್, ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಮುಖ್ಯ ಅತಿಥಿ ಶ್ರೀ ಕೆ.ಎ.ದಯಾನಂದ, ಮಾನ್ಯ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷತೆ ಡಾ.ಬಂಜಗೆರೆ ಜಯಪ್ರಕಾಶ ಇನ್ನೂ ಹಲವರನ್ನೊಳಗೊಂಡತೆ ಕಾರ್ಯಕ್ರಮ ನಡೆಯಲಿದೆ. ನನ್ನ ಪುಸ್ತಕಕ್ಕೆ ಪುಖಪುಟವನ್ನು ಮಾಡಿಕೊಟ್ಟ ದಯಾನಂದ್.ಟಿ.ಕೆ ಅವರಿಗೆ ನನ್ನ ತುಂಬು ಮನದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈ ಸುಸಂದರ್ಭದಲ್ಲಿ ನಿಮ್ಮೆಲ್ಲರ ಆಶೀರ್ವಾದವನ್ನೂ ಸಹ ಕೋರಲಿಚ್ಚಿಸುತ್ತೇನೆ ವಂದನೆಗಳೊಂದಿಗೆ.

                                                                      -ವಸಂತ ಕುಮಾರ್ ಆರ್ 
                                                                      ಕೋಡಿಹಳ್ಳಿ

5 comments:

sunaath said...

ವಸಂತಕುಮಾರರೆ,
ನಿಮಗೆ ಹೃತ್ಪೂರ್ವಕ ಶುಭಾಶಯಗಳು. ನಿಮ್ಮಿಂದ ಇನ್ನೂ ಅನೇಕ ಪುಸ್ತಕಗಳು ಹೊರಬರಲಿ ಎಂದು ಹಾರೈಸುತ್ತೇನೆ.

- ವಸಂತ್ ಕೋಡಿಹಳ್ಳಿ said...

ನಿಮ್ಮತಂಹ ಹಿರಿಯರ ಆರ್ಶೀವಾದವೇ ನನಗೆ ಶ್ರೀರಕ್ಷೆ ಸರ್ ಈ ಮೊದಲಿನಿಂದಲೂ ನನಗೆ ನೀವು ತುಂಬಾ ಪ್ರೋತ್ಸಾಹವನ್ನು ಕೊಡುತ್ತ ಬರುತ್ತೀದ್ದೀರಾ ಇದಕ್ಕೆ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

Tejaswi said...

ಅಭಿನಂದನೆಗಳು ವಸಂತ್, ಉತ್ತಮ ಸಾಧನೆ.
ಈ ಲಯವನ್ನು ಹಾಗೆಯೇ ಮುಂದುವರಿಸಿ.

- ವಸಂತ ಕುಮಾರ್ ಆರ್, ಕೋಡಿಹಳ್ಳಿ said...

ಧನ್ಯವಾದಗಳು Tejaswi ಸರ್

NAGARAJ NAYAK said...

ಅಭಿನಂದನೆಗಳು ವಸಂತ್, ಉತ್ತಮ ಸಾಧನೆ. GreAT!